ಬೆಂಗಳೂರು: ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿರುವಂತ ಮೊಹಮ್ಮದ್ ನಲಪಾಡ್ ಗೆ ( Karnataka Youth Congress President Mohammed Nalapad ) ಚುನಾವಣೆಯ ಹೊಸ್ತಿಲಿನಲ್ಲಿಯೇ ಮತ್ತೆ ಸಂಕಷ್ಟ ಶುರುವಾಗಿದೆ. ವಿದ್ವತ್ ಮೇಲಿನ ಹಲ್ಲೆಯ ತನಿಖೆಯನ್ನು ಮುಂದುವರೆಸಲು ಸೆಷನ್ಸ್ ಕೋರ್ಟ್ ನಿರ್ಧರಿಸಿದೆ.
ಸಾರ್ವಜನಿಕರಿಗೆ ಸಿಹಿ ಸುದ್ದಿ ; ಖಾತೆಗೆ ಶೀಘ್ರ ಸಿಲಿಂಡರ್ ‘ಸಬ್ಸಿಡಿ’ ಜಮೆ, ಈಗ ₹587ಗೆ ‘LPG ಗ್ಯಾಸ್’ ಲಭ್ಯ
ಇಂದು ಈ ಸಂಬಂಧದ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ ಸೆಷನ್ಸ್ ಕೋರ್ಟ್ ಗೆ ಮೊಹಮ್ಮದ್ ನಲಪಾಡ್ ಪರ ವಕೀಲ ಶ್ಯಾಮ್ ಸುಂದರ್ ಎಸ್ ಪಿಪಿಯಾಗುವಂತಿಲ್ಲ ಎಂಬುದಾಗಿ ಆಕ್ಷೇಪ ವ್ಯಕ್ತಪಡಿಸಿದರು. ಆದ್ರೇ ನ್ಯಾಯಮೂರ್ತಿ ಎಸ್ ನಟರಾಜ್ ಅವರು, ನಲಪಾಡ್ ಪರ ವಕೀಲರ ಆಕ್ಷೇಪ ತಳ್ಳಿ ಹಾಕಿದರು. ಜೊತೆಗೆ ಸಾಕ್ಷ್ಯ ವಿಚಾರಣೆ ಮುಂದುವರೆಸಲು ಆದೇಶಿಸಿದ್ದಾರೆ.
ಅಂದಹಾಗೇ ಕೆಲ ವರ್ಷಗಳ ಹಿಂದೆ ಯುಬಿ ಸಿಟಿಯ ಪಬ್ ನಲ್ಲಿ ಮೊಹಮ್ಮದ್ ನಲವಾಡ್ ಹಾಗೂ ವಿದ್ವತ್ ಎಂಬುವರ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಲಪಾಡ್ ಅಂಡ್ ಟೀಂ ನಡೆಸಿತ್ತು. ಇದೇ ಪ್ರಕರಣದ ವಿಚಾರಣೆಯನ್ನು ಇಂದು ಮುಂದುವರೆಸುವಂತೆ ಕೋರ್ಟ್ ನಿರ್ಧರಿಸಿ, ಆದೇಶಿಸಿದೆ. ಈ ಹಿನ್ನಲೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಗೆ ಮತ್ತೆ ಸಂಕಷ್ಟ ಎದುರಾಗಿದೆ.