ಮಧ್ಯಪ್ರದೇಶ : ಬೈಕ್ ಸವಾರನಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಅದೃಷ್ಟವಾಶಾತ್ ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಗೋರ್ವಿಯಲ್ಲಿ ಹೆದ್ದಾರಿಯಲ್ಲಿ ನಡೆದಿದೆ.
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರನ ಜೊತೆ ಬೈಕ್ ಟ್ರಕ್ ಚಕ್ರದಡಿ ಬಿದ್ದಿತ್ತು. ಸಮಯಕ್ಕೆ ಸರಿಯಾಗಿ ಟ್ರಕ್ ಸವಾರ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸವಾರರು ಬದುಕುಳಿದಿದ್ದಾನೆ. ಈ ಕುರಿತಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
सड़क पार करते समय सामने से आ रही ट्रक के नीचे आ गया बाइक सवार#Madhyapradesh pic.twitter.com/zyKpUr6YOr
— Rahul Sankrityayan (@sankrityaayan) July 23, 2022
ಸೋಲಾಂಗ್ ಗ್ರಾಮದ ನಿವಾಸಿ ಮಹೇಂದ್ರ ವೈಶ್ ಎಂಬಾತ ತನ್ನ ಸಹಚರನೊಂದಿಗೆ ಬೈಕ್ನಲ್ಲಿ ಗೋರ್ಬಿ ಬಜಾರ್ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ತಿರುವಿನಲ್ಲಿ ಟ್ರಕ್, ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯ ನಂತರ, ಮಹೇಂದ್ರ ವೈಶ್ ಅವರು ಬದುಕುಳಿದಿದ್ದಾರೆ ಎಂದು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ʼಜಪಾನಿನ ಜನರುʼ ಏಕೆ ಹೆಚ್ಚು ಕಾಲ ಬದುಕುತ್ತಾರೆ? 5 ಪ್ರಮುಖ ಕಾರಣಗಳ ʼ ಸ್ಪೋಟಕ ರಹಸ್ಯʼ ಬಹಿರಂಗ | Japanese people