ಹಾಸನ: ಸುಮಾರು 20 ಲಕ್ಷ ಮೌಲ್ಯದ ಆಭರಣ ಧರಿಸಿ, ಸಂಬಂಧಿಕರೊಬ್ಬರ ಮದುವೆಗೆ ತೆರಳಿದ್ದಂತ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವಂತ ಘಟನೆ ಹಾಸನದ ಕಲ್ಕೆರೆಯಲ್ಲಿ ಬಳಿಯಲ್ಲಿ ನಡೆದಿದೆ.
ಹಾಸನ ತಾಲ್ಲೂಕಿನ ಕಲ್ಕೆರೆ ಗ್ರಾಮ, ಮೂಲತಹ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ವ್ಯಾಪ್ತಿಯ ನಿವಾಸಿ ಮಹಿಳೆಯೊಬ್ಬರು ತುಮಕೂರಿಗೆ ಸಂಬಂಧಿಕರೊಬ್ಬರ ಮದುವೆಗಾಗಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ ಧರಿಸಿ ತೆರಳಿದ್ದರು. ಕಳೆದ ಗುರುವಾರದಂದು ತೆರಳಿದ್ದಂತ ಮಹಿಳೆಯ, ದಿಢೀರ್ ನಿಗೂಢವಾಗಿ ನಾಪತ್ತೆಯಾಗಿದ್ದರು.
ನಾಪತ್ತೆಯಾಗಿದ್ದಂತ ಮಹಿಳೆಯ ಬಟ್ಟೆ, ಒಳ ಉಡುಪುಗಳು ರಸ್ತೆ ಬದಿಯಲ್ಲಿ ದೊರೆತಿದ್ದವು. ಈ ಸಂಬಂಧ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರು ಪೊಲೀಸರ ಮೂರು ತಂಡಗಳನ್ನು ಪತ್ತೆಗಾಗಿ ರಚಿಸಿದ್ದರು.
ಇಂದು ಹಾಸನ ತಾಲ್ಲೂಕಿನ ಕಲ್ಕೆರೆ ಕೆರೆ, ಸುತ್ತಮುತ್ತ ಮಹಿಳೆಯ ಪತ್ತೆಗಾಗಿ ಹುಡುಕಾಟ ನಡೆಸಿದರು. ಕಲ್ಕೆರೆ ಕೆರೆಯಲ್ಲಿ ಬೋಟ್ ಮೂಲಕ ಮಹಿಳೆಯ ಪತ್ತೆಗಾಗಿ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ. ಅಲ್ಲದೇ ಡ್ರೋನ್ ಕ್ಯಾಮರಾ ಮೂಲಕವೂ ಕೆರೆ, ಕೆರೆಯ ಸುತ್ತಮುತ್ತ ಹುಡುಕಾಟವನ್ನು ಪೊಲೀಸರು ನಡೆಸಿದರು. ಆದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ.
20 ಲಕ್ಷ ಮೌಲ್ಯದ ಆಭರಣ ಧರಿಸಿ ಮಹಿಳೆ ದಿಢೀರ್ ನಾಪತ್ತೆಯಾಗಿರೋದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಅಲ್ಲದೇ ಈ ಪ್ರಕರಣವನ್ನು ಹಾಸನ ಪೊಲೀಸರು ಬೇಧಿಸೋದಕ್ಕೂ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಪೊಲೀಸರು ನಾಪತ್ತೆಯಾದ ಮಹಿಳೆಯ ಪತ್ತೆಗಾಗಿ ತೀವ್ರ ಶೋಧ, ತನಿಖೆಯನ್ನು ನಡೆಸುತ್ತಿದ್ದಾರೆ.
BREAKING: ಮಣ್ಣಲ್ಲಿ ಮಣ್ಣಾದ ಕನ್ನಡದ ಹಿರಿಯ ನಿರ್ದೇಶಕ ಜೋ ಸೈಮನ್, ಖ್ಯಾತ ನಿರ್ದೇಶಕ ಇನ್ನೂ ನೆನಪು ಮಾತ್ರ








