ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ‘ಯುವ ದಸರಾ’ ವಿಶೇಷ ಅತಿಥಿಯಾಗಿ ನಟ ಕಿಚ್ಚ ಸುದೀಪ್ ಗೆ ಆಹ್ವಾನ ನೀಡಲಾಗಿದೆ.
ಮೈಸೂರು ಮಹರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ನಡೆಯಲಿದ್ದು, ಆಯ್ದ ಕಾಲೇಜುಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.. ಯುವ ದಸರಾ’ ವಿಶೇಷ ಅತಿಥಿಯಾಗಿ ನಟ ಕಿಚ್ಚ ಸುದೀಪ್ ಗೆ ಆಹ್ವಾನ ನೀಡಲಾಗಿದೆ. . ಸೆ.27ರಿಂದ ಅ.3ರವರೆಗೆ ಯುವ ದಸರಾ ನಡೆಯಲಿದೆ. ಬಾಲಿವುಡ್ ಗಾಯಕರಾದ ಅಮಿತ್ ತ್ರಿವೇದಿ, ಸುನಿಧಿ ಚೌಹಾನ್, ಮಂಗ್ಲಿ, ವಿಜಯ ಪ್ರಕಾಶ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಿಚ್ಚ ಸುದೀಪ್ ಅವರಿಂದ ಯುವ ದಸರಾ ಉದ್ಘಾಟನೆಯಾಗಲಿದೆ. ಶ್ರೀಧರ್ ಜೈನ್ ನೃತ್ಯ, ರಘು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಪಟ್ಟಿ ಹೀಗಿದೆ.:
1.ಮಂಗ್ಲಿ ಗಾಯನ
2.ಅಪ್ಪು ನಮನ- ಗುರುಕಿರಣ್, ವಿಜಯ ಪ್ರಕಾಶ್, ಕುನಾಲ್ ಗಾಂಜಾವಾಲ ಗಾಯನ
3.ಲೇಷರ್ ಶೋ, ಸಿಗ್ನೇಚರ್ ಗ್ರೂಪ್ ನೃತ್ಯ, ಕನ್ನಿಕಾ ಕಪೂರ್, ಅಸೆಂಟ್ ಬ್ಯಾಂಡ್
4..ಸ್ಯಾಂಡಲ್ವುಡ್ ನೈಟ್ಸ್: ಕನ್ನಡ ಚಲನಚಿತ್ರ ನಟ- ನಟಿಯರು ಭಾಗಿ
5.ಶಮಿತಾ ಮಲ್ನಾಡ್, ನೃತ್ಯ ರೂಪಕ
6.ಪವನ್ ಡ್ಯಾನ್ಸರ್, ಹರ್ಷಿಕಾ ಪೂಣಚ್ಚ& ವಿಜಯ ರಾಘವೇಂದ್ರ, ಅಮಿತ್ ತ್ರಿವೇದಿ ಗಾಯನ
7.ಸುಪ್ರಿಯಾ ರಾಮ್ ಮಹಿಳಾ ಬ್ಯಾಂಡ್, ಫ್ಯಾಶನ್ ಶೋ, ಸುನಿಧಿ ಚೌಹಾನ್ ಗಾಯನ
ಸೆ.26 ರಂದು ನಾಡಹಬ್ಬ ಮೈಸೂರು ದಸರಾ ( Mysore Dasara 2022) ಉದ್ಘಾಟನೆಯಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸೆ.26 ರಂದು ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.ಸೆಪ್ಟೆಂಬರ್ 26ರಿಂದ ನವರಾತ್ರಿ ಉತ್ಸವ ಆರಂಭಗೊಳ್ಳಲಿದ್ದು, ಅಕ್ಟೋಬರ್ 5ರಂದು ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ನಡೆಯಲಿದೆ . ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಕ್ಷಣಗಣನೇ ಆರಂಭವಾಗಿದೆ. ಈ ಬಾರಿ ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಾರಿ ಮೈಸೂರು ದಸರಾ ಸೆಪ್ಟೆಂಬರ್ 26 ರಿಂದ ಆರಂಭಗೊಳ್ಳಲಿದ್ದು, ಅಕ್ಟೋಬರ್ 5 ವರೆಗೆ ನಡೆಯಲಿದೆ.
BIG NEWS : ʻಅಕ್ಕಿʼ ಬೆಲೆಯಲ್ಲಿ ಮತ್ತೆ ಏರಿಕೆ ಸಾಧ್ಯತೆ: ಆಹಾರ ಸಚಿವಾಲಯದಿಂದ ಮಾಹಿತಿ
ಮಳೆ ನಿರ್ವಹಣೆಗೆ ವಿಶೇಷ ‘ಟಾಸ್ಕ್ ಫೋರ್ಸ್’ ರಚನೆ : ಬೆಂಗಳೂರು ಅಭಿವೃದ್ದಿಗೆ 1,617 ಕೋಟಿ ರೂ ಪ್ಯಾಕೇಜ್ ಘೋಷಣೆ