ಚಿತ್ರದುರ್ಗ: ಖ್ಯಾತ ಸಾಹಿತಿ ಮತ್ತು ಕಾದಂಬರಿಕಾರ ಬಿ.ಎಲ್ ವೇಣು ( Writer BL Venu ) ಅವರಿಗೆ ಇಂದು ಮೂರನೇ ಬೆದರಿಕೆ ಪತ್ರ ಅವರ ನಗರದಲ್ಲಿನ ನಿವಾಸಕ್ಕೆ ಬಂದಿತ್ತು. ಆ ಪತ್ರದಲ್ಲಿ ಮತ್ತೆ ಯಾಕೆ ಕ್ಷಮೆ ಕೇಳಿಲ್ಲ ಎಂಬುದಾಗಿ ಸೇರಿದಂತೆ, ಬುದ್ಧಿ ಜೀವಿಗಳಿಗೆ ಬುದ್ಧಿ ಹೇಳುವಂತೆಯೂ ಸೂಚಿಸಲಾಗಿತ್ತು. ಈ ಬಗ್ಗೆ ಅವರು ಏನ್ ಹೇಳಿದ್ರು ಅಂತ ಮುಂದೆ ಓದಿ..
ಈ ಕುರಿತಂತೆ ಸುದ್ದಿಗಾರರಿಗೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವಂತ ಸಾಹಿತಿ ಬಿ.ಎಲ್ ವೇಣು, ದಿನಾಂಕ 19-07-2022ರಂದು ನನಗೆ ಮೂರನೇ ಬೆದರಿಕೆ ಪತ್ರ ಬಂದಿದೆ. ಪತ್ರದ ಮೂಲಕ ಪ್ರತಿ ಹಾಗೂ ಕವರ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಿ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯದ ಕಾರಾಗೃಹಗಳಲ್ಲಿನ ಖೈದಿಗಳ ಕೂಲಿ ಮೊತ್ತ ರೂ.200ಕ್ಕೆ ಹೆಚ್ಚಳ – ಗೃಹ ಸಚಿವ ಅರಗ ಜ್ಞಾನೇಂದ್ರ
ನನಗೆ ಬೆದರಿಕೆ ಪತ್ರಗಳು ನಿರಂತರವಾಗಿ ಬರುತ್ತಿರೋ ಕಾರಣ, ಎಸ್ಪಿಯವರು ಅಂಗರಕ್ಷಕರನ್ನು ನೇಮಿಸೋದಾಗಿ ಪ್ರೀತಿಯಿಂದಲೇ ತಿಳಿಸಿದ್ದರು. ಆದ್ರೇ ನಾನೇ ನಿರಾಕರಿಸಿದ್ದೇನೆ ಎಂದು ಹೇಳಿದ್ದಾರೆ.
ಇನ್ನೂ ನಿಮ್ಮ ಮನೆಯ ಮುಂದೆ ಕನಿಷ್ಠ ಸಿಸಿಟಿವಿಯನ್ನಾದರೂ ಹಾಕಿಕೊಳ್ಳುವಂತೆ ಸೂಚಿಸಿದ್ದೂ ಉಂಟು. ನಾನು ಅದರ ಅಗತ್ಯವಿಲ್ಲವೆಂದಿದ್ದೆ. ಆದ್ರೇ ಅವರೇ ಸಂಬಂಧಪಟ್ಟವರಿಗೆ ಹೇಳಿ ಮನೆಯ ಹೊರಗಡೆ ಸಿಸಿಟಿವಿ ಅಳವಡಿಸಿದ್ದಾರೆ. ಅಲ್ಲದೇ ರಿಜಿಸ್ಟರ್ ಬುಕ್ ಮನೆಯ ಮುಂದೆ ಇಟ್ಟಿದ್ದಾರೆ. ದಿನವೂ ಪೊಲೀಸರು ಸಹಿ ಮಾಡುವ ವ್ಯವಸ್ಥೆ ಮಾಡಿದ್ದಾರೆ ಎಂದಿದ್ದಾರೆ.
