ಚೈನ್ನೈ : ತಮಿಳುನಾಡಿನ ಚೆನ್ನೈನಲ್ಲಿ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ತಮಿಳುನಾಡು ಸಿಎಂ ಆದ ಬಳಿಕ ವಿಜಯ್ ಮೊದಲ ಭಾಷಣ ಮಾಡಿದ್ದು ಇದು ನನ್ನ ಗೆಲುವಲ್ಲ ಇದು ತಮಿಳುನಾಡಿನ ಜನತೆಯ ಗೆಲುವು. ಇಂದಿನಿಂದ ತಮಿಳುನಾಡಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಹೇಳಿದರು.
ಪ್ರಣಾಳಿಕೆಯ ಮೊದಲ ಭರವಸಿಗೆ ವಿಜಯ್ ಸಹಿ ಹಾಕಿದ ಬಳಿಕ ಮಾತನಾಡಿದ ಅವರು, ನಾನು ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸುತ್ತೇನೆ.10 ಲಕ್ಷ ಕೋಟಿ ಸಾಲವನ್ನು ನನ್ನ ಮೇಲೆ ಹೊರಿಸಿದ್ದಾರೆ. ಸ್ಟಾಲಿನ್ ನೇತೃತ್ವದ ಹಿಂದಿನ ಸರ್ಕಾರ ರಾಜ್ಯದ ಖಜಾನೆ ಖಾಲಿ ಮಾಡಿದೆ. ಮೇಲೆ ಏಳಲು ಕಷ್ಟವಾಗಿದೆ. ತಮಿಳುನಾಡಿನ ಆರ್ಥಿಕ ದುಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ನಾನು ಬಂದಿದ್ದೇನೆ. ರಾಜ್ಯದ ಆರ್ಥಿಕತೆ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ. ತಮಿಳುನಾಡಿನಲ್ಲಿ ಇದೀಗ ಹೊಸ ಯುಗ ಆರಂಭವಾಗಿದೆ. ತಮಿಳುನಾಡಿನ ಎಂಟು ಕೋಟಿ ಜನರು ನಮ್ಮವರೇ ನಿಮ್ಮ ಒಂದು ರೂಪಾಯಿಯನ್ನು ಲೂಟಿ ಹೊಡೆಯಲು ಬಿಡಲ್ಲ ಎಂದು ತಿಳಿಸಿದರು.
ತಮಿಳು ನಾಡಿನ ಜನತೆ ನನಗೆ ಇಂತಹ ದೊಡ್ಡ ಅವಕಾಶವನ್ನು ಕೊಟ್ಟಿದ್ದೀರಾ ನನಗೆ ಸ್ವಲ್ಪ ಕಾಲಾವಕಾಶವನ್ನು ನೀವು ಕೊಡಬೇಕು ನಾನು ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ. ನನಗೆ ಬೆಂಬಲ ಕೊಟ್ಟ ಕಾಂಗ್ರೆಸ್ ಪಕ್ಷದ AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ನನ್ನ ಗೆಳೆಯರಾದ ರಾಹುಲ್ ಗಾಂಧಿ ಸೇರಿದಂತೆ ಬೆಂಬಲ ಸೂಚಿಸಿದ ಎಲ್ಲಾ ಪಕ್ಷದ ನಾಯಕರಿಗೂ ಧನ್ಯವಾದ ಎಂದು ತಿಳಿಸಿದರು.







