ಬೆಂಗಳೂರು: ರಾಜ್ಯದಲ್ಲಿ ಇಂದು 2,988 ಮಂದಿಯನ್ನು ಕೋವಿಡ್ ಪರೀಕ್ಷೆಗೆ ( Covid19 Test ) ಒಳಪಡಿಸಲಾಗಿದೆ. ಅವರಲ್ಲಿ 49 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ( Karnataka Health Department ) ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ ಬಂಗಳೂರು ನಗರ 34, ಧಾರವಾಡ 01, ಹಾಸನ ಮತ್ತು ಹಾವೇರಿ 04, ಮಂಡ್ಯ 01, ಮೈಸೂರು 05 ಸೇರಿದಂತೆ 49 ಜನರಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 4070382ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.
ಇಂದು 71 ಮಂದಿ ಸೇರಿದಂತೆ ಈವರೆಗೆ 4028221 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಈಗ ರಾಜ್ಯದಲ್ಲಿ 1859 ಸಕ್ರೀಯ ಸೋಂಕಿತರು ಇದ್ದಾರೆ. ಈವರೆಗೆ ಕಿಲ್ಲರ್ ಕೊರೋನಾಗೆ 40260 ಜನರು ಬಲಿಯಾಗಿದ್ದಾರೆ ಎಂದು ಹೇಳಿದೆ.