ಮೈಸೂರು : ಸೆಪ್ಟೆಂಬರ್ 22 ರಿಂದ ವಿಶ್ವ ಪ್ರಸಿದ್ಧ ದಸರಾ ನಡೆಯಲಿದ್ದು, ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಅಪರಾಧವನ್ನು ತಡೆಗಟ್ಟುವ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಏರ್ಪಡಿಸುವ ದೃಷ್ಟಿಯಿಂದ ಸಮಗ್ರ ಬಂದೋಬಸ್ತ್ ಯೋಜನೆಯನ್ನು ತಯಾರಿಸಲಾಗಿದೆ.
ಮೈಸೂರು ದಸರಾ ಹಬ್ಬದ ಕಾರ್ಯಕ್ರಮಗಳು ದಿನಾಂಕ 22-09-2025 ರಿಂದ ದಿನಾಂಕ 02-10-2025 ರವರೆಗೆ ಮೈಸೂರು ನಗರದಲ್ಲಿ ನಡೆಯಲಿವೆ. ಈ ನಾಡಹಬ್ಬಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಅಪರಾಧವನ್ನು ತಡೆಗಟ್ಟುವ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಏರ್ಪಡಿಸುವ ದೃಷ್ಟಿಯಿಂದ ಸಮಗ್ರ ಬಂದೋಬಸ್ತ್ ಯೋಜನೆಯನ್ನು ತಯಾರಿಸಲಾಗಿದೆ.
ಈ ಸಾಲಿನಲ್ಲಿ ದಸರಾ ಪ್ರಯುಕ್ತ ಮೈಸೂರು ಅರಮನೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕುಪ್ಪಣ್ಣ ಪಾರ್ಕ್ನಲ್ಲಿ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಚಾಮುಂಡಿ ಬೆಟ್ಟದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನಗಳ ಭೇಟಿ, ಮೃಗಾಲಯ, ಯುವ ಸಂಭ್ರಮ, ಆಹಾರ ಮೇಳ, ರೈತ ದಸರಾ, ಕುಸ್ತಿ ಪಂದ್ಯಾವಳಿ, ವಿಶ್ವಪ್ರಸಿದ್ಧ ಜಂಬೂ ಸವಾರಿ, ಬನ್ನಿಮಂಟಪದಲ್ಲಿ ಪಂಜಿನ ಕವಾಯಿತು, ಅರಮನೆಯ ಆವರಣದಲ್ಲಿ ಲಯ ಲಹರಿ ಕಾರ್ಯಕ್ರಮ. ಸಾರೋಟ್ ಪ್ರದರ್ಶನ, ದಸರಾ ಕವಿಗೋಷ್ಠಿ, ಸಮೂಹ ವಾಧ್ಯಮೇಳ, ಮಾರುಕಟ್ಟೆ ಪ್ರದರ್ಶನ, ದೀಪಾಲಂಕಾರ, ಏರ್ ಶೋ. ಡೋನ್ ಶೋ ಈ ರೀತಿಯ ಹತ್ತು ಹಲವಾರು ಕಾರ್ಯಕ್ರಮವನ್ನು ದಸರಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದು, ಲಕ್ಷಾಂತರ ಜನರು ದಸರಾ ಸಮಯದಲ್ಲಿ ಮೈಸೂರು ನಗರಕ್ಕೆ ಆಗಮಿಸುತ್ತಾರೆ.
ಅರಮನೆ ಸುತ್ತಾಮುತ್ತಾ ವಾಹನ ಸಂಚಾರವನ್ನು 1ನೇ ಹಂತದ ಬಂದೋಬಸ್ತ್ ಯೋಜನೆಯಲ್ಲಿ Clock & Anti Clock wise ಮಾದರಿಯಲ್ಲಿ ಹಾಗೂ 2ನೇ ಹಂತದ ಬಂದೋಬಸ್ತ್ ಯೋಜನೆಯಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಿ (No Traffic zone) ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಹೊಸದಾಗಿ ಏರ್ ಶೋ ಪ್ರದರ್ಶನವನ್ನು ಏರ್ಪಡಿಸಿದ್ದು ದಿನಾಂಕ 27-09-2025 ರಂದು ಹೆಲಿಕಾಪ್ಟರ್ ಮೂಲಕ ಸಾರಂಗ ತಂಡದಿಂದ ಪ್ರದರ್ಶನವನ್ನು ಮತ್ತು ದಿನಾಂಕ 01-10-2025 ರಂದು ಸೂರ್ಯಕಿರಣ್ ತಂಡದಿಂದ ಏರ್ ಶೋ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 28-09-2025 2 29-08-2025 क 01-10-2025 02-10-2025 ರಂದು ಡೋನ್ ಶೋ ಪ್ರದರ್ಶನವನ್ನು ನಾಲ್ಕು ದಿನಗಳ ಕಾಲ ಬನ್ನಿಮಂಟಪ ಮೈದಾನದಲ್ಲಿ ಏರ್ಪಡಿಸಲಾಗಿದೆ.
