ಚಿತ್ರದುರ್ಗ: ಮುರುಘಾ ಮಠದಲ್ಲಿದ್ದಂತ ( Murugha Matt ) 47 ಪೋಟೋಗಳನ್ನು ಕಳವು ಮಾಡಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳು ಪೊಲೀಸರ ಮುಂದೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಇದಕ್ಕೆ ಪ್ರಚೋಧನೆ ನೀಡಿದಂತ ಆರೋಪದಲ್ಲಿ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ( SK Basavarajan ) ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಮುರುಘಾ ಮಠದಲ್ಲಿ ಪೋಟೋ ಕಳವು ಪ್ರಕರಣ ಸಂಬಂಧ ನವೆಂಬರ್ 7ರಂದು ಹೊಸಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಸ್ವಾಮಿ ಹಾಗೂ ಎಸ್ ಜೆ ಎಂ ಕಾಲೇಜಿನ ಉಪನ್ಯಾಸಕ ಶಿವಾನಂದ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದರು. ಇವರನ್ನು ತನಿಖೆಗೆ ಒಳಪಡಿಸಿದಾಗ ಮುರುಘಾ ಮಠದಲ್ಲಿನ 47 ಪೋಟೋಗಳು ಕಳವು ಆಗಿರೋ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಮನಕಲಕುವ ಘಟನೆ : ಅಣ್ಣನ ಸಾವಿನಿಂದ ಮನನೊಂದು ತಂಗಿಯೂ ಆತ್ಮಹತ್ಯೆಗೆ ಶರಣು
ಇನ್ನೂ ತನಿಖೆಯ ವೇಳೆಯಲ್ಲಿ ಮಠದಲ್ಲಿನ ಪೋಟೋ ಕಳವಿಗೆ ಪ್ರಚೋದಿಸಿದ್ದು ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಎಂಬುದಾಗಿಯೂ ಸ್ಪೋಟಕ ಮಾಹಿತಿಯನ್ನು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಎಸ್ ಕೆ ಬಸವರಾಜನ್ ಹಾಗೂ ಅವರ ಪತ್ನಿಯ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಮುರುಘಾ ಮಠದಲ್ಲಿನ ಪೋಟೋ ಕಳವು ಪ್ರಕರಣ ಸಂಬಂಧ ಬಂಧಿಸಲ್ಪಟ್ಟ ಆರೋಪಿಗಳು ನೀಡಿದಂತ ಮಾಹಿತಿ ಆಧರಿಸಿ ಎಸ್ ಕೆ ಬಸವರಾಜನ್ ಅವರ ಮನೆಯಲ್ಲಿಯೂ ಶೋಧವನ್ನು ಪೊಲೀಸರು ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.