ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಮಹಿಳೆಯೊಬ್ಬರನ್ನು ತುಳಿದು ಆನೆ ಕೊಂದು ಹಾಕಿದೆ. ಇದರಿಂದ ಆಕ್ರೋಶಗೊಂಡ ಜನರು ಪ್ರತಿಭಟನೆ ನಡೆಸಿದರು. ಇಂತಹ ಪ್ರತಿಭಟನೆಯನ್ನು ಹತೋಟಿಗೆ ತರೋದಕ್ಕೆ ಪೊಲೀಸರು ಠಾಣೆ ಪ್ರಹಾರ ಕೂಡ ನಡೆಸಿದ್ದಾರೆ.
ಚಿಕ್ಕಮಗಳೂರಲ್ಲಿ ಆನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ನರ ರಾಕ್ಷಸ ಆನೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದರೂ ಸೂಕ್ತ ಕ್ರಮ ವಹಿಸದೇ ಇರೋದೇ ಇದಕ್ಕೆ ಕಾರಣ ಎಂಬುದಾಗಿ ಜನರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು.
ಇದಷ್ಟೇ ಅಲ್ಲದೇ ಪ್ರತಿಭಟನಾಕಾರರಿಂದ ಪೊಲೀಸ್ ವಾಹನವನ್ನ ಜಖಂ ಗೊಳಿಸೋದಕ್ಕೂ ಮುಂದಾದರು. ಇದನ್ನು ತಡೆಯೋದಕ್ಕೆ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿ ಬೀಸಿದರು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದಾಗಿ ಪರಿಸ್ಥಿತಿ ಕೆಲ ಕಾಲ ವಿಕೋಪಕ್ಕೂ ತಿರುಗಿತು. ಪೊಲೀಸರು-ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆಯಿತು.
ದೇವೇಗೌಡರು, ಕುಮಾರಸ್ವಾಮಿ ಒಕ್ಕಲಿಗರನ್ನು ಬೆಳೆಸಿಲ್ಲವೆಂದ ಸಿದ್ಧರಾಮಯ್ಯಗೆ HDK ಈ ತಿರುಗೇಟು








