ನವದೆಹಲಿ: ದೆಹಲಿಯ ಸಫ್ದರ್‌ಜಂಗ್ ಎನ್‌ಕ್ಲೇವ್‌ನಲ್ಲಿ 30 ವರ್ಷದ ಯುವ ನ್ಯಾಯಾಧೀಶ ಅಮಾನ್ ಶರ್ಮಾ ಅವರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಅಕಾಲಿಕ ನಿಧನವು ನ್ಯಾಯಾಂಗ ವಲಯದಲ್ಲಿ ತೀವ್ರ ಆಘಾತ ಮತ್ತು ದುಃಖವನ್ನು ಉಂಟುಮಾಡಿದೆ.
ಅವರು 2025ರ ಅಕ್ಟೋಬರ್‌ನಿಂದ ಕರ್ಕರ್‌ದೂಮಾ ನ್ಯಾಯಾಲಯದ ಉತ್ತರ-ಪೂರ್ವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಕಾರ್ಯದರ್ಶಿಯಾಗಿ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದರು.
ಪುಣೆಯ ಪ್ರತಿಷ್ಠಿತ ಸಿಂಬಯಾಸಿಸ್ ಲಾ ಸ್ಕೂಲ್‌ನಿಂದ ಕಾನೂನು ಪದವಿ ಪೂರೈಸಿದ್ದ ಅಮಾನ್ ಶರ್ಮಾ, ಜೂನ್ 19, 2021 ರಂದು ದೆಹಲಿ ನ್ಯಾಯಾಂಗ ಸೇವೆಗೆ ಸೇರ್ಪಡೆಗೊಂಡಿದ್ದರು. ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (JMFC) ಮತ್ತು ಸಿವಿಲ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಹಲವು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.
ಈ ದುರ್ಘಟನೆಯ ಬಗ್ಗೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಯುವ ಹಾಗೂ ಸಮರ್ಥ ನ್ಯಾಯಾಧೀಶರಾಗಿ ಗುರುತಿಸಿಕೊಂಡಿದ್ದ ಅಮಾನ್ ಶರ್ಮಾ ಅವರ ನಿಧನಕ್ಕೆ ಕಾನೂನು ಮತ್ತು ನ್ಯಾಯಾಂಗ ವಲಯದ ಗಣ್ಯರು ಹಾಗೂ ಸಹೋದ್ಯೋಗಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
BIG NEWS: ನೀವು ಅಂಗಡಿಗಳಲ್ಲಿ ₹10 ನಾಣ್ಯ ತಿರಸ್ಕರಿಸುತ್ತೀರಾ? ಎಚ್ಚರ, ನಿಮ್ಮ ವಿರುದ್ಧ ಕಾನೂನು ಕ್ರಮ ಫಿಕ್ಸ್!
ನೀವೂ ಬೆತ್ತಲಾಗಿ ಸ್ನಾನ ಮಾಡ್ತೀರಾ? ಹಾಗಿದ್ದರೆ ಈ ಅಪಾಯ ಕಟ್ಟಿಟ್ಟ ಬುತ್ತಿ!








