ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆಯಾಗಿದೆ. ರಾಯಚೂರು ಐದು ವರ್ಷದ ಮಗುವಿಗೆ ಸೋಂಕು ಪತ್ತೆಯಾಗಿದೆ. ಝಿಕಾ ವೈರಸ್ ರೋಗ ಲಕ್ಷಣಗಳು ಕಂಡು ಬಂದ್ರೆ ನಿರ್ಲಕ್ಷ್ಯಸದಿರಲಿ. ಇದನ್ನ ತಡೆಗಟ್ಟುವುದು ಹೇಗೆ ಗೊತ್ತಾ? ಇದರ ಬಗ್ಗೆ ವೈದ್ಯರೊಬ್ಬರು ಡಾ ಗೌರವ್ ಶರ್ಮಾ ಮಾಹಿತಿಗಳನ್ನು ನೀಡಿದ್ದಾರೆ.
BIGG NEWS: ಗದಗ ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಶಾಸಕ ಎಸ್.ಎನ್ ಪಾಟೀಲ ಇನ್ನಿಲ್ಲ
ಈ ಪ್ರಕರಣ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ.ಝಿಕಾ ವೈರಸ್ನ ಬಗ್ಗೆ ಆತಂಕ ಪಡಬೇಕಾಗಿಲ್ಲ. ಆತಂಕ ಭಯಗಳು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ. ಆದ್ದಕ್ಕಾಗಿ ಝಿಕಾ ವೈರಸ್ ತಡೆಗಟ್ಟಲು ಬೆಂಗಳೂರಿನ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.
ಝಿಕಾ ವೈರಸ್ ಎಂದರೇನು ಮತ್ತು ಲಕ್ಷಣಗಳು ಯಾವುವು?
ಝಿಕಾ ಎಂಬುದು ಡೆಂಗ್ಯೂಗೆ ಕಾರಣವಾಗುವ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು, ಈಡಿಸ್ ಸೊಳ್ಳೆಗಳು. ಇದು ಹೆಚ್ಚಾಗಿ ಹಗಲಿನಲ್ಲಿ ಕಚ್ಚುತ್ತದೆ. ಬೆಂಗಳೂರು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಈಗೀಗಾ ನಿರಂತರವಾಗಿ ಮಳೆಯಾಗುವುದರಿಂದ ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಸೊಳ್ಳೆಗಳು, ಸೋಂಕಿತ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಪರ್ಕದ ಮೂಲಕ ಮಾತ್ರ ಝಿಕಾ ಹರಡುತ್ತದೆ.
BIGG NEWS: ಗದಗ ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಶಾಸಕ ಎಸ್.ಎನ್ ಪಾಟೀಲ ಇನ್ನಿಲ್ಲ
ಝಿಕಾವನ್ನು ಹೇಗೆ ತಡೆಯುವುದು?
ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟುವುದು ಬಹಳ ಮುಖ್ಯ. ಮಳೆ ಬಂದಿರುವುದರಿಂದ ಅಲ್ಲಲ್ಲಿ ನೀರು ತುಂಬಿರುತ್ತದೆ. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಪಾತ್ರೆಗಳು ಮತ್ತು ಟೈರುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆ ಪರದೆಗಳಿಂದ ಕಿಟಕಿಗಳನ್ನು ಮುಚ್ಚಿ ಮತ್ತು ಸೊಳ್ಳೆ ಕಡಿತವನ್ನು ತಡೆಗಟ್ಟಲು ನಿವಾರಕಗಳನ್ನು ಬಳಸಿ. ಹೊರಗಡೆ ಹೋಗುವಾಗ ಉದ್ದ ಕೈಗಳ ಬಟ್ಟೆಯನ್ನು ಧರಿಸಿ ಎಂದು ಸಲಹೆ ನೀಡಿದ್ದಾರೆ.