ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ವಂಡರ್ಲಾ ಹಾಲಿಡೇಸ್ ಲಿಮಿಟೆಡ್ ಇದೀಗ “ಸ್ಕೈ ಟಿಲ್ಟ್” ಎಂಬ ವಿನೂತನ ರೈಡ್ನನ್ನು ಬೆಂಗಳೂರು ಪಾರ್ಕ್ನಲ್ಲಿ ( wonderla bangalore ) ಪರಿಚಯಿಸಿದೆ.
ಖ್ಯಾತ ನಟಿ ಮೇಘನಾ ರಾಜ್ ಅವರು ನೂತನ ರೈಡ್ನನ್ನು ಉದ್ಘಾಟಿಸಿದರು. ವಂಡರ್ಲಾ ಹಾಲಿಡೇಸ್ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪಿಲ್ಲಿ ಹಾಗೂ ಬೆಂಗಳೂರು ವಂಡರ್ಲಾ ಪಾರ್ಕ್ನ ಮುಖ್ಯಸ್ಥರಾದ ಎಚ್.ಎಸ್. ರುದ್ರೇಶ್ ಅವರು ಉಪಸ್ಥಿತರಿದ್ದರು.
ಕೋವಿಡ್ ಸೋಂಕಿತರ ಪರೀಕ್ಷಾ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ಗೆ ಕ್ರಮ: ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ
ಮನರಂಜನಾ ತಾಣವಾದ ವಂಡರ್ಲಾದಲ್ಲಿ ಈಗಾಗಲೇ ಸಾಕಷ್ಟು ಗೇಮ್ಗಳು ಜನರನ್ನು ರಂಜಿಸುತ್ತಿದ್ದು, ಇದೀಗ ಈ ಕುಟುಂಬಕ್ಕೆ ಮತ್ತೊಂದು ರೈಡ್ ಸೇರ್ಪಡೆಗೊಂಡಿದೆ. ಆಕಾಶದಲ್ಲಿ ತೇಲುವ ಅನುಭವ ಪಡೆಯಲು ಇಚ್ಚಿಸುವ ಪ್ರತಿಯೊಬ್ಬರಿಗೂ ಈ ರೈಡ್ ಇಷ್ಟವಾಗಲಿದೆ. ಸ್ಕೈ ಟಿಲ್ಟ್ ಹೆಸರಿನ ಈ ರೈಡ್ 150 ಅಡಿ ಎತ್ತರದ ಕಟ್ಟದ ಉದ್ದದಷ್ಟಿದ್ದು, ಗಾಜಿನ ಗೋಡೆಯಂತೆ ನಿರ್ಮಿಸಲಾಗಿದೆ. 14-ಅಂತಸ್ತಿನ ಮೇಲಿರುವ ಈ ಸ್ಕೈ ಟಿಲ್ಟ್ ಕೆಳಗೆ ವಾಲಲಿದದೆ.
ಈ ಕುರಿತು ಮಾತನಾಡಿದ ವಂಡರ್ಲಾ ಹಾಲಿಡೇಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಅರುಣ್ ಕೆ. ಚಿಟ್ಟಿಲಪಿಲ್ಲಿ, ವಂಡರ್ಲಾ ಹಿಂದಿನಿಂದಲೂ ವಿನೂತನ ರೈಡ್ಗಳನ್ನು ಪರಿಚಯಿಸುವುದಕ್ಕಾಗಿ ಶ್ರಮಿಸುತ್ತಲೇ ಇದೆ. ಇದು ನಮ್ಮ ಜವಾಬ್ದಾರಿ ಕೂಡ ಹೌದು. ಜನರನ್ನು ಇನ್ನಷ್ಟು ರಂಜಿಸುವ ಉದ್ದೇಶದಿಂದ ಅವರ ನಿರೀಕ್ಷೆಗಳಿಗೆ ತಕ್ಕಂತಹ ರೈಡ್ಗಳನ್ನು ಪರಿಚಯಿಸುವುದು ನಮ್ಮ ಉದ್ದೇಶವಾಗಿದ್ದು, ಈ ನೂತನ ರೈಡ್ ಇದಕ್ಕೆ ನಿದರ್ಶನವಾಗಿದೆ. ಬೆಂಗಳೂರು ಪಾರ್ಕ್ನಲ್ಲಿ ಸ್ಕೈ ಟಿಲ್ಟ್ ರೈಡ್ನನ್ನು ಪ್ರಾರಂಭಿಸುತ್ತಿರುವುದು ಖುಷಿ ನೀಡಿದ್ದು, ಈ ವಿನೂತನ ಗೇಮ್ನನ್ನು ವಿನ್ಯಾಸಗೊಳಿಸಿದ ನಮ್ಮ ಎಂಜಿನಿರಿಂಗ್ ತಂಡವನ್ನು ಈ ವೇಳೆ ಅಭಿನಂದಿಸುತ್ತೇನೆ ಎಂದರು.
ಇನ್ನು, ವಂಡರ್ಲಾ ಪಾರ್ಕ್ನಲ್ಲಿ ವಾಟರ್ ಹಾಗೂ ಡ್ರೈ ಗೇಮ್ ಸೇರಿದಂತೆ ಒಟ್ಟು 62 ರೈಡ್ಗಳಿದೆ. ಈ ಕ್ರಿಸ್ಮಸ್ ಆಚರಣೆಯ ಸಲುವಾಗಿ ಡಿಸೆಂಬರ್ 24 ರಿಂದ ಜನವರಿ 1 ರವರೆಗೆ ಹಲವಾರು ಕಾರ್ಯಕ್ರಮ ನಡೆಸಲಾಗುತ್ತಿದ್ದು, ಲೈವ್ ಶೋ, ಆಹಾರ ಉತ್ಸವ, DJ ಕಾರ್ಯಕ್ರಮಗಳು ಒಳಗೊಂಡಿದೆ.
