ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದಿಂದ ಶೇ.40 ಕಮೀಷನ್ ಆರೋಪದಲ್ಲಿ ಸಿಡಿದೇಳಲಾಗಿತ್ತು. ಸಂತೋಷ್ ಪಾಟೀಲ್ ಸಾವಿನ ಬಳಿಕ, ಮುಂದುವರೆದಿತ್ತು. ಇದೀಗ ಮತ್ತೆ ಜೀವ 40% ಕಮೀಷನ್ ಆರೋಪ ಜೀವ ಪಡೆದುಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಗುತ್ತಿಗೆದಾರರ ಸಂಘ ಮುಂದಾಗಿದೆ ಎನ್ನಲಾಗುತ್ತಿದೆ.
Shocking: ತೆಲಂಗಾಣದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಗರ್ಭಿಣಿಯಾದ 6 ನೇ ತರಗತಿ ವಿದ್ಯಾರ್ಥಿನಿ
ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿನ ಗುತ್ತಿಗೆ ಹಣದಲ್ಲಿ ಶೇ.40ರಷ್ಟು ಕಮೀಷನ್ ನೀಡಬೇಕು ಎಂಬುದಾಗಿ ಗುತ್ತಿಗೆದಾರರ ಸಂಘ ಆರೋಪಿಸಿತ್ತು. ಅಲಲ್ದೇ, ಪ್ರಧಾನಿ ನರೇಂದ್ರ ಮೋದಿಗೆ, ಕೇಂದ್ರದ ಅನೇಕ ಸಚಿವರುಗಳಿಗೂ ಪತ್ರ ಬರೆದು, ಸಮಸ್ಯೆ ಸರಿಪಡಿಸುವಂತೆ ಕೋರಲಾಗಿತ್ತು. ಇದೀಗ ಮತ್ತೊಂದು ಪತ್ರ ಬರೆಯಲು ಗುತ್ತಿಗೆದಾರರ ಸಂಘ ಮುಂದಾಗಿದೆ.
ಆರೋಗ್ಯಕಾರಿ ʻಪ್ರೋಟೀನ್ ಸೇವನೆʼಯಿಂದ ʻಹೊಟ್ಟೆಯ ಕೊಬ್ಬುʼ ಕರಗಿಸಿಕೊಳ್ಳಬಹುದು : ಅಧ್ಯಯನ
ಅಂದಹಾಗೇ, ಸ್ವಾತಂತ್ರ್ಯ ದಿನಾಚರಣೆ ವೇಳೆ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ದೇಶಕ್ಕೆ ಭ್ರಷ್ಟಾಚಾರ ದೊಡ್ಡ ಮಾರಕ, ಶತ್ರು ಎಂದಿದ್ದರು. ಮೋದಿ ಮಾತನ್ನ ಉಲ್ಲೇಖಿಸಿ ಅಭಿನಂದನೆ ಪತ್ರ ಬರೆಯಲು ಇದೀಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮುಂದಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಒಂದೂವರೆ ವರ್ಷವಾದರೂ ಗುತ್ತಿಗೆದಾರರು ನೀಡಿರುವ ದೂರಿಗೆ ಯಾವ ಕ್ರಮಕೈಗೊಂಡಿದ್ದೀರಿ ಎಂಬುದನ್ನೂ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಮತ್ತೊಮ್ಮೆ ರಾಜ್ಯ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪವನ್ನ ಮುಂಚೂಣಿಗೆ ಬಲಿದೆ ಎಂದು ಹೇಳಲಾಗುತ್ತಿದೆ.
BIGG NEWS : ʻ ರಾಜ್ಯಾಧ್ಯಕ್ಷರ ಬದಲಾವಣೆ ಹೈಕಮಾಂಡ್ಗೆ ಬಿಟ್ಟದ್ದುʼ : ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ
ಈ ಮಧ್ಯೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಇಂದು ಗುತ್ತಿಗೆದಾರರ ಸಂಘದ ನಿಯೋಗವು ಭೇಟಿಯಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವಂತ ಗುತ್ತಿಗೆಯಲ್ಲಿನ ಶೇ.40ರಷ್ಟು ಕಮೀಷನ್ ಧಂದೆಯ ಬಗ್ಗೆ ಚರ್ಚಿಸಿದೆ. ಅಲ್ಲದೇ ಪ್ರಧಾನಿ ಮೋದಿಗೆ ಮತ್ತೊಂದು ಪತ್ರ ಬರೆಯುವುದಕ್ಕೂ ಮೊದಲು ಈ ಕುರಿತಂತೆಯೂ ಅವರೊಂದಿಗೆ ಚರ್ಚಿಸಲಾಗಿದೆ ಎನ್ನಲಾಗಿದೆ. ಈ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಪ್ರಸ್ತಾಪಿಸಲು ಈಗ ಗುತ್ತಿಗೆದಾರರ ಸಂಘ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.