ಬೆಂಗಳೂರು: ಈ ಹಿಂದೆ ಹಲವು ಭಾರಿ ವಿಧಾನಸೌಧದ ಕೊಠಡಿಗಳಲ್ಲಿ ವಿವಿಧ ಕಾರಣಗಳಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಇಂದು ಕೂಡ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊತ್ತಿ ಉರಿದಿದೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವಂತ ರೂಂ ನಂ.334ರಲ್ಲಿ ಎಸಿ ಬ್ಲಾಸ್ ಗೊಂಡ ಪರಿಣಾಮದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೆಂಕಿ ಹೊಂತಿಕೊಂಡಂತ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳು, ಸಿಬ್ಬಂದಿ ಇರದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ.
ವಿಷಯ ತಿಳಿದು ಸ್ಥಳದಲ್ಲಿದ್ದಂತ ಸಿಬ್ಬಂದಿಗಳೇ ಕೂಡಲೇ ನಂದಿಸಿದ್ದಾರೆ. ಹೀಗಾಗಿ ಇಡೀ ಕೊಠಡಿಗೆ ಬೆಂಕಿ ಆವರಿಸಿ, ಧಗಧಗಿಸಿ ಹೊತ್ತಿ ಉರಿಯಬೇಕಿದ್ದಂತ ಘಟನೆ ತಪ್ಪಿದೆ.