ಕೆಎನ್ ಎನ್ ನ್ಯೂಸ್ ಡೆಸ್ಕ್ : ಈಗ ಶ್ರಾವಣ ಮಾಸ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸಾಲು ಸಾಲು ಹಬ್ಬಗಳು ಇವೆ. ಮಂಗಳಗೌರಿ, ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬ ಹೀಗೆ ಹಬ್ಬಗಳು ಬರುತ್ತದೆ. ಇದರ ಜೊತೆಗೆ ರಕ್ಷಾ ಬಂಧನ ಕೂಡ ಆಚರಿಸಲಾಗುತ್ತದೆ.
BIGG NEWS: ಮಂಡ್ಯದಲ್ಲಿ ವ್ಯಾಪಕ ಮಳೆ: ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಮುಳುಗಡೆ; ಭಕ್ತರಿಗೆ ನಿಷೇಧ
ಇದೇ ತಿಂಗಳು ೧೨ ರಂದು ದೇಶಾದ್ಯಂತ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆಯೇ ಸಹೋದರ- ಸಹೋದರಿಯರ ಬಾಂಧವ್ಯ ಮತ್ತಷ್ಟು ವೃದ್ಧಿಸುವ ಸಲುವಾಗಿ ಆಚರಣೆ ಮಾಡಲಾಗಿದೆ. ಈಗಾಗಲೇ ಮಾರುಕಟ್ಟೆ ಕಲರ್ ಕಲರ್ ರಾಖಿಗಳು ಲಗ್ಗೆ ಇಟ್ಟಿವೆ. ಇದನ್ನು ಖರೀದಿಸಲು ಜನರು ಮುಗಿಬೀಳುತ್ತಾರೆ. ಈ ವೇಳೆ ಮಹಿಳೆಯರು ತಮ್ಮ ಸಹೋದರರಿಗೆ ಯಾವ ರೀತಿಯ ರಾಖಿ ಕಟ್ಟಬೇಕು, ಏನು ಗಿಫ್ಟ್ ಕೊಡೋದು ಎಂದು ಪ್ಲ್ಯಾನ್ ಮಾಡುತ್ತಿದ್ದಾರೆ.
ರಕ್ಷಾ ಬಂಧನ ಹಬ್ಬಕ್ಕೆ ಇನ್ನು 3 ದಿನಗಳಷ್ಟೇ ಬಾಕಿ ಉಳಿದಿದೆ. ಮಾರುಕಟ್ಟೆಯಲ್ಲಿ ನಾನಾ ರೀತಿಯ ರಾಖಿಗಳು ದೊರೆಯುತ್ತವೆ. 10 ರೂಪಾಯಿಯ ಸಿಂಪಲ್ ರಾಖಿಯಿಂದ ಹಿಡಿದು ಸಾವಿರಾರು ರೂಪಾಯಿ ಬೆಲೆಯ ಕಣ್ಮನ ಸೆಳೆಯುವ ದುಬಾರಿ ರಾಖಿಗಳು ಸಿಗುತ್ತವೆ. ಯಾವ ರೀತಿಯ ರಾಖಿಯನ್ನು ನಿಮ್ಮ ಸಹೋದರರಿಗೆ ಆಯ್ಕೆ ಮಾಡಿಕೊಳ್ಳಬೇಕೆಂಬ ಕೆಲವೊಂದು ಸಲಹೆಗಳು ಇಲ್ಲಿವೆ.
BIGG NEWS: ಮಂಡ್ಯದಲ್ಲಿ ವ್ಯಾಪಕ ಮಳೆ: ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಮುಳುಗಡೆ; ಭಕ್ತರಿಗೆ ನಿಷೇಧ
* ವಯಸ್ಸು, ಸ್ಟೈಲ್: ತಮ್ಮ ಸಹೋದರ ಟೇಸ್ಟ್ ಮತ್ತು ಲೈಫ್ ಸ್ಟೈಲ್ ಹೇಗೆ ಎಂಬುದು ತಿಳಿದುಕೊಳ್ಳಬೇಕು.
