Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಂತಾರದ ಬಗ್ಗೆ ಮರುತನಿಖೆ ಆದೇಶ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ

BIG NEWS: ಅಭಿವೃದ್ಧಿಯ ಬಂಡಿ ಇನ್ಮುಂದೆ ನಿಮ್ಮ ಹೆಗಲಿಗೆ: ನಿಯೋಜಿತ ಸಿಎಂ ಡಿಕೆಶಿಗೆ ಸಿದ್ಧರಾಮಯ್ಯ ಭಾವನಾತ್ಮಕ ಪತ್ರ

ಜೂನ್.1ರಂದು ಕಲಬುರ್ಗಿಯಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ: ಮಾಜಿ ಶಾಸಕ ತೇಲ್ಕೂರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರೇ ಗಮನಿಸಿ : ಕಚೇರಿಗೆ ಅಲೆಯುವಂತಿಲ್ಲ, ಮೊಬೈಲ್‌ ನಲ್ಲೇ ಪಡೆಯಿರಿ `ಸೆಂಟ್ರಲ್ ಫಾರ್ಮರ್ ಐಡಿ’  
KARNATAKA

ರಾಜ್ಯದ ರೈತರೇ ಗಮನಿಸಿ : ಕಚೇರಿಗೆ ಅಲೆಯುವಂತಿಲ್ಲ, ಮೊಬೈಲ್‌ ನಲ್ಲೇ ಪಡೆಯಿರಿ `ಸೆಂಟ್ರಲ್ ಫಾರ್ಮರ್ ಐಡಿ’  

By kannadanewsnow57

ರೈತ ಬಾಂಧವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಇನ್ನು ಮುಂದೆ ರೈತರು ತಮ್ಮ ‘ಸೆಂಟ್ರಲ್ ಫಾರ್ಮರ್ ಐಡಿ’ (Central Farmer ID) ಯನ್ನು ಪಡೆಯಲು ಯಾವುದೇ ಕಚೇರಿಗಳಿಗೆ ಅಲೆಯಬೇಕಿಲ್ಲ. ರೈತರು ಸ್ವತಃ ತಮ್ಮ ಮೊಬೈಲ್ ಮೂಲಕವೇ ಆನ್‌ಲೈನ್‌ನಲ್ಲಿ ಕೇವಲ ಎರಡು ಪ್ರಮುಖ ಹಂತಗಳಲ್ಲಿ ಇದನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ.

ಫ್ರೂಟ್ಸ್ (FRUITS) ಪೋರ್ಟಲ್ ಮೂಲಕ ನೋಂದಣಿ ಪ್ರಕ್ರಿಯೆ:

ರೈತರು ಮೊಟ್ಟಮೊದಲಿಗೆ ರಾಜ್ಯ ಸರ್ಕಾರದ ‘ಫ್ರೂಟ್ಸ್’ (FRUITS) ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಪ್ರಮುಖವಾಗಿ ಎರಡು ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಮೊದಲನೆಯದು ಸಿಟಿಜನ್ ಲಾಗಿನ್ (Citizen Login) ಪಡೆಯುವುದು ಹಾಗೂ ಎರಡನೆಯದು ಸೆಂಟ್ರಲ್ ಫಾರ್ಮರ್ ಐಡಿ ಸೃಷ್ಟಿಸುವುದು.

ಹಂತ-ಹಂತದ ವಿಧಾನ (Step-by-Step Guide):

ವೆಬ್‌ ಸೈಟ್‌ ಗೆ ಭೇಟಿ ನೀಡಿ: ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಬ್ರೌಸರ್ ತೆರೆದು, ಕರ್ನಾಟಕ ಸರ್ಕಾರದ ಅಧಿಕೃತ ಫ್ರೂಟ್ಸ್ ವೆಬ್‌ಸೈಟ್‌ ಗೆ (https://fruits.karnataka.gov.in) ಭೇಟಿ ನೀಡಿ.

ಸಿಟಿಜನ್ ಲಾಗಿನ್ (Citizen Login): ಮುಖಪುಟದಲ್ಲಿ ಕಾಣುವ ‘ಸಿಟಿಜನ್ ಲಾಗಿನ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ, ಆ ಸಂಖ್ಯೆಗೆ ಬರುವ ಓಟಿಪಿ (OTP) ಯನ್ನು ಹಾಕಿ ಲಾಗಿನ್ ಆಗಿ.

