ಘಾಜಿಯಾಬಾದ್: ವಿವಾಹಿತ ಮಹಿಳೆಯೊಬ್ಬಳು ತನ್ನ ಜೊತೆ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದ ಯುವಕನನ್ನು ಕೊಂದು ಟ್ರಾಲಿ ಬ್ಯಾಗ್ನಲ್ಲಿ ತುಂಬಿ, ಅದನ್ನು ಸಾಗಿಸುತ್ತಿರುವಾಗ ಸಿಕ್ಕಿಬಿದ್ದಿರುವ ಘಟನೆ ಘಾಜಿಯಾಬಾದ್ನಲ್ಲಿ ನಡೆದಿದೆ.
ಮಹಿಳೆಯನ್ನು ಪ್ರೀತಿ ಶರ್ಮಾ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ತನ್ನ ಪತಿಯಿಂದ ಬೇರ್ಪಟ್ಟು ಫಿರೋಜ್ ಅಲಿಯಾಸ್ ಚ್ವಾನಿ (23) ಎಂಬಾತನ ಜೊತೆ ವಾಸಿಸುತ್ತಿದ್ದಳು.
ಭಾನುವಾರ ತಡರಾತ್ರಿ ಎಂದಿನಿಂತೆ ದಿನನಿತ್ಯದ ತಪಾಸಣೆಯ ವೇಳೆ ಪ್ರೀತಿ ಪೊಲೀಸರ ಕಣ್ಣಿಗೆ ಸಿಕ್ಕಿಬಿದ್ದಿದ್ದಾಳೆ. ಪ್ರೀತಿ ಕಪ್ಪು ಟ್ರಾಲಿ ಬ್ಯಾಗ್ಅನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡ ಪೊಲೀಸರು ಅನುಮಾನಗೊಂಡು ಆಕೆಯನ್ನು ತಡೆಹಿಡಿದು ಮಹಿಳಾ ಪೇದೆಯೊಬ್ಬರು ನಡೆಸಿದ ತಪಾಸಣೆ ವೇಳೆ ಬ್ಯಾಗ್ನಲ್ಲಿ ಪುರುಷನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಿ ಶರ್ಮಾ ಫಿರೋಜ್ನನ್ನು ಮದುವೆಯಾಗಲು ಬಯಸಿದ್ದಳು. ಆದ್ರೆ, ಫಿರೋಜ್ ಪೋಷಕರು ಬೇರೆ ಸಮುದಾಯದವರನ್ನು ಮದುವೆಯಾಗಲು ಅನುಮತಿಸುವುದಿಲ್ಲ ಎಂದು ಇದೇ ನೆಪದಲ್ಲಿ ಮದುವೆಯನ್ನು ನಿರಾಕರಿಸಿದ್ದರು. ಇದಕ್ಕೂ ಮೀರಿ ತನ್ನನ್ನು ಮದುವೆಯಾಗುವಂತೆ ಪ್ರೀತಿ ಫಿರೋಜ್ಗೆ ಒತ್ತಡ ಹೇರಿದಾಗ, ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಕೋಪದ ಭರದಲ್ಲಿ ರೇಜರ್ನಿಂದ ಫಿರೋಜ್ನ ಕತ್ತು ಸೀಳಿದ್ದಾಳೆ. ಇದರಿಂದ ಸಾವನ್ನಪ್ಪಿದ ಫಿರೋಜ್ನ ಶವವನ್ನು ಸಾಗಿಸಲು ಪ್ರೀತಿ ಟ್ರಾಲಿ ಬ್ಯಾಗ್ ಖರೀದಿಸಿ ಅದರೊಳಗೆ ತುಂಬಿ ಭಾನುವಾರ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಬಿಟ್ಟುಬರಲು ಯೋಚಿಸಿದ್ದಳು. ಆದ್ರೆ, ಅವಳ ಯೋಜನೆ ಈಗ ವಿಫಲವಾಗಿದೆ.
ಇದೀಗ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ ರೇಜರ್ ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS : ಬೆಳಗಾವಿಯಲ್ಲಿ ಭಾರೀ ಮಳೆಗೆ ಎರಡಂತಸ್ತಿನ ಮನೆ ಕುಸಿತ : ಅದೃಷ್ಟವಶಾತ್ 11 ಮಂದಿ ಪ್ರಾಣಾಪಾಯದಿಂದ ಪಾರು
BIGG NEWS : ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ : ಟಿಕೆಟ್ ಬುಕ್ ಮಾಡೋದು ಈಗ ಇನ್ನಷ್ಟು ಸುಲಭ!
Big news: ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಇಂದು ಬೆಳಗ್ಗೆ 11 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