ಬಾಗಲಕೋಟೆ: ಜಿಲ್ಲೆಯ ಕೆರೂರು ಗ್ರಾಮದಲ್ಲಿ ಜುಲೈ.15, 2022ರಂದು ವಿಪಕ್ಷ ನಾಯಕ ಸಿದ್ಧಾರಮಯ್ಯ ( Siddaramaiah ) ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದಂತ ಗಾಯಾಳುವಿಗೆ ಮಾನವೀಯತೆ ದೃಷ್ಠಿಯಿಂದ 2 ಲಕ್ಷ ಹಣ ನೀಡಿದ್ದರು. ಆದ್ರೇ.. ಆಗ ಮಹಿಳೆ ಮಾತ್ರ ನಮ್ಗೆ ಹಣ ಬ್ಯಾಡ್ರಿ, ನ್ಯಾಯ ಬೇಕ್ರಿ ಎಂಬುದಾಗಿ ಪರಿಹಾರದ ಹಣವನ್ನೇ ಸಿದ್ಧರಾಮಯ್ಯ ಕಾರ್ ಮೇಲೆ ಎಸೆದಿದ್ದರು. ಈ ಘಟನೆಯ ನಂತ್ರ ಇದೀಗ ಕುಟುಂಬಸ್ಥರು ಮಾಜಿ ಸಿಎಂ ಕ್ಷಮೆಯಾಚಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಎರಡು ಕೋಮುಗಳ ನಡುವೆ ಗುಂಪು ಘರ್ಷಣೆ ನಡೆದಿತ್ತು. ಈ ಪ್ರಕರಣದಲ್ಲಿ ಹಲವರು ಗಾಯಗೊಂಡಿದ್ದರು. ಈ ವಿಷಯ ತಿಳಿದು ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿದ್ದಂತವರನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಗ್ಯ ವಿಚಾರಿಸಿದ್ದರು.
ಈ ಸಂದರ್ಭದಲ್ಲಿ ಕುಳಗೇರಿ ಕ್ರಾಸ್ ಡಾಬಾ ಮಾಲೀಕ ಮೊಹಮ್ಮದ್ ಹನೀಫ್ ಹಲ್ಲೆಯಲ್ಲಿ ತೀವ್ರ ಗಾಯಗೊಂಡ ಕಾರಣ, ಸಿದ್ಧರಾಮಯ್ಯ ಮಾನವೀಯತೆಯ ದೃಷ್ಠಿಯಿಂದ 2 ಲಕ್ಷ ಹಣವನ್ನು ಚಿಕಿತ್ಸೆಗಾಗಿ ನೀಡಿದ್ದರು. ಹೀಗೆ ನೀಡಿದ್ದಂತ ಹಣವನ್ನು ಆಕೆಯ ಪತ್ನಿ ಮಾತ್ರ ಸಿದ್ಧರಾಮಯ್ಯ ಕಾರ್ ಹಿಂಬಾಲಿಸಿಕೊಂಡು ಬಂದು ನಮಗೆ ಹಣ ಬ್ಯಾಡ್ರಿ, ನ್ಯಾಯ ಕೊಡಿಸಿ ಎಂಬುದಾಗಿ ಕಾರ್ ಮೇಲೆ ಎಸೆದಿದ್ದರು. ಈ ವೀಡಿಯೋ ವೈರಲ್ ಕೂಡ ಆಗಿತ್ತು.
ಇಂದು ಅಂದು ಸಿಟ್ಟಿನಲ್ಲಿ ಸಿದ್ದರಾಮಯ್ಯ ನೀಡಿದ್ದಂತ ಹಣ ಎಸೆಯಲಾಗಿತ್ತು. ಇದರಿಂದ ಅವರಿಗೆ ನೋವಾಗಿದ್ದರೇ ತೀವ್ರವಾಗಿ ಕುಟುಂಬಸ್ಥರು ವಿಷಾದ ವ್ಯಕ್ತ ಪಡಿಸುತ್ತೇವೆ. ಅಂದಿನ ಘಟನೆಯ ಬಗ್ಗೆ ನಮ್ಮ ಕುಟುಂಬ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರನ್ನು ಕ್ಷಮೆಯಾಚಿಸೋದಾಗಿ ಗಾಯಾಳು ಮೊಹಮ್ಮದ್ ಹನೀಫ್ ಪತ್ನಿ ಬಿಸ್ಮಿಲ್ಲಾ ತಿಳಿಸಿದ್ದಾರೆ. ಈ ಮೂಲಕ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಕ್ಷಮೆಯಾಚಿಸಿದ್ದಾರೆ.