ದೆಹಲಿ: ಭಾರತಕ್ಕೆ ಎಂಟು ಚಿರತೆಗಳು ಬಂದಿವೆ. ಆದ್ರೆ, ಎಂಟು ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳನ್ನು ಏಕೆ ಸೃಷ್ಟಿಸಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಶನಿವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ವಿರುದ್ಧ ವಾಗ್ದಾಳಿ ನಡೆಸಿದರು.
ನಿನ್ನೆ (ಸೆ. 17) ಪ್ರಧಾನಿ ಮೋದಿ ತಮ್ಮ 72ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಮೀಬಿಯಾದಿಂದ ತಂದ ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ ಬಿಟ್ಟರು. ಇದು ಮೋದಿಗೆ ಕಾರ್ಯನಿರತ ದಿನವಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ʻಭಾರತಕ್ಕೆ ಎಂಟು ಚಿರತೆಗಳು ಬಂದಿವೆ. ಈಗ ಹೇಳಿ ಎಂಟು ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳು ಏಕೆ ಬರಲಿಲ್ಲʼ ಎಂದು ಪ್ರಶ್ನಿಸಿದ್ದಾರೆ.
8 चीते तो आ गए, अब ये बताइए,
8 सालों में 16 करोड़ रोज़गार क्यों नहीं आए?युवाओं की है ललकार, ले कर रहेंगे रोज़गार।#राष्ट्रीय_बेरोजगार_दिवस pic.twitter.com/QEFUF90lkm
— Rahul Gandhi (@RahulGandhi) September 17, 2022
ದೇಶದಲ್ಲಿನ ಚಿಂತಾಜನಕ ಉದ್ಯೋಗ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯುವಕರು ಪ್ರಧಾನಿಯವರ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಆಚರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಹೇಳಿಕೊಂಡಿದೆ. ಪ್ರಧಾನಿ ಅವರು ಭರವಸೆ ನೀಡಿದಂತೆ ಅವರಿಗೆ ಉದ್ಯೋಗವನ್ನು ನೀಡಬೇಕು ಎಂದು ಒತ್ತಾಯಿಸಿದರು. ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಮೋದಿ, ಕಳೆದ ಎಂಟು ವರ್ಷಗಳಲ್ಲಿ ಕೇವಲ ಏಳು ಲಕ್ಷ ಜನರಿಗೆ ಮಾತ್ರ ಉದ್ಯೋಗ ನೀಡಲಾಗಿದೆ.
BREAKING NEWS: ಹಾಸ್ಟೆಲ್ ಬಾಲಕಿಯರ ಖಾಸಗಿ ವಿಡಿಯೋ ಆನ್ಲೈನ್ನಲ್ಲಿ ಸೋರಿಕೆ… ಚಂಡೀಗಢ ವಿವಿಯಲ್ಲಿ ಭಾರೀ ಪ್ರತಿಭಟನೆ
BIGG NEWS: ಸಕ್ಕರೆನಾಡು ಮಂಡ್ಯದಲ್ಲಿ ಡಿ.ಕೆ ಶಿವಕುಮಾರ್ & ನಿಖಿಲ್ ಕುಮಾರಸ್ವಾಮಿ ಭೇಟಿ