ಸೆಂಟ್ರಲ್ ಫಾರ್ಮರ್ ಐಡಿ ಆಯ್ಕೆ: ಲಾಗಿನ್ ಆದ ನಂತರ ನಿಮ್ಮ ಪ್ರೊಫೈಲ್ ಡ್ಯಾಶ್‌ ಬೋರ್ಡ್ ತೆರೆಯುತ್ತದೆ. ಅಲ್ಲಿ ‘ಸೆಂಟ್ರಲ್ ಫಾರ್ಮರ್ ಐಡಿ ಕ್ರಿಯೇಟ್ ಮಾಡಿ’ (Create Central Farmer ID) ಎಂಬ ಲಿಂಕ್ ಅಥವಾ ಆಯ್ಕೆಯನ್ನು ಹುಡುಕಿ ಕ್ಲಿಕ್ ಮಾಡಿ.

ಇ-ಕೆವೈಸಿ (e-KYC) ಪ್ರಕ್ರಿಯೆ: ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸುವ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ರೈತರ ಸಹಮತಿ (Farmer Consent): ಇ-ಕೆವೈಸಿ ಪೂರ್ಣಗೊಂಡ ತಕ್ಷಣ, ಸರ್ಕಾರದ ಯೋಜನೆಗಳಿಗೆ ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಲು ಅನುಮತಿ ಕೇಳುವ ‘ರೈತರ ಸಹಮತಿ’ ಪುಟ ತೆರೆಯುತ್ತದೆ. ಅಲ್ಲಿನ ನಿಯಮಗಳನ್ನು ಓದಿ, ಬಾಕ್ಸ್ ಮೇಲೆ ಟಿಕ್ ಮಾಡುವ ಮೂಲಕ ನಿಮ್ಮ ಒಪ್ಪಿಗೆಯನ್ನು (Submit) ಸೂಚಿಸಿ.

ಐಡಿ ಸೃಷ್ಟಿ: ಈ ಮೇಲಿನ ಹಂತಗಳು ಮುಗಿದ ತಕ್ಷಣವೇ, ಪರದೆಯ ಮೇಲೆ ನಿಮ್ಮ ‘ಸೆಂಟ್ರಲ್ ಫಾರ್ಮರ್ ಐಡಿ’ ಯಶಸ್ವಿಯಾಗಿ ಸೃಷ್ಟಿಯಾದ ಕುರಿತು ಸಂದೇಶ ಬರುತ್ತದೆ ಹಾಗೂ ನಿಮ್ಮ ಐಡಿ ನಂಬರ್ ಕಾಣಿಸಿಕೊಳ್ಳುತ್ತದೆ. ಇದನ್ನು ಸ್ಕ್ರೀನ್‌ಶಾಟ್ ತೆಗೆದುಟ್ಟುಕೊಳ್ಳಿ ಅಥವಾ ಬರೆದಿಟ್ಟುಕೊಳ್ಳಿ.

ಹೆಚ್ಚುವರಿ ಮಾಹಿತಿ:

ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, ಮುಖ್ಯವಾಗಿ ಇ-ಕೆವೈಸಿ (e-KYC) ಮತ್ತು ರೈತರ ಸಹಮತಿ (Farmer Consent) ಎಂಬ ಈ ಎರಡು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರೆ ಸಾಕು ಯಶಸ್ವಿಯಾಗಿ ‘ಸೆಂಟ್ರಲ್ ಫಾರ್ಮರ್ ಐಡಿ’ ಕ್ರಿಯೇಟ್ ಆಗುತ್ತದೆ.

ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಿದ್ದಲ್ಲಿ ಮಾತ್ರ ಪ್ರೊಫೈಲ್‌ನಲ್ಲಿ ‘ಮೊಬೈಲ್ ನಂಬರ್’ ಆಯ್ಕೆ ಬಳಸಿ ಹೊಸ ನಂಬರ್‌ಗೆ ಓಟಿಪಿ ಪಡೆಯುವ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬಹುದು, ಇಲ್ಲದಿದ್ದರೆ ಅದರ ಅಗತ್ಯವಿರುವುದಿಲ್ಲ.

