Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗುರುಗಳು ಹೇಳಿದ ಆ ಮಾತೇ ಆ ಯುವಕನ ಬದುಕು ಬದಲಿಸಿತು. ಅದೇನು ಅಂತ ಈ ಸುದ್ದಿ ಓದಿ!

21/04/2026 7:36 PM

ರೋಡ್ ರೇಜ್ ವಿವಾದ: ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಮಾವ, ಭಾವ ಸೇರಿ ಮೂವರ ಬಂಧನ !

21/04/2026 7:35 PM

ಬಸವಾದಿ ಶರಣರ ತತ್ವಗಳು ಸಮಾಜದ ಪ್ರಗತಿಗೆ ಪೂರಕ: ಶಾಸಕ ಗೋಪಾಲಕೃಷ್ಣ ಬೇಳೂರು

21/04/2026 7:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೋಡ್ ರೇಜ್ ವಿವಾದ: ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಮಾವ, ಭಾವ ಸೇರಿ ಮೂವರ ಬಂಧನ !
INDIA

ರೋಡ್ ರೇಜ್ ವಿವಾದ: ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಮಾವ, ಭಾವ ಸೇರಿ ಮೂವರ ಬಂಧನ !

By kannadanewsnow8921/04/2026 7:35 PM

​ಮುಂಬೈ: ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ನಡೆದ ಕ್ಷುಲ್ಲಕ ಕಾರಣದ ರಸ್ತೆ ಜಗಳ ವಿಕೋಪಕ್ಕೆ ತಿರುಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ (TMC) ಸಂಸದ ಯೂಸುಫ್ ಪಠಾಣ್ ಅವರ ಮಾವ ಮತ್ತು ಭಾವ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

​ಶನಿವಾರ ರಾತ್ರಿ ಬೈಕುಲ್ಲಾ ನಿವಾಸಿ ಯೂಸುಫ್ ಖಾನ್ ಎಂಬುವವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ, ರಸ್ತೆಯ ಗುಂಡಿಯಲ್ಲಿದ್ದ ನೀರು ಪಾದಚಾರಿ ಮಾರ್ಗದಲ್ಲಿದ್ದ ಶೋಯೆಬ್ ಖಾನ್ ಎಂಬುವವರ ಮೇಲೆ ಸಿಡಿದಿದೆ. ಶೋಯೆಬ್ ಅವರು ಯೂಸುಫ್ ಪಠಾಣ್ ಅವರ ಸಂಬಂಧಿಯಾಗಿದ್ದು, ಈ ಸಣ್ಣ ವಿಷಯಕ್ಕೆ ಇಬ್ಬರ ನಡುವೆ ಜೋರು ಮಾತಿನ ಚಕಮಕಿ ನಡೆದಿದೆ.

ನೀರು ಸಿಡಿದಿದ್ದಕ್ಕೆ ಯೂಸುಫ್ ಖಾನ್ ಕ್ಷಮೆಯಾಚಿಸಿದರೂ ಸಹ ಶೋಯೆಬ್ ಅವರು ಅಶ್ಲೀಲ ಪದಗಳಿಂದ ನಿಂದಿಸಿ, ಬಿದಿರಿನ ಕೋಲಿನಿಂದ ಕಾರಿನ ಗಾಜನ್ನು ಪುಡಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನೊಂದ ಯೂಸುಫ್ ಖಾನ್ ಅವರು ದೂರು ನೀಡಲು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ, ದಾರಿಯಲ್ಲಿ ಶೋಯೆಬ್ ಖಾನ್ ಜೊತೆಗೆ ಯೂಸುಫ್ ಪಠಾಣ್ ಅವರ ಮಾವ ಖಾಲಿದ್ ಖಾನ್ (ಮಕಾಲಿಕ್) ಮತ್ತು ಮಗ (ಭಾವ) ಉಮರ್ಶಾದ್ ಪಠಾಣ್ ಸೇರಿ ತಂಡವೊಂದು ಅಡ್ಡಗಟ್ಟಿದೆ.
ಈ ವೇಳೆ ತಂಡವು ಬ್ಯಾಟ್ ಮತ್ತು ಬಿದಿರಿನ ಕೋಲುಗಳಿಂದ ಯೂಸುಫ್ ಖಾನ್ ಮತ್ತು ಅವರ ಕುಟುಂಬದ ಮೇಲೆ ದಾಳಿ ನಡೆಸಿದೆ. ಈ ಹಲ್ಲೆಯಲ್ಲಿ ಯೂಸುಫ್ ಖಾನ್ ಅವರ ಸಹೋದರ ಸಲ್ಮಾನ್ ಅವರ ಕೈ ಮೂಳೆ ಮುರಿದಿದ್ದು, ಚಿಕ್ಕಪ್ಪ ಜಕಿ ಅಹ್ಮದ್ ಗಂಭೀರವಾಗಿ ಗಾಯಗೊಂಡಿದ್ದಾರೆ.