ಆದ್ದರಿಂದ ರಾಖಿ ಖರೀದಿಸುವ ಮುನ್ನ ನಿಮ್ಮ ಸಹೋದರರ ವಯಸ್ಸು, ಸ್ಟೈಲ್, ಟೇಸ್ಟ್ ಹಾಗೂ ಅವರ ಎತ್ತರವನ್ನು ಗಮನದಲ್ಲಿಟ್ಟುಕೊಳ್ಳಿ. ಸ್ಟೈಲಿಷ್ ಆಗಿರುವವರಿಗೆ ಅಷ್ಟೇ ಸ್ಟೈಲಿಷ್ ಆದ ರಾಖಿ ಕಟ್ಟಿ, ಹಾಗೇ ಅವರ ಎತ್ತರಕ್ಕೆ ಸರಿಹೊಂದುವ ರಾಖಿಯನ್ನು ಆಯ್ಕೆ ಮಾಡಿ.
* ಸಹೋದರರ ಆಸೆ ಏನು ತಿಳಿದುಕೊಳ್ಳಿ: ಪ್ರತಿ ಬಾರಿ ಒಂದೇ ರೀತಿಯ ರಾಖಿ ಖರೀದಿಸುವ ಬದಲಿಗೆ ನಿಮ್ಮ ಅಣ್ಣ/ತಮ್ಮ ಯಾವ ರೀತಿಯ ರಾಖಿಯನ್ನು ಇಷ್ಟಪಡುತ್ತಿದ್ದಾರೆ ಎಂಬುದನ್ನು ನಿಮ್ಮ ತಂದೆ, ತಾಯಿ ಅಥವಾ ಕುಟುಂಬದ ಇತರ ಸದಸ್ಯರಿಂದ ಕೇಳಿ ತಿಳಿದುಕೊಳ್ಳಿ.
*ಆನ್ಲೈನ್ನಲ್ಲಿ ರಾಖಿ ಖರೀದಿ: ಪ್ರೀತಿಯ ಸಹೋದರರಿಗೆ ರಾಖಿ ಖರೀದಿಸುವುದು ಒಂದೆರಡು ನಿಮಿಷದ ಕೆಲಸವಲ್ಲ. ಅದಕ್ಕಾಗಿ ನೀವು ಮಾರುಕಟ್ಟೆ ಸುತ್ತಬೇಕು. ಗಂಟೆಗಟ್ಟಲೆ ಪ್ರತಿ ಅಂಗಡಿಗೆ ಅಲೆದಾಡಬೇಕು. ಆದರೆ ನೀವು ಆನ್ಲೈನ್ ಶಾಪಿಂಗ್ ಮಾಡಿದರೆ ಕುಳಿತಲ್ಲೇ ನಿಮಗಿಷ್ಟವಾರ ರಾಖಿ ಖರೀದಿಸಬಹುದು.
*ನಿಮ್ಮ ರಾಖಿಯ ಹಣ ನಿರ್ಧರಿಸಿ: ನೀವು ಎಷ್ಟು ಬೆಲೆಯ ರಾಖಿ ಖರೀದಿಸಬೇಕು ಎಂಬುದನ್ನು ಮೊದಲೇ ನಿರ್ಧರಿಸಿ. ಕಡಿಮೆ ಬೆಲೆಯ ರಾಖಿ ಖರೀದಿಸಿದ ನಂತರ ಇನ್ನೂ ಹೆಚ್ಚಿನ ಬೆಲೆಯ ರಾಖಿ ಖರೀದಿಸಬಹುದಿತ್ತು.
*ರಾಖಿ ಜೊತೆಗೆ ಗಿಫ್ಟ್ ಕೂಡಾ ನೀಡಿ:ರಾಖಿ ಖರೀದಿ ಜೊತೆಗೆ ನಿಮ್ಮ ಸಹೋದರರಿಗೆ ಏನಾದರೂ ಗಿಫ್ಟ್ ಕೂಡಾ ಖರೀದಿಸುವುದನ್ನು ಮರೆಯಬೇಡಿ. ಮಾರುಕಟ್ಟೆಯಲ್ಲಿ ರಾಖಿ ಗಿಫ್ಟ್ ಕಾಂಬೋ ಕೂಡಾ ದೊರೆಯುತ್ತದೆ.