ಪಂಚಮಸಾಲಿಗೆ ಮೀಸಲಾತಿ ಘೋಷಿಸಿದ್ರೆ ಸಿಎಂಗೆ ಸನ್ಮಾನ, ಇಲ್ಲವಾದಲ್ಲಿ ಹೋರಾಟ : ಬಸವ ಮೃತ್ಯುಂಜಯ ಸ್ವಾಮೀಜಿ
ರೈಡ್ ಉದ್ಘಾಟಿಸಿ ಮಾತನಾಡಿದ ನಟಿ ಮೇಘನಾ ರಾಜ್, ವಂಡರ್ ಲಾದಂತಹ ಪ್ರತಿಷ್ಠಿತ ಮನರಂಜನಾ ಸಂಸ್ಥೆಯ ನೂತನ ರೈಡ್ ಉದ್ಘಾಟಿಸಿದ್ದು ಅತ್ಯಂತ ಸಂತಸ ತಂದಿದೆ. ಸ್ಕೈ ಟಿಲ್ಟ್ ರೈಡ್ ಪ್ರತಿಯೊಬ್ಬರೂ ಇಷ್ಟವಾಗುವ ರೈಡ್ ಆಗಲಿದೆ ಎಂದು ಭಾವಿಸುವೆ ಎಂದರು.
ಈ ರೈಡ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾವ ಹೆಸರಿಡಬೇಕು ಎಂದು ಸ್ಪರ್ಧೆ ನಡೆಸಿ, ಅಂತಿಮವಾಗಿ ಕೆ. ಹಂಸಿನಿ ಎಂಬುವವರು ನೀಡಿದ ಹೆಸರನ್ನು ಆಯ್ಕೆ ಮಾಡಲಾಯಿತು. ಈ ಸ್ಪರ್ಧೆಯಲ್ಲಿ ವಿಜೇತರಾದ ಹಂಸಿನಿ ಅವರಿಗೆ ವಂಡರ್ಲಾ ವತಿಯಿಂದ ವರ್ಷಪೂರ್ತಿ ವಂಡರ್ಲಾಗೆ ಭೇಟಿ ನೀಡುವ ಉಚಿತ ವಾರ್ಷಿಕ ಪಾಸ್ನನ್ನು ಹಸ್ತಾಂತರಿಸಲಾಯಿತು.
ಸ್ಕೈ ಟಿಲ್ಟ್ ವಿವರ
SKY TILT ಈಗಾಗಲೇ ಪಾರ್ಕ್ನಲ್ಲಿರುವ ಹೈ-ಥ್ರಿಲ್ ರೈಡ್ಗಳ ಪಟ್ಟಿಗೆ ಸೇರ್ಪಡೆಯಾಗಿದ್ದು, 60 ಸವಾರಿಗಳು ಮತ್ತು ಆಕರ್ಷಣೆಗಳೊಂದಿಗೆ ವಂಡರ್ಲಾ ಬೆಂಗಳೂರನ್ನು ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ಆಗಿ ಹೊರಹೊಮ್ಮಿದೆ.
ಸ್ಕೈ ಟಿಲ್ಟ್ ಒಂದು ಹೊಸ ರೀತಿಯ ಆಕರ್ಷಣೆಯಾಗಿದ್ದು, ಅಲ್ಲಿ ನೀವು ಎತ್ತರದ ಕಟ್ಟಡದ ಮೇಲಿನಿಂದ ಓರೆಯಾದ ಭಾವನೆಯನ್ನು ಅನುಭವಿಸಬಹುದು. ಇದು ಗಾಜಿನ ಗೋಡೆಯಾಗಿದ್ದು, 14-ಅಂತಸ್ತಿನ ಸ್ಕೈ ವೀಲ್ ಟವರ್ನ ಮೇಲ್ಭಾಗದಿಂದ ವಾಲುತ್ತದೆ, ಇದು ವಂಡರ್ಲಾ ಪಾರ್ಕ್ಗಳ ಸಾಂಪ್ರದಾಯಿಕ ಆಕಾಶ ಚಕ್ರವನ್ನು ಸಹ ಹೊಂದಿದೆ.
ಈ ರೋಮಾಂಚಕ ಸವಾರಿಯು ಒಂದು ಸಮಯದಲ್ಲಿ ಆರು ಜನರನ್ನು ಒಯ್ಯಬಹುದು ಮತ್ತು 30 ಡಿಗ್ರಿಗಳವರೆಗೆ ಓರೆಯಾಗಬಹುದು, ಇದು ಇಡೀ ಕುಟುಂಬವು ಒಟ್ಟಿಗೆ ಅನುಭವಿಸಲು ಪರಿಪೂರ್ಣವಾದ ಸವಾರಿಯಾಗಿದೆ. ಜೊತೆಗೆ, ಇಷ್ಟು ಎತ್ತರದಿಂದ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು.
ವಂಡರ್ಲಾ ಆನ್ಲೈನ್ ಬುಕಿಂಗ್ ಪೋರ್ಟಲ್ bookings.wonderla.com ಮೂಲಕ ತಮ್ಮ ಪ್ರವೇಶ ಟಿಕೆಟ್ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕರೆ – 080 37230333 / 080 35073966.