ಯಾದಗಿರಿ : ರಾಜ್ಯದಲ್ಲಿ ಅನಿಷ್ಟ ಪದ್ಧತಿ ಸಾಮಾಜಿಕ ಬಹಿಷ್ಕಾರ ಇನ್ನು ಜೀವಂತವಾಗಿದೆ. ಹೌದು ತಮ್ಮದೇ ಸಮುದಾಯದಿಂದ 12 ಕುಟುಂಬಗಳಿಗೆ ಬಹಿಷ್ಕಾರದ ಶಿಕ್ಷೆ ನೀಡಲಾಗಿದೆ ಈ ಒಂದು ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆದಿದೆ.
ಸ್ವಕೋಳಿ ಸಾಳಿ ಸಮುದಾಯದ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ತಮ್ಮದೇ ಸಮುದಾಯದಿಂದ 12 ಕುಟುಂಬಗಳು ಬಹಿಷ್ಕಾರಗೊಂಡಿವೆ. ಕಳೆದ 8 ವರ್ಷಗಳಿಂದ ಕುಟುಂಬದ ಸದಸ್ಯರು ಈ ಒಂದು ಸಂಕಷ್ಟ ಎದುರಿಸುತ್ತಿದ್ದಾರೆ. ಸಮುದಾಯಕ್ಕೆ ಸೇರಿದ ಸಂಘದ ಬಗ್ಗೆ ಆಸ್ತಿ ಲೆಕ್ಕ ಕೇಳಿದ್ದಕ್ಕೆ ಬಹಿಷ್ಕಾರ ಹಾಕಿದ್ದಾರೆ. ಶಹಾಪುರದ ನಗರದಲ್ಲಿರುವ ಜಿಹ್ವೇಶ್ವರ ಕಲ್ಯಾಣ ಮಂಟಪ ಹಾಗೂ 18 ವಾಣಿಜ್ಯ ಮಳಿಗೆಗಳ ಆದಾಯದ ಬಗ್ಗೆ 20 ಕುಟುಂಬಗಳು ಪ್ರಶ್ನೆ ಮಾಡಿದ್ದವು.
ಸಂಘಕ್ಕೆ ಸೇರಿ ಆಸ್ತಿಗಳಿಂದ ವಾರ್ಷಿಕ 25 ಲಕ್ಷ ಆದಾಯ ಹರಿದು ಬರುತ್ತೆ ಆದಾಯದ ಬಗ್ಗೆ 20 ಕುಟುಂಬಗಳು ಪ್ರಶ್ನೆ ಮಾಡಿದ್ದವು. ಪ್ರಶ್ನೆ ಮಾಡಿದ್ದಕ್ಕೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿವೆ. 20 ರಲ್ಲಿ 8 ಕುಟುಂಬಗಳು ದಂಡ ಕಟ್ಟಿ ಬಹಿಷ್ಕಾರದಿಂದ ಮುಕ್ತಿ ಪಡೆದಿದ್ದು, ಇನ್ನು 12 ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿವೆ.








