ವಾಷಿಂಗ್ಟನ್: ಭಾರತವು ತನ್ನ ಸ್ಥಳೀಯವಾಗಿ 5Gಯನ್ನು ಅಭಿವೃದ್ಧಿಪಡಿಸಿ ಪ್ರಾರಂಭಿಸಿದೆ. ಅದನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ಸ್ಕೂಲ್ ಆಫ್ ಅಡ್ವಾನ್ಸ್ಡ್ ಇಂಟರ್ನ್ಯಾಷನಲ್ ಸ್ಟಡೀಸ್ (SAIS) ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಸೀತಾರಾಮನ್, “ಭಾರತದ 5G ಕಥೆಯು ಇನ್ನೂ ಸಾರ್ವಜನಿಕರನ್ನು ತಲುಪಿಲ್ಲ. ನಮ್ಮ ದೇಶದಲ್ಲಿ ನಾವು ಪ್ರಾರಂಭಿಸಿರುವ 5G ಸಂಪೂರ್ಣವಾಗಿ ಸ್ವತಂತ್ರವಾಗಿದೆ. ನಮ್ಮ 5Gಯನ್ನು ಬೇರೆಡೆಯಿಂದ ಆಮದು ಮಾಡಿಕೊಂಡಿಲ್ಲ. ಇದು ನಮ್ಮದೇ ಸ್ವಂತ ಉತ್ಪನ್ನವಾಗಿದೆ. 5G ಯಲ್ಲಿ ನಾವು ಭಾರತದ ಸಾಧನೆಗಳ ಬಗ್ಗೆ ಅಪಾರವಾಗಿ ಹೆಮ್ಮೆಪಡಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
5G ಸೇವೆಗಳನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಯ್ದ ನಗರಗಳಲ್ಲಿ ಪ್ರಾರಂಭಿಸಿದರು. 2024 ರ ವೇಳೆಗೆ ಇದು ಇಡೀ ರಾಷ್ಟ್ರದಲ್ಲಿ ಬಳಕೆಗೆ ಸಿಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
Watch Video : ನ್ಯಾಯಾಲಯದ ಮೆಟ್ಟಿಲೇರಿದ ‘ಎರಡು ತಲೆ’ ಹಾವಿಗೆ ಸಿಗ್ತು ರಕ್ಷಣೆ!: ಏನಿದು ಪ್ರಕರಣ?
BREAKING NEWS: ಛತ್ತೀಸ್ಗಢದ ಅಂಬಿಕಾಪುರದಲ್ಲಿ ಭೂಕಂಪ: 4.8 ತೀವ್ರತೆ ದಾಖಲು | earthquake in Chhattisgarh