ಮೈಸೂರು ನಗರದಾದ್ಯಂತ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಒಟ್ಟು 138 ಕಿ.ಮೀ ಅಂತರದಲ್ಲಿ ದೀಪಾಲಂಕಾರ ವ್ಯವಸ್ಥೆಯನ್ನು ಮಾಡಿದ್ದು, ಕಳೆದ ಬಾರಿಗಿಂತ ಈ ಸಾಲಿನಲ್ಲಿ ದೀಪಾಲಂಕಾರದ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ.
ದಸರಾ-2025 ರ ಉದ್ಘಾಟನೆಗೆ ಸಂಬಂಧಿಸಿದಂತೆ ದಿನಾಂಕ 09-09-2025 ರಂದು ದಕ್ಷಿಣ ಕನ್ನಡ, ಮಂಗಳೂರು, ಕೊಡಗು ಮತ್ತು ಮೈಸೂರು ಜಿಲ್ಲೆಯ ಅನೇಕ ಸಂಘಟನೆಯ ಕಾರ್ಯಕರ್ತರುಗಳು ಮೈಸೂರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚಾಮುಂಡಿ ಬೆಟ್ಟದ ಶ್ರೀ.ಚಾಮುಂಡೇಶ್ವರಿ ದೇವಸ್ಥಾನದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರಿಂದ ಅಶಾಂತಿ ಉಂಟಾಗಿದ್ದು, ಮುಂಜಾಗ್ರತೆ ಕ್ರಮವಾಗಿ ಸುಮಾರು 450 ರಿಂದ 500 ಕಾರ್ಯಕರ್ತರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಲಾಗಿದೆ.
ದಿನಾಂಕ 22-09-2025 ರಂದು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲವು ಸಂಘಟನೆಗಳ ಕಾರ್ಯಕರ್ತರುಗಳು ಪ್ರತಿಭಟನೆ ಹಾಗೂ ಕಪ್ಪುಪಟ್ಟಿ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಬಂದೋಬಸ್ತ್ ಅವಶ್ಯಕತೆ ಇರುತ್ತದೆ.
ಬಂದೋಬಸ್ತ್ ಯೋಜನೆಯು ಎರಡು ಹಂತಗಳಲ್ಲಿದ್ದು. ಮೊದಲನೆಯ ಹಂತವು ದಿನಾಂಕ 22-09-2025 ರಿಂದ ದಿನಾಂಕ 29-09-2025ರ ವರೆಗೆ ಮತ್ತು ಎರಡನೇ ಹಂತವು ದಿನಾಂಕ 30-09-2025 ರಿಂದ ದಿನಾಂಕ 02-10-2025 ರ ವರೆಗೆ ಇರುತ್ತದೆ.
ಮೇಲ್ಕಂಡ ಬಂದೋಬಸ್ತ್ ಯೋಜನೆಗೆ ಮೈಸೂರು ನಗರದಲ್ಲಿ ಲಭ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಸಶಸ್ತ್ರ ತುಕಡಿಗಳನ್ನು ನಿಯೋಜಿಸಿದ್ದು, ಬಂದೋಬಸ್ತ್ ಯೋಜನೆಯಂತೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಸಶಸ್ತ್ರ ತುಕಡಿಗಳನ್ನು ನಿಯೋಜಿಸಲು ಕೊರತೆ ಇರುವುದರಿಂದ, ಕೊರತೆಗೆ ಅನುಗುಣವಾಗಿ 1 ಮತ್ತು 2ನೇ ಹಂತದ ಬಂದೋಬಸ್ಗೆ ಹೊರ ಘಟಕಗಳಿಂದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಾಗೂ ಸಶಸ್ತ್ರ ತುಕಡಿಗಳನ್ನು ಕೆಳಕಂಡ ಟೇಬಲ್ನಲ್ಲಿ ನಮೂದಿಸಿರುವಂತೆ ನೀಡಲು ತಮ್ಮಲ್ಲಿ ಕೋರಲಾಗಿದೆ.