ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ ಮದುವೆಯನ್ನು ತಡೆಯುವ ಮಾಟಗಾತಿ ಎಂದು ಆರೋಪಿಸಿ ತನ್ನ ತಾಯಿಯನ್ನು ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಅಬ್ದುಲ್ ಅಹ್ಮದ್ ಫರ್ಹಾನ್ ತನ್ನ ತಾಯಿ ಅಸ್ಮಾ ಫಾರೂಖ್ (67) ಳಿಗೆ ಕ್ರಿಕೆಟ್ ಬ್ಯಾಟ್ ಮತ್ತು ಕಬ್ಬಿಣದ ಪೈಪ್ನಿಂದ ಹೊಡೆದಿದ್ದಾನೆ ಎಂದು ಕೋಹ್-ಇ-ಫಿಜಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರದೀಪ್ ಗುರ್ಜಾರ್ ಪಿಟಿಐಗೆ ತಿಳಿಸಿದ್ದಾರೆ. ತನ್ನ ಸಹೋದರ ಮತ್ತು ಅತ್ತಿಗೆ ಮನೆಯಲ್ಲಿ ಇಲ್ಲದಿದ್ದಾಗ, ಫರ್ಹಾನ್ ಜಗಳದ ಸಮಯದಲ್ಲಿ ತನ್ನ ತಾಯಿಯನ್ನು ಕೊಂದಿರುವ ಘಟನೆ ನಡೆದಿದೆ ಎಂದು ಗುರ್ಜಾರ್ ಹೇಳಿದ್ದಾರೆ