​ಬೈಕುಲ್ಲಾ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಯೂಸುಫ್ ಪಠಾಣ್ ಅವರ ಮಾವ ಖಾಲಿದ್ ಖಾನ್, ಭಾವ ಉಮರ್ಶಾದ್ ಮತ್ತು ಶೋಯೆಬ್ ಖಾನ್ ಅವರನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ಶಹಬಾಜ್ ಪಠಾಣ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Brother-In-Law Arrested After Mumbai Road Rage Clash Turns Violent In Byculla Yusuf Pathan's Father-In-Law
Share. Facebook Twitter LinkedIn WhatsApp Email

Related Posts

ಬದಲಾಗುತ್ತಿದೆ ಭೂಮಿಯ ನೈಜ ಬಣ್ಣ: ಕೆಲವು ಕಡೆ ಪ್ರಕಾಶಮಾನ, ಮತ್ತೆ ಕೆಲವು ಕಡೆ ಕತ್ತಲು : ಏನಿದು ಹೊಸ ಸಂಶೋಧನೆ?

21/04/2026 7:20 PM1 Min Read

ಇರಾನ್ ಜೊತೆಗಿನ ಕದನ ವಿರಾಮ ವಿಸ್ತರಣೆ ಇಲ್ಲ: ‘ಅಮೆರಿಕ ಸೇನೆ ಸನ್ನದ್ಧವಾಗಿದೆ’ ಎಂದು ಗುಡುಗಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

21/04/2026 7:11 PM1 Min Read

ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಿವಾದಾತ್ಮಕ ಹೇಳಿಕೆ: ‘ಭಯೋತ್ಪಾದಕ’ ಎಂದಿದ್ದಕ್ಕೆ ತೀವ್ರ ಆಕ್ರೋಶ, ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕಾಂಗ್ರೆಸ್ ಅಧ್ಯಕ್ಷ!

21/04/2026 7:00 PM1 Min Read
Recent News

ಗುರುಗಳು ಹೇಳಿದ ಆ ಮಾತೇ ಆ ಯುವಕನ ಬದುಕು ಬದಲಿಸಿತು. ಅದೇನು ಅಂತ ಈ ಸುದ್ದಿ ಓದಿ!

21/04/2026 7:36 PM

ರೋಡ್ ರೇಜ್ ವಿವಾದ: ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಮಾವ, ಭಾವ ಸೇರಿ ಮೂವರ ಬಂಧನ !

21/04/2026 7:35 PM

ಬಸವಾದಿ ಶರಣರ ತತ್ವಗಳು ಸಮಾಜದ ಪ್ರಗತಿಗೆ ಪೂರಕ: ಶಾಸಕ ಗೋಪಾಲಕೃಷ್ಣ ಬೇಳೂರು

21/04/2026 7:32 PM

ಸಾಗರ ಪಟ್ಟಣದ ಅಭಿವೃದ್ಧಿಗೆ ₹7 ಕೋಟಿ ಮೀಸಲು: ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ

21/04/2026 7:22 PM
State News
KARNATAKA

ಗುರುಗಳು ಹೇಳಿದ ಆ ಮಾತೇ ಆ ಯುವಕನ ಬದುಕು ಬದಲಿಸಿತು. ಅದೇನು ಅಂತ ಈ ಸುದ್ದಿ ಓದಿ!

By kannadanewsnow0921/04/2026 7:36 PM KARNATAKA 3 Mins Read

ಒಬ್ಬ ಯುವಕನಿಗೆ ಬದುಕೇ ಬೇಸರವಾಗಿತ್ತು. ಯಾವುದರಲ್ಲೂ ಆಸಕ್ತಿಇಲ್ಲ. ಒಂಥರಾ ಖಿನ್ನತೆ. ಮನೆಯಲ್ಲಿ ಒಬ್ಬನೇ ಕುಳಿತಿರುತ್ತಿದ್ದ. ಸ್ನೇಹಿತರ ಜತೆಗೆ ಬೆರೆಯುವುದು ಕೂಡಾ…

ಬಸವಾದಿ ಶರಣರ ತತ್ವಗಳು ಸಮಾಜದ ಪ್ರಗತಿಗೆ ಪೂರಕ: ಶಾಸಕ ಗೋಪಾಲಕೃಷ್ಣ ಬೇಳೂರು

21/04/2026 7:32 PM

ಸಾಗರ ಪಟ್ಟಣದ ಅಭಿವೃದ್ಧಿಗೆ ₹7 ಕೋಟಿ ಮೀಸಲು: ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ

21/04/2026 7:22 PM

ಮದ್ದೂರು ಉದ್ಯೋಗ ಮೇಳ : ಗ್ರಾಮೀಣ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ – ಮನ್ ಮುಲ್ ನಿರ್ದೇಶಕ ಎಸ್‌.ಪಿ.ಸ್ವಾಮಿ

21/04/2026 7:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.