ಥಾಣೆ: ಮಹಿಳೆಯರು ಬಟ್ಟೆ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ ಎಂದು ಯೋಗ ಗುರು ಬಾಬಾ ರಾಮ್ದೇವ್ ಶುಕ್ರವಾರ ಕಾಮಪ್ರಚೋದಕ ಹೇಳಿಕೆ ನೀಡಿದ್ದಾರೆ. ಪತಂಜಲಿ ಯೋಗ ಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿಯು ಥಾಣೆಯ ಹೈಲ್ಯಾಂಡ್ ಪ್ರದೇಶದಲ್ಲಿ ಶುಕ್ರವಾರ ಯೋಗ ವಿಜ್ಞಾನ ಶಿಬಿರ ಮತ್ತು ಮಹಿಳಾ ಸಭೆಯನ್ನು ಆಯೋಜಿಸಿತ್ತು ಈ ವೇಳೇ ಹೇಳಿದ್ದಾರೆ.
ಇದಕ್ಕೂ ಮುನ್ನ, ರಾಮ್ದೇವ್ ಅವರು ಅಮೃತಾ ಫಡ್ನವಿಸ್ ಅವರ ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸುವುದಕ್ಕಾಗಿ ಮತ್ತು ಯಾವಾಗಲೂ ಯಂಗ್ ಆಗಿ ಕಾಣಲು ಶ್ರಮಿಸುತ್ತಿರುವ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. “ಅವಳು ಯಂಗ್ ಆಗಿ ಕಾಣುವ ಉತ್ಸಾಹವನ್ನು ಹೊಂದಿದ್ದಾಳೆ ಮತ್ತು ಮುಂದಿನ 100 ವರ್ಷಗಳವರೆಗೆ ಅವಳು ಎಂದಿಗೂ ವಯಸ್ಸಾಗುವುದಿಲ್ಲ ಎಂದು ನಾನು ನಂಬುತ್ತೇನೆ. ಅವಳು ತುಂಬಾ ಲೆಕ್ಕಾಚಾರದಿಂದ ತಿನ್ನುತ್ತಾಳೆ, ಸಂತೋಷವಾಗಿರುತ್ತಾಳೆ ಮತ್ತು ಯಾವಾಗಲೂ ಮಗುವಿನ ಮುಖದಲ್ಲಿ ಕಾಣುವಂತೆ ನಗುವನ್ನು ಹೊಂದುತ್ತಾಳೆ. ನಾನು ಅದೇ ನಗುವನ್ನು ನೋಡಲು ಬಯಸುತ್ತೇನೆ ಅಂತ ಹೇಳಿದ್ದಾರೆ.
“ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಅವರು ಸಲ್ವಾರ್ ಸೂಟ್ಗಳಲ್ಲಿ ಉತ್ತಮವಾಗಿ ಕಾಣುತ್ತಾರೆ ಮತ್ತು ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಸಹ ಅವರು ಉತ್ತಮವಾಗಿ ಕಾಣುತ್ತಾರೆ” ಎಂದು ಕಣ್ಣು ರೆಪ್ಪೆ ಮಿಟುಕಿಸದೆ ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.
"महिला साडीत छान दिसतात, सलवार-सूटमध्ये छान दिसतात, माझ्या नजरेने पाहिलं, तर काही नाही घातलं तरी छान दिसतात."
-स्वामी रामदेव बाबा pic.twitter.com/FG6QheKeOm
— पवन/Pawan 🇮🇳 (@ThePawanUpdates) November 25, 2022