ಬೆಂಗಳೂರು: ದೇಶಾದ್ಯಂತ ಹರ್ ಘರ್ ತಿರಂಗಾ ಕಾರ್ಯಕ್ರಮದ ನಿಮಿತ್ತ ರಾಷ್ಟ್ರಧ್ವಜವನ್ನು ( National Flag ) ಪ್ರತಿಯೊಬ್ಬರ ಮನೆಗಳ ಮೇಲೆ, ಕಚೇರಿಗಳಲ್ಲಿ ಹಾರಿಸಲಾಗುತ್ತಿದೆ. ಈ ಮೂಲಕ ರಾಷ್ಟ್ರಪ್ರೇಮವನ್ನು ತೋರಲಾಗುತ್ತಿದೆ. ಈ ವೇಳೆಯಲ್ಲಿ ಪುಟ್ಟ ಮಗುವಿನ ರಾಷ್ಟ್ರಪ್ರೇಮವನ್ನು ಕಂಡಂತ ನೆಟ್ಟಿಗರು, ಆ ಮಗುವಿಗೊಂದು ಸೆಲ್ಯೂಟ್ ಎಂಬುದಾಗಿ ಹೇಳುತ್ತಿದ್ದಾರೆ.
Karnataka Politics: ಟೇಕಾಫ್ ಆಗದ ಬಿಜೆಪಿಯ ‘ಡಬಲ್ ಇಂಜಿನ್’ನನ್ನು ಈಗ ತಳ್ಳಲಾಗುತ್ತಿದೆ – ಕಾಂಗ್ರೆಸ್ ವ್ಯಂಗ್ಯ
ಹೌದು.. ಇಂತದ್ದೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ( Social Media ) ಇದೀಗ ವೈರಲ್ ಆಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ, ಸ್ವಾತಂತ್ರ್ಯ ದಿನಾಚರಣೆಗೂ ( Independence Day ) ಮುನ್ನಾ ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ನಿಮಿತ್ತ ಸೈನಿಕರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ
ವಿಮಾನ ನಿಲ್ದಾಣದ ಹೊರಗೆ ಗನ್ ಹಿಡಿದು ಭದ್ರತೆಯಲ್ಲಿದ್ದಂತ ಸೈನಿಕರನ್ನು ಕಂಡಂತ ಪುಟ್ಟ ಮಗುವೊಂದು, ತನ್ನ ಕೈಯಲ್ಲಿ ಹಿಡಿದಿದ್ದಂತ ರಾಷ್ಟ್ರಧ್ವಜವನ್ನು ನೀಡಿದೆ. ಮಗುವಿನ ಕೈಯಿಂದ ರಾಷ್ಟ್ರಧ್ವಜವನ್ನು ಪಡೆದಂತ ಸೈನಿಕರು, ರಾಷ್ಟ್ರಧ್ವಜಕ್ಕೆ ಗೌರವ ವಂದನೆಯ ಸಲುವಾಗಿ ಮಗುವಿಗೆ ಸೆಲ್ಯೂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಆ ಪುಟ್ಟ ಮಗು ಕೂಡ ಸೆಲ್ಯೂಟ್ ಮಾಡಿದೆ.
ಸಾರ್ವಜನಿಕರೇ ಎಚ್ಚರ ; ವಾಟ್ಸಾಪ್ನಲ್ಲಿ ‘ಬಿಲ್ ಕ್ಲಿಯರ್ ಮಾಡಿ’ ಅಂತಾ ಮೆಸೇಜ್ ಬಂದ್ರೆ ಹುಷಾರು.!
ಈ ಎಲ್ಲಾ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೋಡುವಂತ ನೆಟ್ಟಿಗರೆಲ್ಲರೂ ಮಗುವಿನ ರಾಷ್ಟ್ರಪ್ರೇಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಕೆಲವರು ವ್ಹಾ ಮಗುವಿನ ರಾಷ್ಟ್ರಪ್ರೇಮಕ್ಕೆ ಸೆಲ್ಯೂಟ್.. ಜೈ ಹಿಂದ್ ಎಂಬುದಾಗಿಯೂ ಪ್ರಶಂಸಿಸಿದ್ದಾರೆ. ಆ ವೈರಲ್ ವೀಡಿಯೋ ( Viral Video ) ಈ ಕೆಳಗಿದೆ ನೀವು ನೋಡಿ..
ವ್ಹಾ! 👏 ಮಗುವಿನ ರಾಷ್ಟ್ರಪ್ರೇಮಕ್ಕೆ ಸೆಲ್ಯೂಟ್! ಜೈ ಹಿಂದ್! 🇮🇳#AzadikaAmritMahatsov | #HarGharTiranga2022 pic.twitter.com/edOlVbLQS1
— Muniswamy S (@bjp_muniswamy) August 13, 2022