ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ನೀವೇನಾದರೂ ರೈಲಿನಲ್ಲಿ ಹೆಚ್ಚಾಗಿ ಪ್ರಯಾಣ ಮಾಡುವವರಾದರೆ ಈ ಮಾಹಿತಿ ತಿಳಿದಿದ್ದರೆ ಉತ್ತಮ.ಚಲಿಸುತ್ತಿರುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ಏನು ಮಾಡೋದು ಎಂಬ ಕುತೂಹಲ ಹೆಚ್ಚಿನವರನ್ನು ಕಾಡುತ್ತಿರುತ್ತದೆ.
ಚಲಿಸುವ ರೈಲಿನಿಂದ ಫೋನ್ ಬಿದ್ದರೆ ನೀವು ಮೊದಲು ರೈಲ್ವೇ ಹಳಿಯ ಬದಿಯಲ್ಲಿ ಅಳವಡಿಸಿರುವ ಕಂಬದ ಮೇಲೆ ಬರೆದಿರುವ ಸಂಖ್ಯೆ ಇಲ್ಲವೇ ಸೈಡ್ ಟ್ರಾಕ್ ಸಂಖ್ಯೆಯನ್ನು ಗಮನಿಸಿ. ನಿಮ್ಮ ಪಕ್ಕದಲ್ಲಿರುವ ಪ್ರಯಾಣಿಕರಿಂದ ಫೋನ್ ಕೇಳಿ ಪಡೆದು ಆರ್‌ಪಿಎಫ್(RPF) ಮತ್ತು ಸಂಖ್ಯೆ 182 ಕ್ಕೆ ಫೋನ್ ಬಿದ್ದ ಮಾಹಿತಿಯನ್ನು ನೀಡಿ. ಈ ಸಮಯದಲ್ಲಿ, ಫೋನ್ ಯಾವ ಕಂಬ ಇಲ್ಲವೇ ಟ್ರ್ಯಾಕ್ ಸಂಖ್ಯೆಯ ಬಳಿ ಬಿದ್ದಿದೆ ಎಂಬುದನ್ನು ತಿಳಿಸಬೇಕು. ಹೀಗೆ ಮಾಡಿದಾಗ ರೈಲ್ವೆ ಪೊಲೀಸರಿಗೆ ಫೋನ್ ಪತ್ತೆ ಮಾಡುವುದು ಸುಲಭವಾಗಲಿದೆ. ಪೊಲೀಸರು ತಕ್ಷಣ ಅದೇ ಸ್ಥಳಕ್ಕೆ ತಲುಪಿ ಫೋನ್ ಹುಡುಕಲು ಆರಂಭಿಸುತ್ತಾರೆ. ಈ ಪ್ರಕ್ರಿಯೆಯ ಬಳಿಕ ನಿಮ್ಮ ಫೋನ್ ಅನ್ನು ಕಾನೂನುಬದ್ಧವಾಗಿ ಮರಳಿ ಪಡೆಯಲು ಸಾಧ್ಯವಾಗುತ್ತದೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನ ಅಖಿಲ ಭಾರತ ಭದ್ರತಾ ಸಹಾಯವಾಣಿ ಸಂಖ್ಯೆ 182 ಆಗಿದ್ದು, ನೀವು ಯಾವುದೇ ಸಂದರ್ಭದಲ್ಲಿ ಸಹಾಯಕ್ಕಾಗಿ ಈ ಸಂಖ್ಯೆಯನ್ನು ಬಳಕೆ ಮಾಡಬಹುದು. ರೈಲ್ವೆ ಪ್ಯಾಸೆಂಜರ್ ಸಹಾಯವಾಣಿ ಸಂಖ್ಯೆ 138 ಆಗಿದ್ದು, ರೈಲು ಪ್ರಯಾಣದ ಸಂದರ್ಭ. ಯಾವುದೇ ಸಮಸ್ಯೆ ಎದುರಾದರೆ, 1512 ಅನ್ನು ಡಯಲ್ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದಾಗಿದೆ. GRP ಯ ಸಹಾಯವಾಣಿ ಸಂಖ್ಯೆ 1512 ಆಗಿದ್ದು, ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.