ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶಿಕಾರಿಪುರದಿಂದ ಸ್ಪರ್ಧಿಸ್ತಾ ಇಲ್ಲ. ನನ್ನ ಪುತ್ರ ಬಿ.ವೈ ವಿಜಯೇಂದ್ರಗೆ ಬಿಟ್ಟುಕೊಟ್ಟಿದ್ದೇನೆ ಎಂಬುದಷ್ಟೇ ಹೇಳಿ, ಚುನಾವಣೆಗೆ ಸ್ಪರ್ಧಿಸೋದಿಲ್ಲ ಎಂದು ಹೇಳಿದ್ದಾರಷ್ಟೇ. ಅದರ ಹೊರತಾಗಿ ಅವರು ರಾಜಕೀಯಕ್ಕೆ ಗುಡ್ ಬೈ ಹೇಳಿಲ್ಲ ಎಂಬುದಾಗಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಹೇಳಿದ್ದಾರೆ.
ನಗರದಲ್ಲಿ ಇಂದು ಕಾಂಗ್ರೆಸ್ ನಲ್ಲಿ ಸಿಎಂ ಗಾದಿ ಗುದ್ದಾಟ ವಿಚಾರದ ಬಗ್ಗೆ ಮಾತನಾಡಿದಂತ ಅವರು, ಅದು ಅವರ ಪಕ್ಷದ ಆಂತರೀಕ ವಿಚಾರಕ್ಕೆ ಬಿಟ್ಟಿದ್ದು ಎಂಬುದಾಗಿ ಹೇಳಿದರು.
Tech Kannada: ‘ಗೂಗಲ್ ಮೀಟ್’ ಈಗ ‘ಯೂಟ್ಯೂಬ್’ನಲ್ಲಿ ಲೈವ್ ಮಾಡಬಹುದು.! ಆ ಬಗ್ಗೆ ಇಲ್ಲಿದೆ ಮಾಹಿತಿ | Google Meet
ಇನ್ನೂ ಬಿಎಸ್ವೈ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಅಂತಾ ಹೇಳಿದ್ದಾರಷ್ಟೇ, ರಾಜಕೀಯದಿಂದ ನಿವೃತ್ತಿ ಘೋಷಿಸಿಲ್ಲ. ಅವರು ರಾಜಕಾಣದಲ್ಲಿ ಸಕ್ರಿಯವಾಗಿ ಇರುತ್ತಾರೆ ಎಂದರು.
ಡಿ.ಕೆ ಶಿವಕುಮಾರ್ ರಿಂದ ಒಕ್ಕಲಿಗ ಕಾರ್ಡ್ ಪ್ಲೇ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ, ಥ್ಯಾಂಕ್ಸ್ ಎಂದಷ್ಟೇ ಹೇಳಿ ತೆರಳಿದ್ರು.
ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದರ ಹಿಂದಿನ ಸ್ಪಷ್ಟ ಕಾರಣವೇನು.? ಬಿಜೆಪಿಗೆ ರಮೇಶ್ ಬಾಬು ಪ್ರಶ್ನೆ