ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕವು ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ದಿ ಮತ್ತು ವೃತ್ತಿಪರ ಉನ್ನತೀಕರಣಕ್ಕೆ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಆದರೆ ಇತ್ತೀಚೆಗೆ ಕೆಲಸ ಸ್ವಹಿತಾಸಕ್ತಿ ಪತ್ರಕರ್ತರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೆಸರಿನಲ್ಲಿ ಪರ್ಯಾಯ ಸಂಘಟನೆಯನ್ನು ಹುಟ್ಟು ಹಾಕುವ ಮೂಲಕ ಪತ್ರಕರ್ತರ ಸದಸ್ಯರಲ್ಲಿ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್.ರವಿಕುಮಾರ್ (ಟೆಲೆಕ್ಸ್) ಹೇಳಿದರು.
Viral Video: OMG.. ನವಜಾತ ಶಿಶು, ತಾಯಿಯ ಜೊತೆ ಸಂಸ್ಕೃತ ಶ್ಲೋಕ ಪಠಣೆ: ವೀಡಿಯೋ ಸಿಕ್ಕಾಪಟ್ಟೆ ವೈರಲ್.!
ಸುದ್ದಿಗೋಷ್ಟಿಯಲ್ಲಿಂದ ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ರಿ) ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಏಕೈಕ ಪತ್ರಕರ್ತರ ಸಂಘಟನೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 300 ಸದಸ್ಯರ ಪತ್ರಕರ್ತರನ್ನೊಳಗೊಂಡ ’ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಎಂದ ರೂಢಿಗತ ಹೆಸರಿನಿಂದಲೇ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯ ಸಂಘದ ಬೈಲಾ ನಿಯಮಗಳಿಗನುಗುಣವಾಗಿ ಕಾರ್ಯನಿರತ ಪತ್ರಕರ್ತರಿಗೆ ಸದಸ್ಯತ್ವವನ್ನು ನೀಡಲಾಗುತ್ತಿದೆ. ಆದರೆ ಸದಾ ಸಂಘಟನೆಯ ಸ್ಥಾನಮಾನಗಳಲ್ಲೆ ಇರಬೇಕು ಎಂಬ ಹಪಾಹಪಿಗೆ ಬಿದ್ದಿರುವ ಕೆಲವು ಪತ್ರಕರ್ತರು ಸಂಘದ ಸದಸ್ಯತ್ವವನ್ನು ನಿರಾಕರಿಸಿ ಪ್ರತ್ಯೇಕವಾಗಿ ’ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ’ ಎಂಬ ಹೆಸರಿನಲ್ಲೇ ಪರ್ಯಾಯ ಸಂಘಟನೆಯನ್ನು ಹುಟ್ಟುಹಾಕುವ ಮೂಲಕ ಜಿಲ್ಲೆಯ ಪತ್ರಕರ್ತ ಸಮೂಹದಲ್ಲಿ ಗುಂಪುಗಾರಿಕೆಯ ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ಮೈಸೂರು ಸಂಸ್ಥಾನದ ರಾಜರಾದ ನಾಲ್ವಡಿಕೃಷ್ಣರಾಜಒಡೆಯರ್ ಮಹಾಪೋಷಕರಾಗಿ, ಖ್ಯಾತ ಪತ್ರಕರ್ತರು, ಸಾಹಿತಿಗಳು ಆದ ಡಿ ವಿ. ಗುಂಡಪ್ಪ ಅವರು ಸ್ಥಾಪಕ ಅಧ್ಯಕ್ಷರಾಗಿ 1932ರಲ್ಲಿ ಸಂಸ್ಥಾಪನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯದಲ್ಲಿ ಸರ್ಕಾರದ ಮಾನ್ಯತೆ ಪಡೆದ ಏಕೈಕ ಸಂಘಟನೆಯಾಗಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕಾರ್ಮಿಕ ಕಾಯ್ದೆಯಡಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿ ರಾಜ್ಯಾದ್ಯಂತ ರಾಜ್ಯ ಸಂಘದ ಬೈಲಾ ಮತ್ತು ಕಾರ್ಮಿಕ ಇಲಾಖೆ ನೋಂದಣಿ ಆಧಾರದ ಮೇಲೆಯೇ ನಿಯಮಾನುಸಾರ ಜಿಲ್ಲಾ ಶಾಖೆಗಳು ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿವೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯು ನಲವತ್ತು ವರ್ಷಗಳಿಂದ ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಸರ್ಕಾರದಿಂದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು, ಪತ್ರಕರ್ತರಲ್ಲಿನ ವೃತ್ತಿಕೌಶಲ್ಯವನ್ನು ಪ್ರೋತ್ಸಾಹಿಸಲು ಪ್ರಶಸ್ತಿ ಪ್ರಧಾನ, ಸಮಾವೇಶ, ಕಾರ್ಯಾಗಾರಗಳ ಮೂಲಕ ಬೌದ್ಧಿಕ ಉನ್ನತೀಕರಣದಂತಹ ಜವಾಬ್ದಾರಿಯುತ ಚಟುವಟಿಕೆಗಳನ್ನು ನಡೆಸುತ್ತಿದೆ. ಪ್ರಜಾಪ್ರಭುತ್ವ ಮಾದರಿಯ ಚುನಾವಣೆಯಲ್ಲಿ ಸೋತ ಗುಂಪು 2014ರಿಂದಲೂ ಸಂಘವನ್ನು ಇಭ್ಭಾಗ ಮಾಡುವ ವಿಫಲ ಪ್ರಯತ್ನವನ್ನು ನಡೆಸುತ್ತಲೆ ಬಂದಿದ್ದು ಅದರ ಮುಂದುವರೆದ ಭಾಗವಾಗಿ ಇದೀಗ ’ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಎಂಬ ಹೆಸರಿನಲ್ಲಿ ಗುಂಪುಗಾರಿಕೆಗೆ ಇಳಿದಿದೆ ಎಂದರು.
Viral Video: ನೀರೆಂದುಕೊಂಡು ಬಿಯರ್ ಕುಡಿದ ಕೋಳಿಗಳು… ಮುಂದೇನಾಯ್ತು ಅಂತಾ ಇಲ್ಲಿ ನೋಡಿ!
ಕಾರ್ಯನಿರತ ಪತ್ರಕರ್ತರ ಸಂಘದ ಅಡಿಯಲ್ಲೇ ರಚಿಸಲ್ಪಟ್ಟ ಪ್ರೆಸ್ಟ್ರಸ್ಟ್ ನ ಮೂಲ ಬೈಲಾವನ್ನು ಕ್ರಿಮಿನಲ್ ಸಂಚು ಮೂಲಕ ಅಕ್ರಮ ತಿದ್ದುಪಡಿ ಮಾಡಿದ್ದು ಈ ಬಗ್ಗೆ ಈ ಹಿಂದೆಯೇ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮಧ್ಯಂತರ ತೀರ್ಪು ಪತ್ರಕರ್ತರ ಸಂಘದ ಪರವಾಗಿ ಬಂದಿತ್ತು. ಸದ್ಯ ಈ ವಿವಾದ ಈ ವ್ಯಾಜ್ಯ ಸಿವಿಲ್ ನ್ಯಾಯಾಲಯದಲ್ಲಿದೆ. ಅಲ್ಲಿಯೂ ನ್ಯಾಯ ಸಿಗುವ ವಿಶ್ವಾಸವಿದೆ. ಜಿಲ್ಲೆಯ ಎಲ್ಲ ಪತ್ರಕರ್ತರ ಅಭ್ಯುದಯದ ಆಶಯಗಳಿಂದ ಕಟ್ಟಲ್ಪಟ್ಟ ಪತ್ರಿಕಾಭವನ ಕೆಲವೇ ವ್ಯಕ್ತಿಗಳ ಸ್ವತ್ತಾಗಿ ದುರ್ಬಳಕೆ ಆಗುತ್ತಿದೆ. ಕಾರ್ಯನಿರತ ಪತ್ರಕರ್ತರ ಸಂಘ ಎಂಬ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು. ಅಧಿಕಾರದ ಹಪಾಹಪಿತನ, ಹತಾಶೆಗಳಿಂದ ಗುಂಪುಗಾರಿಕೆಗಿಳಿದಿರುವವರ ಸಂಘ ಒಡೆಯುವ ಕುತಂತ್ರಗಳಿಗೆ ಅವಕಾಶ ಕೊಡುವುದಿಲ್ಲ ಎಂದ ಎನ್.ರವಿಕುಮಾರ್ ಅವರು ಜಿಲ್ಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘವು ಜಿಲ್ಲಾಧ್ಯಕ್ಷ ಕೆ.ವಿ ಶಿವಕುಮಾರ್, ಪ್ರಧಾನಕಾರ್ಯದರ್ಶಿ ವಿ.ಟಿ ಅರುಣ್ ಮತ್ತು ಇತರೆ ಪದಾಧಿಕಾರಿಗಳ ನೇತೃತ್ವದಲ್ಲಿ ಸುಭದ್ರವಾಗಿದೆ ಎಂದರು.
