ಬೆಂಗಳೂರು : ಇತ್ತೀಚ್ಚಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಪೊಲೀಸರು ಅಕ್ರಮಕ್ಕೆ ಭಾರತಕ್ಕೆ ನುಸುಳಿದ್ದ ಪಾಕಿಸ್ತಾನಿ ಪ್ರಜೆಗಳನ್ನು ಅರೆಸ್ಟ್ ಮಾಡಿದ್ದರು.ಈ ವಿಚಾರವಾಗಿ ಪ್ರಿಯಾಂಕ ಖರ್ಗೆ ಅವರು ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದು, ನಿಮಗೆ ಅಲ್ಲಿ ಬಾರ್ಡರ್ ಮೆಂಟೇನ್ ಮಾಡೋಕೆ ಆಗ್ತಿಲ್ಲ, ನಮಗೆ ಇಲ್ಲಿ ಪಾಠ ಮಾಡ್ತೀರಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯ ಸರ್ಕಾರ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆದ ವಿಚಾರವಾಗಿ, ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ಭಯೋತ್ಪಾಕ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರಿಯಾಂಕ್ ಖರ್ಗೆ 10 ವರ್ಷದಿಂದ ಅವರದೇ ಸರ್ಕಾರ ಇತ್ತಲ್ವಾ? ಭಯೋತ್ಪಾದನೆ ನಿರ್ಮೂಲನೆಗೆ ಏನು ಮಾಡಿದ್ದಾರೆ? ಬೆಂಗಳೂರಿಗೆ ಪಾಕಿಸ್ತಾನಿಗಳು ಬರ್ತಾರೆ ಅಂದ್ರೆ, ಅವ್ರು ಎಲ್ಲಿಂದ ಬರ್ತಾರೆ? ನಿಮಗೆ ಅಲ್ಲಿ ಬಾರ್ಡರ್ ಮೆಂಟೇನ್ ಮಾಡೋಕೆ ಆಗ್ತಿಲ್ಲ. ನಮಗೆ ಇಲ್ಲಿ ಪಾಠ ಮಾಡ್ತೀರಾ? ಎಂದು ತಿರುಗೇಟು ನೀಡಿದ್ದಾರೆ.