ರಾಯ್ಪುರ(ಮಧ್ಯಪ್ರದೇಶ): ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯನ್ನು ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗುವಾಗ, ಆಂಬ್ಯುಲೆನ್ಸ್ನಲ್ಲಿ ಡೀಸೆಲ್ ಖಾಲಿಯಾಗಿದೆ. ಪರಿಣಾಮ ಮಹಿಳೆ ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಏನಿದು ಘಟನೆ?
ಬನೌಲಿ ಗ್ರಾಮದ ರೇಷ್ಮಾ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತುರ್ತು ಸೌಲಭ್ಯಕ್ಕಾಗಿ ಕುಟುಂಬಸ್ಥರು 108 ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆಂಬ್ಯುಲೆನ್ಸ್ ಗ್ರಾಮಕ್ಕೆ ಬಂದು ಮಹಿಳೆಯನ್ನು ಶಹನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲು ಮುಂದಾಗಿದೆ. ಆದ್ರೆ, ಆರೋಗ್ಯ ಕೇಂದ್ರ ತಲುಪುವ ಮೊದಲೇ ಆಂಬುಲೆನ್ಸ್ನಲ್ಲಿ ಡೀಸೆಲ್ ಖಾಲಿಯಾಗಿ ನಿರ್ಜನ ಸ್ಥಳದಲ್ಲಿ ನಿಂತಿತು. ಈ ವೇಳೆ ಬೇರೆಯವರ ಸಹಾಯ ಕೇಳಲೂ ಸಾಧ್ಯವಾಗಲಿಲ್ಲ. ಗರ್ಭಿಣಿಗೆ ಹೆರಿಗೆ ನೋವು ಹೆಚ್ಚಾದ್ದರಿಂದ ಕುಟುಂಬಸ್ಥರು ರಸ್ತೆ ಬದಿಯಲ್ಲೇ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ: ನಿರ್ಮಾಣ ಹಂತದ ವಿದ್ಯುತ್ ಕೇಂದ್ರದಲ್ಲಿ ಭೂಕುಸಿತ, ನಾಲ್ವರು ಕಾರ್ಮಿಕರ ದುರ್ಮರಣ
BIG NEWS: ʻದೇಶದ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸಲು ಕೇಂದ್ರ ಕೆಲಸ ಮಾಡುತ್ತಿದೆʼ: ಪ್ರಧಾನಿ ಮೋದಿ
BIGG NEWS : ನಟಿ ವಿನಯಪ್ರಸಾದ್ ಮನೆಯಲ್ಲಿ ಕಳ್ಳತನ : ಬೆಡ್ ರೂಮ್ ನಲ್ಲಿದ್ದ ನಗದು ಕದ್ದ ಕಳ್ಳರು
ಜಮ್ಮು ಮತ್ತು ಕಾಶ್ಮೀರ: ನಿರ್ಮಾಣ ಹಂತದ ವಿದ್ಯುತ್ ಕೇಂದ್ರದಲ್ಲಿ ಭೂಕುಸಿತ, ನಾಲ್ವರು ಕಾರ್ಮಿಕರ ದುರ್ಮರಣ