‘ಭಗವತಿ ಏತ ನೀರಾವರಿ ಯೋಜನೆ’ಗೆ ‘ಸಚಿವ ಸಂಪುಟ’ ಅಸ್ತು – ಸಚಿವ ಗೋವಿಂದ ಕಾರಜೋಳ
ಸಂಘದ ಉಪಾಧ್ಯಕ್ಷರಾದ ಆರ್.ಎಸ್ ಹಾಲಸ್ವಾಮಿ ಅವರು ಮಾತನಾಡಿ ಹಿಂದಿನಿಂದಲೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆಯು ’ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಎಂಬ ಹೆಸರಿನಲ್ಲೆ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿತ್ತು. ಇದೇ ಹೆಸರಿನಲ್ಲೇ ಕೆಲವು ಪರ್ಯಾಯ ಸಂಘಟನೆಯೆಂದು ಕಟ್ಟಲೊರಟಿರುವುದು ಅವರ ಭೌದ್ಧಿಕ ದಾರಿದ್ರ್ಯವನ್ನು ತೋರಿಸುತ್ತದೆ. ಪತ್ರಕರ್ತರ ಒಳಿತಿಗಾಗಿ ಎಷ್ಟೆ ಸಂಘಟನೆಗಳು ಹುಟ್ಟಿದರೂ ತಪ್ಪಿಲ್ಲ. ಆದರೆ ಒಂದು ಸಂಘದ ಹೆಸರನ್ನೆ ಹೈಜಾಕ್ ಮಾಡುವುದು ಗೊಂದಲ ಸೃಷ್ಟಿಸುವ ಹತಾಶೆಯ ಕೃತ್ಯವಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ವೈದ್ಯ(ಮಲೆನಾಡು ಮಿತ್ರ), ಕೆ,ಎಸ್ ಹುಚ್ರಾಯಪ್ಪ(ಜನಹೋರಾಟ), ಪ್ರಧಾನಕಾರ್ಯದರ್ಶಿ ವಿ.ಟಿ ಅರುಣ್(ಶಿವಮೊಗ್ಗ ಟೈಮ್ಸ್),ಖಜಾಂಚಿ ಎಸ್ ಆರ್ ರಂಜಿತ್(ನಾವಿಕ), ಕಾರ್ಯದರ್ಶಿಗಳಾದ ದೀಪಕ್ ಸಾಗರ್(ವಿಜಯವಾಣಿ), ಕೆ.ಆರ್ ಸೋಮನಾಥ(ಹೊಸದಿಗಂತ), ಗಾ.ರ ಶ್ರೀನಿವಾಸ್(ಸೂರ್ಯಗಗನ), ರಾಜ್ಯ ಸಮಿತಿ ವಿಶೇಷ ಆಹ್ವಾನಿತರಾದ ಜಿ. ಪದ್ಮನಾಭ್( ಛಲದಂಕ ಮಲ್ಲ) ಉಪಸ್ಥಿತರಿದ್ದರು.