ಬೆಂಗಳೂರು: ವೈರಲ್ ಆಗಿರುವಂತ ಹಾಸನ ಅಶ್ಲೀಲ ವೀಡಿಯೋದಲ್ಲಿ ಯಾರೇ ಇದ್ರೂ ಕ್ರಮ ಕೈಗೊಳ್ಳಲಿ. ನಾನು ನಮ್ಮ ಕುಟುಂಬದವರು ಇದ್ದರೂ ರಕ್ಷಣೆ ಮಾಡುವುದಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ.
ಇಂದು ನಗರದಲ್ಲಿ ತುರ್ತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇತ್ತೀಚೆಗೆ ರಾಜ್ಯದಲ್ಲಿ ಅತ್ಯಂತ ಕೆಟ್ಟ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಸಮಾಜದಲ್ಲಿ ಉತ್ತಮ ಬದುಕು ಕಾಣಬೇಕು. ಆ ರೀತಿಯ ಬದುಕಿಗೆ ಧಕ್ಕೆಯಾಗಬಾರದು. ಇದು ನೋವಿನ ಸಂಗತಿಯಾಗಿದೆ ಎಂದರು.
ಏಪ್ರಿಲ್.21ರಂದು ಹಾಸನ ಪೆನ್ ಡ್ರೈವ್ ಅಶ್ಲೀಲ ವೀಡಿಯೋಗಳನ್ನು ಇಡೀ ರಾಜ್ಯಾಧ್ಯಂತ ಬಿಡುಗಡೆ ಮಾಡಿದ್ರು. ಪೊಲೀಸ್ ಅಧಿಕಾರಿಗಳನ್ನ ಇಟ್ಟುಕೊಂಡು ವೀಡಿಯೋ ಹಂಚಿದ್ದಾರೆ. ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ಹಲವು ಕಡೆಗಳಲ್ಲಿ ವೀಡಿಯೋ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದರು.
ಅಶ್ಲೀಲ ವೀಡಿಯೋ ಸಂಬಂಧ ಏಪ್ರಿಲ್.22ರಂದು ಪ್ರಜ್ವಲ್ ಏಜೆಂಟ್ ಪೂರ್ಣ ಚಂದ್ರ ಹಾಸನ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಚುನಾವಣೆ ಅಧಿಕಾರಿಗಳಿಗೂ ದೂರು ಕೊಟ್ಟಿದ್ದಾರೆ. ಏಪ್ರಿಲ್.21ರ ರಾತ್ರಿ ಪ್ರಜ್ವಲ್ ವೀಡಿಯೋ ಬಿಡುಗಡೆ ಕ್ಷಣಗಣನೆ ಅಂತ ಲಿಂಕ್ ಕೊಟ್ಟಿದ್ದರು ಎಂದು ಹೇಳಿದರು.
ಅಶ್ಲೀಲ ವೀಡಿಯೋ ಸಂಬಂಧ ಯಾರೇ ಇದ್ದರೂ ರಕ್ಷಣೆ ಮಾಡೋದಿಲ್ಲ. ನಮ್ಮ ಕುಟುಂಬದವರೇ ಇದ್ರೂ ನಾನು ರಕ್ಷಣೆ ಮಾಡೋದಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟ ಪಡಿಸಿದರು.
‘ಪೊಲೀಸರು ಪೆನ್ ಡ್ರೈವ್ ವಿತರಿಸಿದ್ರೂ, ಚುನಾವಣಾ ಆಯೋಗ ಕ್ರಮ ಕೈಗೊಂಡಿಲ್ಲ’ : ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ
ಭಾರತೀಯ ಸೇನೆಯಿಂದ ಭರ್ಜರಿ ಭೇಟೆ : ಜಮ್ಮುಕಾಶ್ಮೀರದ ಕುಲ್ಗಾಮದಲ್ಲಿ ಮೂವರು ಉಗ್ರರು ಫಿನಿಶ್!