ದೊಡ್ಡಬಳ್ಳಾಪುರ: ದೇಶದಲ್ಲಿ ನರೇಂದ್ರ ಮೋದಿಯವರು ( Modi ) ಪ್ರಧಾನಿಯಾಗಿರೋವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ( Congress Party ) ಅಧಿಕಾರಕ್ಕೆ ಬರೋದಕ್ಕೆ ಬಿಡೋದಿಲ್ಲ. ಬಿಜೆಪಿ ಆಡಳಿತ ( BJP Government ) ಮುಂದುವರೆಯಲಿದೆ ಎಂಬುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( BS Yediyurappa ) ಸವಾಲ್ ಹಾಕಿದ್ದಾರೆ.
ಇಂದು ನಡೆದಂತ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಈ ಭಾಗದಲ್ಲಿ ಬಿಜೆಪಿ ಹೆಚ್ಚು ಶಕ್ತಿಯುತವಾಗಿ ಬೆಳೆಯದೇ ಇದ್ದಂತ ಸಂದರ್ಭದಲ್ಲಿ, ಸಚಿವ ಸುಧಾಕರ್ ಮೂರು ನಾಲ್ಕು ಲಕ್ಷ ಸೇರುವಂತೆ ಜನಗಳನ್ನು ಸೇರಿಸಿ ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಈ ಭಾಗದಲ್ಲಿ ಮುಂದೆ ಹೆಚ್ಚಿನ ಬಿಜೆಪಿ ಶಾಸಕರು ಗೆದ್ದು ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎಂಬುದಾಗಿ ಹೇಳುತ್ತೇನೆ ಎಂದರು.
ರಾಹುಲ್ ಗಾಂಧಿಯವರು ಬಡತನದ ಬಗ್ಗೆ ಮಾತನಾಡೋದಕ್ಕೆ ಶುರು ಮಾಡಿದ್ದಾರೆ. ಅವರ ಮನೆಯಲ್ಲಿಯೇ ಮೂರು ಜನರು ಪ್ರಧಾನಿಯಾಗಿ ಹೋಗಿದ್ದಾರೆ. ಆದ್ರೇ ಬಡತನ ನಿವಾರಣೆಯಾಗಿಲ್ಲ. ಮೋದಿ ಪ್ರಧಾನಿಯಾದ ನಂತ್ರ ಈ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದೆ. ನೀರಾವರಿಗೆ ಹೆಚ್ಚು ಹಣಕೊಟ್ಟು, ಕೆರೆಕಟ್ಟೆ ತುಂಬಿಸೋ ಕೆಲಸ ಮಾಡಿದ್ದೇವೆ ಎಂದರು.
ನಾನು ವಿಧಾನಮಂಡಲದಲ್ಲಿ ನಿಂತು ಹೇಳಿದ್ದೆ. ಸಿದ್ಧರಾಮಯ್ಯನವರೇ ( Siddaramaiah ) ಎಲ್ಲಿಯವರೆಗೆ ಈ ದೇಶದ ಪ್ರಧಾನಿಯಾಗಿ ಮೋದಿ ಇರುತ್ತಾರೋ ಅಲ್ಲಿಯವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದಕ್ಕೆ ಬಿಡೋದಿಲ್ಲ. ಈ ಮಾತು ಮತ್ತೊಮ್ಮೆ ಹೇಳುತ್ತೇನೆ ಎಂದರು.