ತುಮಕೂರು: ಜಿಲ್ಲೆಯಲ್ಲಿ ಚಲಿಸುತ್ತಿದ್ದಂತ ಸಾರಿಗೆ ಬಸ್ಸಿಗೆ ತಲೆಕೊಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ.
ತುಮಕೂರಿನ ಕುಣಿಗಲ್ ಪಟ್ಟಣದ ಅಗ್ರಹಾರದ ಬಳಿಯಲ್ಲಿ ಚಲಿಸುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ತಲೆಕೊಟ್ಟು ಕುಣಿಗಲ್ ಪಟ್ಟಣದ ನಿವಾಸಿ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ನಿನ್ನೆಯ ಶುಕ್ರವಾರ ರಾತ್ರಿ 12.40ರ ಸುಮಾರಿಗೆ ಈ ಘಟನೆ ನಡೆದಿದೆ. ಕೆ ಎಸ್ ಆರ್ ಟಿ ಸಿ ಬಸ್ ಚಲಿಸುತ್ತಿದ್ದಂತ ವೇಳೆ ಯುವಕ ಏಕಾಏಕಿ ನುಗ್ಗಿ ಬಸ್ ಚಕ್ರಕ್ಕೆ ತಲೆಕೊಟ್ಟಿದ್ದಾನೆ. ಹೀಗಾಗಿ ಬಸ್ಸಿನ ಚಕ್ರ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕುಣಿಗಲ್ ಪಟ್ಟಣದ ನಿವಾಸಿ ತಿಮ್ಮೇಗೌಡ ಆತ್ಮಹತ್ಯೆ ಮಾಡಿಕೊಂಡ ವೀಡಿಯೋ ಸಮೀಪದ ಅಂಗಡಿಯೊಂದರಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CRIME NEWS: ಹಣಕಾಸಿನ ವಿಚಾರಕ್ಕೆ ‘ಅಣ್ಣ-ತಮ್ಮ’ನನ್ನೇ ಕೊಂದ ಸ್ನೇಹಿತ; ಹೊನ್ನಾವರ ಪೊಲೀಸರಿಂದ ಮೂವರು ಅರೆಸ್ಟ್








