Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜೂನ್ 1ರಿಂದ ಕರ್ನಾಟಕದಲ್ಲಿ ಶಾಲೆಗಳು ಆರಂಭ: ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ

ರಾಜ್ಯಸಭೆ ಚುನಾವಣೆ ಕುರಿತು ಚರ್ಚೆಗೆ ಸಿಎಂ ದೆಹಲಿಗೆ ತೆರಳಿದ್ದಾರೆ : ಸಚಿವ ಈಶ್ವರ ಖಂಡ್ರೆ ಹೇಳಿಕೆ

BREAKING : ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಮುಕ್ತಾಯ : ಕೆಲವೇ ಕ್ಷಣಗಳಲ್ಲಿ ಡಿಕೆಶಿ ಜೊತೆಗೂ ರಾಹುಲ್ ಚರ್ಚೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ನಿವೃತ್ತ ಶಿಕ್ಷಕರಿಗೆ’ ಗುಡ್ ನ್ಯೂಸ್ : ಸರ್ಕಾರದಿಂದ `ಗಳಿಕೆ ರಜೆ ನಗದೀಕರಣ’ಕ್ಕೆ ಅನುದಾನ ಬಿಡುಗಡೆ !
KARNATAKA

ರಾಜ್ಯದ `ನಿವೃತ್ತ ಶಿಕ್ಷಕರಿಗೆ’ ಗುಡ್ ನ್ಯೂಸ್ : ಸರ್ಕಾರದಿಂದ `ಗಳಿಕೆ ರಜೆ ನಗದೀಕರಣ’ಕ್ಕೆ ಅನುದಾನ ಬಿಡುಗಡೆ !

By kannadanewsnow57

ಬೆಂಗಳೂರು: ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ 2024-25 ಮತ್ತು 2025-26ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಬಾಕಿ ಇದ್ದ ‘ಗಳಿಕೆ ರಜೆ ನಗದೀಕರಣ’ (Earned Leave Encashment) ಸೌಲಭ್ಯಕ್ಕಾಗಿ ರಾಜ್ಯ ಸರ್ಕಾರವು ಭಾರಿ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಹೊರಬಿದ್ದಿರುವ ಈ ಆದೇಶದನ್ವಯ, ವಿಜಯಪುರ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳ ವ್ಯಾಪ್ತಿಯ ತಾಲ್ಲೂಕುಗಳಿಗೆ ಒಟ್ಟು ₹752.71 ಲಕ್ಷ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

ವರದಿಯ ಮುಖ್ಯಾಂಶಗಳು:

ಹಿರಿತನದ ಆಧಾರದಲ್ಲಿ ಪಾವತಿ: 2024-25ನೇ ಸಾಲಿನಲ್ಲಿ ನಿವೃತ್ತರಾದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಬಳಿಕ 2025-26ನೇ ಸಾಲಿನಲ್ಲಿ (ಏಪ್ರಿಲ್ 2024 ರಿಂದ ಜನವರಿ 2026ರವರೆಗೆ) ನಿವೃತ್ತರಾದವರ ಹಿರಿತನದ ಪಟ್ಟಿಯನ್ನು ಸಿದ್ಧಪಡಿಸಿ ಹಣ ಪಾವತಿಸಲು ಸೂಚಿಸಲಾಗಿದೆ.

ಗಡುವು ನಿಗದಿ: ಬಿಡುಗಡೆಯಾದ ಅನುದಾನವು ವ್ಯಪಗತವಾಗದಂತೆ (Lapse ಆಗದಂತೆ) ಮಾರ್ಚ್ 9, 2026ರ ಒಳಗೆ ವೆಚ್ಚ ಭರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ವಿಳಂಬವಾಗಿ ಅನುದಾನ ವಾಪಸ್ ಹೋದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ನಿಯಮಗಳ ಪಾಲನೆ: ಗಳಿಕೆ ರಜೆ ಲೆಕ್ಕಾಚಾರದಲ್ಲಿ ಕಂಡುಬಂದಿದ್ದ ಲೋಪದೋಷಗಳನ್ನು ಸರಿಪಡಿಸಿ, KCSR ನಿಯಮ 113(5)ರ ಅನ್ವಯ ಗರಿಷ್ಠ 300 ದಿನಗಳ ಮಿತಿಗೆ ಒಳಪಟ್ಟು ನಗದೀಕರಣ ಪ್ರಕ್ರಿಯೆ ನಡೆಸಲು ಆದೇಶಿಸಲಾಗಿದೆ.

ವಿಳಂಬಕ್ಕೆ ಮುಕ್ತಿ: ಈ ಹಿಂದೆ ಮಾಹಿತಿ ನೀಡಲು ವಿಳಂಬ ಮಾಡಿದ್ದ ಹಾಗೂ ಅಪೂರ್ಣ ಮಾಹಿತಿ ನೀಡಿದ್ದ ಜಿಲ್ಲೆಗಳ ಪ್ರಸ್ತಾವನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಈಗ ಅನುದಾನ ಬಿಡುಗಡೆ ಮಾಡುವ ಮೂಲಕ ನಿವೃತ್ತ ನೌಕರರ ದಶಕಗಳ ಕಾಯುವಿಕೆಗೆ ತೆರೆ ಎಳೆಯಲಾಗಿದೆ.

