ಚಿತ್ರದುರ್ಗ: ಕ್ಷೇತ್ರದ ವಿಧಾನಸಭಾ ಚುನಾವಣೆ ತೀವ್ರ ಕುತೂಹಲವನ್ನು ಮೂಡಿಸುವತ್ತ ಸಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಡುಗೊಲ್ಲ ಮುಖಂಡರಿಗೆ ( Kadugolla Leader ) ಕಾಂಗ್ರೆಸ್ ಪಕ್ಷದಿಂದ ( Congress Party ) ಟಿಕೆಟ್ ನೀಡುವಂತೆ ಒತ್ತಾಯ ಹೆಚ್ಚಿತ್ತು. ಈ ವೇಳೆ ಮುಂದಿನ ಬಾರಿ ಟಿಕೆಟ್ ಖಂಡಿತವಾಗಿ ನೀಡುವುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಭರವಸೆ ನೀಡಿದ್ದರು. ಹೀಗಾಗಿ ಈ ಬಾರಿ ಕೊಟ್ಟಮಾತನ್ನು ಸಿದ್ಧರಾಮಯ್ಯ ಉಳಿಸಿಕೊಳ್ಳುವರೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಜೊತೆಗೆ ಕಾಡುಗೊಲ್ಲ ಮುಖಂಡರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಿದ್ಯಾ ಎನ್ನುವಂತ ಕುತೂಹಲವನ್ನು ಮೂಡಿಸಿದೆ.
ಹೌದು.. ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯದವರೇ ಹೆಚ್ಚಾಗಿದ್ದು, ಅನೇಕ ತಾಲೂಕುಗಳಲ್ಲಿ ಈ ಸಮುದಾಯದವರ ಮತಗಳೇ ಯಾವುದೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನಿರ್ಣಾಯಕವೂ ಆಗಲಿವೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಮುಂಬರುವಂತ ವಿಧಾನಸಭಾ ಚುನಾವಣೆಗೆ ಸಮುದಾಯದ ಮುಖಂಡರ ಒತ್ತಾಯಕ್ಕೆ ಮಣಿದು, ವಕೀಲರು, ಕಾಡುಗೊಲ್ಲ ಮುಖಂಡರಾದಂತ ಸಿ.ಶಿವು ಯಾದವ್ ( C Shivu Yadav ) ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಕೊನೆಯ ಕ್ಷಣದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಕಾಡುಗೊಲ್ಲರ ನಾಯಕರಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದು, ತೀವ್ರ ಕುತೂಹಲ ಅಷ್ಟೇ ಅಚ್ಚರಿಯನ್ನು ಹುಟ್ಟು ಹಾಕಿದೆ. ಕಾರಣ, ಕಳೆದ ಬಾರಿ ಮುಂಬರುವಂತ ಚುನಾವಣೆಯಲ್ಲಿ ಕಾಡುಗೊಲ್ಲ ಮುಖಂಡರಿಗೆ ಟಿಕೆಟ್ ಕೊಡುವುದಾಗಿ ಸಿದ್ಧರಾಮಯ್ಯ ನೀಡಿದ್ದಂತ ಆಶ್ವಾಸನೆಯಾಗಿದೆ.
ಇಂದು ಕಾಂಗ್ರೆಸ್ ಪಕ್ಷದಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಗಾಗಿ ಅರ್ಜಿಯನ್ನು ಸಲ್ಲಿಸಿರುವಂತ ಅವರು, ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರು ಹೌದು. ಈ ಹಿಂದೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿಯೂ, ಪಕ್ಷಕ್ಕೆ ದುಡಿದಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿಯೂ ಪಾಲ್ಗೊಂಡು ಮುನ್ನಡೆಯುತ್ತಿದ್ದಾರೆ.
ಅಂದಹಾಗೇ ಇಂದು ಕಾಂಗ್ರೆಸ್ ಪಕ್ಷ ಟಿಕೆಟ್ ಗೆ ( Congress Party Ticket ) ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಈ ವೇಳೆಯಲ್ಲಿ ಕರ್ನಾಟಕ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೇರಿದಂತೆ, ಸಮುದಾಯದ ಎಲ್ಲರ ಒತ್ತಾಯದ ಮೇರೆಗೆ ಸಿ.ಶಿವು ಯಾದವ್ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಈ ಕಾಡುಗೊಲ್ಲ ಸಮುದಾಯದವರಿಗೆ ( Kadugolla Community ) ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗುತ್ತಾ? 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ಬುಡಕಟ್ಟು ಸಮುದಾಯದ ನಾಯಕರಾಗಿ ಸಿ ಶಿವು ಯಾದವ್ ಸ್ಪರ್ಧೆಗೆ ಇಳಿಯಲಿದ್ದಾರೆಯೇ.? ಇದಕ್ಕೆ ಕೈ ಅವಕಾಶ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.