BREAKING NEWS : ಖ್ಯಾತ ಟಾಲಿವುಡ್ ನಟ ‘ಪವನ್ ಕಲ್ಯಾಣ್’ ಆರೋಗ್ಯದಲ್ಲಿ ಏರುಪೇರು ; ಅಭಿಮಾನಿಗಳಲ್ಲಿ ಆತಂಕ
ನಾನು ಇಂತಹ ಯಾವುದೇ ಬದರಿಕೆ ಪತ್ರಗಳಿಗೆ ಹೆದರುವುದು ಇಲ್ಲ, ನಾನೇನು ವಿಚಲಿತನಾಗಿಲ್ಲ. ನನಗೆ ನಿಮ್ಮೆಲ್ಲರ ನೈತಿಕ ಬೆಂಬಲವಿರಲಿ ಎಂಬುದಾಗಿ ಹೇಳಿದ್ದಾರೆ.
ಅಂದಹಾಗೇ, ಇಂದು ಸಾಹಿತಿ ಬಿ.ಎಲ್ ವೇಣುಗೆ ಬಂದಿರುವಂತ ಬೆದರಿಕೆಯ 3ನೇ ಪತ್ರದಲ್ಲಿ ನೀವು ಯಾಕೆ ಇನ್ನೂ ಕ್ಷಮೆ ಕೇಳಿಲ್ಲ. ನಿಮಗೆ ತಾಕತ್ತಿದ್ದರೇ ದೇಶದ್ರೋಹಿ ಸಂಘಟನೆಗಳಿಗೆ ಬುದ್ದಿ ಹೇಳಿ ಎಂಬುದಾಗಿ ಎಚ್ಚರಿಸಲಾಗಿದೆ.
ಇನ್ನೂ ಪಿಎಫ್ಐ, ಎಸ್ ಡಿ ಪಿಐ ಹಾಗೂ ಸಿಎಫ್ಐ ನಂತಹ ದೇಶದ್ರೋಹಿ ಸಂಘಟನೆಗಳಿಗೆ ಬುದ್ಧಿಹೇಳಬೇಕು. ಪಠ್ಯದಲ್ಲಿ ಭಗವದ್ಗೀತೆ ಬೇಡ ಎಂದ 61 ಎಡಬಿಡಂಗಿಗಳಿಗೆ ತಿಳಿ ಹೇಳಬೇಕು ಎಂದು ಹೇಳಲಾಗಿದೆ.
BIG NEWS: ರಾಜ್ಯದ ‘ರೈತ’ರಿಗೆ ಗುಡ್ ನ್ಯೂಸ್: ‘ಡೀಸೆಲ್ ಸಹಾಯಧನ’ ಬಿಡುಗಡೆಗೊಳಿಸಿ ಸರ್ಕಾರ ಆದೇಶ
61 ಜನ ಕಿಡಿಗೇಡಿ ಸಾಹಿತಿಗಳು ಹಿಂದೂಗಳಿಗೆ ನೀತಿ ಪಾಠ ಹೇಳುವ ಅಗತ್ಯವಿಲ್ಲ. 2047ಕ್ಕೆ ಭಾರತ ಇಸ್ಲಾಂಮಿಕ್ ಆಳ್ವಿಕೆಯಲ್ಲಿ ಇರುತ್ತದೆ ಎಂಬುದಾಗಿ ಬಿಹಾರದ ಪಾಟ್ನಾದಲ್ಲಿ ಸೆರೆಸಿಕ್ಕಂತ ಶಂಕಿತ ಉಗ್ರನೇ ಹೇಳಿದ್ದಾನೆ ಎಂಬುದಾಗಿಯೂ ತಿಳಿಸಲಾಗಿದೆ.
ಅಂದಹಾಗೇ 3ನೇ ಬೆದರಿಕೆಯ ಪತ್ರವನ್ನು ಸಾಹಿತಿ ಬಿಎಸ್ ವೇಣು ಅವರ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಿವಾಸಕ್ಕೆ ಕಳುಹಿಸಲಾಗಿದೆ.