ಬೆಂಗಳೂರು : ದೇಶವನ್ನು ಮುನ್ನಡೆಸಲು ದೇಶವನ್ನು ಅಭಿವೃದ್ಧಿ ಕಡೆ ಕರೆದೋಯ್ಯಲು ಹಾಗೂ ಸಂವಿಧಾನದ ಆಶಯವನ್ನು ಅನುಷ್ಠಾನಕ್ಕೆ ತರುವುದು ಮೋದಿಯವರ ಅಜೆಂಡವಾಗಿದೆ ಎಂದು ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ಅವರು ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯದಿಂದ ಐವರಿಗೆ ಸಚಿವರಾಗೋದಕ್ಕೆ ಅವಕಾಶ ಸಿಕ್ಕಿದೆ. ಮೋದಿಯವರ ಸಂಪುಟದಲ್ಲಿ ಸಚಿವರಾಗುವುದು ಎಂದರೆ ಅವರಿಗೂ ಒಂದು ಗೌರವ. ರಾಜಕೀಯವನ್ನು ಗೌರವ ಹಾಗಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ.ರಾಜ್ಯ ಮತ್ತು ದೇಶದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ನಿಮ್ಮ ಸಮರ್ಥ್ಯವನ್ನು ಉಪಯೋಗಿಸಿ ಅಭಿವೃದ್ಧಿ ಕೆಲಸಗಳಲ್ಲಿ ದೇಶಕ್ಕೆ ಒಳ್ಳೆಯದಾಗಲಿ ಅಂತ ನಿರೀಕ್ಷೆ ಇಟ್ಕೊಂಡು ಶುಭ ಹಾರೈಸುತ್ತೇನೆ.
ಇನ್ನೂ ಮೈತ್ರಿ ಕುರಿತಂತೆ ಮಾತನಾಡಿದ ಅವರು, ರಾಜಕಾರಣ ದೃಷ್ಟಿಯಿಂದ ಅಷ್ಟೇ ನೋಡೋಕೆ ಬಯಸುವುದಿಲ್ಲ. ಅವರಿಂದ ರಾಜ್ಯ ಮತ್ತು ದೇಶಕ್ಕೆ ಒಳ್ಳೆಯದಾಗಬೇಕು. ಪಕ್ಷದ ರಾಜಕಾರಣ ಚುನಾವಣೆ ಬಂದಾಗ ಮಾಡೋಣ ಈಗ ನಾವು ಮಾಡಬೇಕಾಗಿರುವುದು ರಾಷ್ಟ್ರದ ರಾಜಕಾರಣ ರಾಜ್ಯ ಹಿತದ ರಾಜಕಾರಣ ರಾಜ್ಯ ಹಿತ ಮತ್ತು ರಾಷ್ಟ್ರ ಹಿತ ರಾಜಕಾರಣ ಎರಡು ಆಗಲಿ ಎಂದು ನಿರೀಕ್ಷೆ ಇಟ್ಕೊಂಡು ಈವರಿಗೂ ಶುಭ ಹಾರೈಸುತ್ತೇನೆ ಎಂದರು.
ಈ ಬಾರಿ ರಾಜ್ಯದಲ್ಲಿ ಬಿಜೆಪಿ 17 ಸ್ಥಾನ ಗೆಲ್ಲಲು ಮೈತ್ರಿ ಒಂದು ಕಾರಣ ಆಗಿದೆಯ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತುಂಬಾ ಸಕಾರಾತ್ಮಕ ಅಂಶಗಳಿದ್ದವು. ಇನ್ನು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನಮಗೆ ಅವಕಾಶಗಳಿತ್ತು.ಕಳೆದ ಬಾರಿ 25 ಸ್ಥಾನಗಳನ್ನು ಗೆದ್ದಿದ್ದೇವೆ ಇನ್ನು ಹೆಚ್ಚಿನ ಸ್ಥಾನಗಳನ್ನು ಗೆಲುವು ಸಾಧ್ಯತೆ ಇತ್ತು. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ.ಹಾಗಾಗಿ ಈಗ ಸಚಿವರಾಗಿ ಆಯ್ಕೆಯಾಗಿರುವರಿಂದ ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯದಾಗುತ್ತೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.