ಬೆಂಗಳೂರು : ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಕಿಶೋರ್ ಸಾಳ್ವೆ ಎಸ್ಐಟಿ ಕಸ್ಟಡಿ ಇಂದಿಗೆ ಮುಕ್ತಾಯ ಆಗಲಿದೆ. ಇಂದಿನವರೆಗೂ ಕಿಶೋರ ಸಾಳ್ವೆಯನ್ನು ಕೋರ್ಟ್ ಎಸ್ಐಟಿ ಕಸ್ಟಡಿಗೆ ನೀಡಿತ್ತು.
ಅಧಿಕಾರಿಗಳು ಕಿಶೋರ್ ಸಾಳ್ವೆ ಬಂಧಿಸಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು. ಸಂದೀಪ್ ಪಾಟೀಲ್ ದೂರು ಆಧರಿಸಿ ಎಸ್ಐಟಿ ಅಧಿಕಾರಿಗಳು ಇದೀಗ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ ಪ್ರಕರಣದಲ್ಲಿ 8 ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಜನವರಿ 31 ಶನಿವಾರ ಸಂಜೆ ಪ್ರಮುಖ ಆರೋಪಿ ಕಿಶೋರ್ನನ್ನು sit ಅಧಿಕಾರಿಗಳು ಅರೆಸ್ಟ್ ಮಾಡಿದರು.
ನಾಸಿಕ್ ತಾಲೂಕಿನ ಗೋಟಿ ಠಾಣೆಗೆ ಹೋಗಿ ಕಿಶೋರ್ ಶರಣಾಗಿದ್ದ. ಬಳಿಕ ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆಗಾಗಿ SIT ಅಧಿಕಾರಿಗಳು ಆತನನ್ನು ಕಸ್ಟಡಿಗೆ ಪಡೆದಿದ್ದರು. ಮತ್ತೋರ್ವ ಆರೋಪಿ ಮಚೆಂದ್ರ ಕೂಡ ಎಸ್ಐಟಿ ಅಧಿಕಾರಿಗಳ ವಶದಲ್ಲಿದ್ದಾನೆ. ಇನ್ನು ಕಿಶೋರ್ ಮ್ಯಾನೇಜರ್ ವಿರಾಟ್ ಗಾಂಧಿ ನ್ಯಾಯಂಗ ಬಂಧನದಲ್ಲಿ ಇದ್ದಾನೆ.