ಈ ಮಾಹಿತಿಯು ರೈತರಿಗೆ ಸರ್ಕಾರದ ಬೆಂಬಲ ಬೆಲೆ, ಸಬ್ಸಿಡಿ, ಬರ ಪರಿಹಾರ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ನೇರವಾಗಿ ಹಾಗೂ ಶೀಘ್ರವಾಗಿ ಪಡೆಯಲು ಅತ್ಯಂತ ಉಪಯುಕ್ತವಾಗಿದೆ. ರೈತರು ಯಾವುದೇ ಮಧ್ಯವರ್ತಿಗಳಿಲ್ಲದೆ ಸ್ವತಃ ತಾವೇ ಡಿಜಿಟಲ್ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬಹುದು.

get the 'Central Farmer ID' on your mobile State Farmers of the take note: No need to go to the office
Share. Facebook Twitter LinkedIn WhatsApp Email

Related Posts

BIG NEWS: ಅಭಿವೃದ್ಧಿಯ ಬಂಡಿ ಇನ್ಮುಂದೆ ನಿಮ್ಮ ಹೆಗಲಿಗೆ: ನಿಯೋಜಿತ ಸಿಎಂ ಡಿಕೆಶಿಗೆ ಸಿದ್ಧರಾಮಯ್ಯ ಭಾವನಾತ್ಮಕ ಪತ್ರ

3 Mins Read

ಜೂನ್.1ರಂದು ಕಲಬುರ್ಗಿಯಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ: ಮಾಜಿ ಶಾಸಕ ತೇಲ್ಕೂರ

2 Mins Read

ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ಮುಖಂಡ ಅಶೋಕ್ ಬೇಳೂರು ಆಗ್ರಹ

1 Min Read
Recent News

ವಂತಾರದ ಬಗ್ಗೆ ಮರುತನಿಖೆ ಆದೇಶ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ

BIG NEWS: ಅಭಿವೃದ್ಧಿಯ ಬಂಡಿ ಇನ್ಮುಂದೆ ನಿಮ್ಮ ಹೆಗಲಿಗೆ: ನಿಯೋಜಿತ ಸಿಎಂ ಡಿಕೆಶಿಗೆ ಸಿದ್ಧರಾಮಯ್ಯ ಭಾವನಾತ್ಮಕ ಪತ್ರ

ಜೂನ್.1ರಂದು ಕಲಬುರ್ಗಿಯಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ: ಮಾಜಿ ಶಾಸಕ ತೇಲ್ಕೂರ

​LPG ಗ್ರಾಹಕರಿಗೆ ಪ್ರಮುಖ ಸೂಚನೆ: ಜೂನ್ 1ರಿಂದ ‘ಒಂದು ಮನೆ, ಒಂದು ಗ್ಯಾಸ್ ಸಂಪರ್ಕ’ ನಿಯಮ ಕಡ್ಡಾಯ!

State News
KARNATAKA

BIG NEWS: ಅಭಿವೃದ್ಧಿಯ ಬಂಡಿ ಇನ್ಮುಂದೆ ನಿಮ್ಮ ಹೆಗಲಿಗೆ: ನಿಯೋಜಿತ ಸಿಎಂ ಡಿಕೆಶಿಗೆ ಸಿದ್ಧರಾಮಯ್ಯ ಭಾವನಾತ್ಮಕ ಪತ್ರ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕನಾಗಿ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ,…

ಜೂನ್.1ರಂದು ಕಲಬುರ್ಗಿಯಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ: ಮಾಜಿ ಶಾಸಕ ತೇಲ್ಕೂರ

ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ಮುಖಂಡ ಅಶೋಕ್ ಬೇಳೂರು ಆಗ್ರಹ

BIG BREAKING: ಅಜ್ಜಯ್ಯ ನೀಡಿದ ಶುಭ ಮುಹೂರ್ತದಂತೆ ಡಿಕೆಶಿ ಪಟ್ಟ: ಜೂ.3ರಂದು ಸಂಜೆ 4.05ಕ್ಕೆ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.