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:

ಜಿಲ್ಲಾ ಉಪನಿರ್ದೇಶಕರು (DDPI) ಮತ್ತು ತಾಲ್ಲೂಕು ಶಿಕ್ಷಣಾಧಿಕಾರಿಗಳು ಸೇವಾ ಪುಸ್ತಕದಲ್ಲಿನ (Service Register) ಗಳಿಕೆ ರಜೆ ಮಾಹಿತಿಯನ್ನು ಮರುಪರಿಶೀಲಿಸಿ, ಯಾವುದೇ ತಪ್ಪುಗಳಿಲ್ಲದಂತೆ ಖಚಿತಪಡಿಸಿಕೊಂಡು ಬಿಲ್ ಸಲ್ಲಿಸಲು ಸೂಚಿಸಲಾಗಿದೆ.

ಈ ನಿರ್ಧಾರದಿಂದಾಗಿ ಸಾವಿರಾರು ನಿವೃತ್ತ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಆರ್ಥಿಕ ನೆರವು ದೊರೆಯಲಿದ್ದು, ನಿವೃತ್ತ ಜೀವನಕ್ಕೆ ಆಸರೆಯಾಗಲಿದೆ.

Good news for the state's 'retired teachers': Government releases grant for 'earned leave monetization'!
Share. Facebook Twitter LinkedIn WhatsApp Email

Related Posts

BREAKING : ಜೂನ್ 1ರಿಂದ ಕರ್ನಾಟಕದಲ್ಲಿ ಶಾಲೆಗಳು ಆರಂಭ: ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ

2 Mins Read

ರಾಜ್ಯಸಭೆ ಚುನಾವಣೆ ಕುರಿತು ಚರ್ಚೆಗೆ ಸಿಎಂ ದೆಹಲಿಗೆ ತೆರಳಿದ್ದಾರೆ : ಸಚಿವ ಈಶ್ವರ ಖಂಡ್ರೆ ಹೇಳಿಕೆ

1 Min Read

BREAKING : ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಮುಕ್ತಾಯ : ಕೆಲವೇ ಕ್ಷಣಗಳಲ್ಲಿ ಡಿಕೆಶಿ ಜೊತೆಗೂ ರಾಹುಲ್ ಚರ್ಚೆ!

1 Min Read
Recent News

BREAKING : ಜೂನ್ 1ರಿಂದ ಕರ್ನಾಟಕದಲ್ಲಿ ಶಾಲೆಗಳು ಆರಂಭ: ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ

ರಾಜ್ಯಸಭೆ ಚುನಾವಣೆ ಕುರಿತು ಚರ್ಚೆಗೆ ಸಿಎಂ ದೆಹಲಿಗೆ ತೆರಳಿದ್ದಾರೆ : ಸಚಿವ ಈಶ್ವರ ಖಂಡ್ರೆ ಹೇಳಿಕೆ

BREAKING : ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಮುಕ್ತಾಯ : ಕೆಲವೇ ಕ್ಷಣಗಳಲ್ಲಿ ಡಿಕೆಶಿ ಜೊತೆಗೂ ರಾಹುಲ್ ಚರ್ಚೆ!

BREAKING : ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡುತ್ತಾರೆ, ಡಿಕೆಶಿ ಸಿಎಂ ಆಗ್ತಾರೆ : ಶಾಸಕ ಜನಾರ್ದನರೆಡ್ಡಿ ಸ್ಪೋಟಕ ಹೇಳಿಕೆ!

State News
KARNATAKA

BREAKING : ಜೂನ್ 1ರಿಂದ ಕರ್ನಾಟಕದಲ್ಲಿ ಶಾಲೆಗಳು ಆರಂಭ: ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ

By ಸುರೇಶ್‌ KARNATAKA 2 Mins Read

ಬೆಂಗಳೂರು: ಬೇಸಿಗೆ ರಜೆಯ ಮಜ ಮುಗಿಸಿ ಮಕ್ಕಳು ಮರಳಿ ಶಾಲೆಗೆ ತೆರಳುವ ಸಮಯ ಹತ್ತಿರ ಬಂದಿದೆ. ಜೂನ್ 1ರಿಂದ ಕರ್ನಾಟಕದಾದ್ಯಂತ…

ರಾಜ್ಯಸಭೆ ಚುನಾವಣೆ ಕುರಿತು ಚರ್ಚೆಗೆ ಸಿಎಂ ದೆಹಲಿಗೆ ತೆರಳಿದ್ದಾರೆ : ಸಚಿವ ಈಶ್ವರ ಖಂಡ್ರೆ ಹೇಳಿಕೆ

BREAKING : ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಮುಕ್ತಾಯ : ಕೆಲವೇ ಕ್ಷಣಗಳಲ್ಲಿ ಡಿಕೆಶಿ ಜೊತೆಗೂ ರಾಹುಲ್ ಚರ್ಚೆ!

BREAKING : ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡುತ್ತಾರೆ, ಡಿಕೆಶಿ ಸಿಎಂ ಆಗ್ತಾರೆ : ಶಾಸಕ ಜನಾರ್ದನರೆಡ್ಡಿ ಸ್ಪೋಟಕ ಹೇಳಿಕೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.