ರಾಯಚೂರು: ರೈತ ಟ್ರ್ಯಾಕ್ಟರ್ ನಲ್ಲಿ ಹುಲ್ಲು ತುಂಬಿಕೊಂಡು ಸಾಗುತ್ತಿದ್ದಂತ ವೇಳೆಯಲ್ಲಿ, ಪೊಲೀಸ್ ಜೀಪ್ ಗೆ ಟಚ್ ಆಗಿದೆ. ಇಷ್ಟಕ್ಕೆ ಕಿರಿಕ್ ತೆಗೆದಂತ ಮಹಿಳಾ ಪಿಎಸ್ಐ, ರೈತನ ಟ್ರ್ಯಾಕ್ಟರ್ ಕೀ ಕಿತ್ತುಕೊಂಡು, ಪೊಲೀಸ್ ಠಾಣೆಗೆ ಕರೆದೊಯ್ದು ದರ್ಪ ಮೆರೆದಿರೋ ಆರೋಪ ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಹುಲ್ಲಿನ ಮೇವು ಲೋಡ್ ಮಾಡಿಕೊಂಡು ರೈತ ಲಿಂಗಯ್ಯ ಎಂಬುವರು ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದರು. ಹೀಗೆ ತೆರಳುತ್ತಿದ್ದಂತ ಟ್ರ್ಯಾಕ್ಟರ್ ಪೊಲೀಸ್ ಜೀಪ್ ಗೆ ಡಿಕ್ಕಿಯಾಗಿದೆ. ಇಷ್ಟಕ್ಕೆ ಸಿರಿವಾರ ಠಾಣೆ ಮಹಿಳಾ ಪಿಎಸ್ಐ ಗೀತಾಂಜಲಿ ಎಂಬುವರು ರೈತನ ಮೇಲೆ ದರ್ಪ ಮೆರೆದಿರೋದಾಗಿ ಹೇಳಲಾಗುತ್ತಿದ್ದೆ.
Vastu Tips for Wealth: ನೀವು ಸಹ ಈ ಮಾರ್ಗಗಳನ್ನು ಅನುಸರಿಸಿ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಿ!
ರೈತನ ಟ್ರ್ಯಾಕ್ಟರ್ ಕೀ ಕಿತ್ತುಕೊಂಡಂತ ಸಿರಿವಾರ ಠಾಣೆಯ ಪಿಎಸ್ಐ ಗೀತಾಂಜಲಿಯನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಪಿಎಸ್ಐ ನಡುವೆ ಮಾತಿನ ಚಕಮಕಿ ಕೂಡ ಉಂಟಾಗಿದೆ. ಇದರಿಂದ ಕೋಪಗೊಂಡಂತ ಅವರು ಟ್ರ್ಯಾಕ್ಟರ್ ಕೀ ತೆಗೆದುಕೊಂಡು ಠಾಣೆಗೆ ಕರೆದೊಯ್ದಿರೋದಾಗಿ ತಿಳಿದು ಬಂದಿದೆ.
ಕೆಜಿಎಫ್ ಚಿತ್ರದ ಹಾಡು ತೆರವುಗೊಳಿಸಿದ ವಿಚಾರ: ಹೈಕೋರ್ಟ್ ನಿಂದ ರಾಹುಲ್ ಗಾಂಧಿ ಸೇರಿ ಹಲವು ಕೈ ನಾಯಕರಿಗೆ ನೋಟಿಸ್
ರೈತ ಲಿಂಗಯ್ಯ ಅವರನ್ನು ಪೊಲೀಸ್ ಠಾಣೆಗೆ ಕೆರೆದೊಯ್ದ ಅವರು, ಪಿಎಸ್ಐ ಗೀತಾಂಜಲಿ ಶಿಂಧೆ ದರ್ಪ ಮೆರೆದಿದ್ದಾರೆ ಎನ್ನಲಾಗುತ್ತಿದೆ. ಈ ಘಟನೆ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ರೈತನ ವಿರುದ್ಧ ದರ್ಪ ತೋರಿದಂತೆ ಲೇಡಿ ಪಿಎಸ್ಐ ವಿರುದ್ಧ ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.