Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೆಕ್ಸಿಕೋದ ಪ್ರಸಿದ್ಧ ಪಿರಮಿಡ್ ಮೇಲೆ ನಿಂತು ಪ್ರವಾಸಿಗರ ಮೇಲೆ ಗುಂಡಿನ ದಾಳಿ; ಕೆನಡಾ ಪ್ರಜೆ ಸಾವು, 13 ಜನರಿಗೆ ಗಾಯ

21/04/2026 9:29 PM

​ಇರಾನ್-ಅಮೆರಿಕ ಶಾಂತಿ ಮಾತುಕತೆ: ನಾಳೆ ಇಸ್ಲಾಮಾಬಾದ್‌ನಲ್ಲಿ ಎರಡನೇ ಸುತ್ತಿನ ಚರ್ಚೆ; ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾಗಿ

21/04/2026 9:12 PM

ಬೆಳಗಾವಿಯಲ್ಲಿ 100 ಕೋಟಿ ವೆಚ್ಚದಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ನರೇಶ್ ಕುಮಾರ್

21/04/2026 8:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಿಸ್ಟರ್ ನಿರಾಣಿ ಬಾಗಲಕೋಟೆಗೆ ಬಂದೇ ಉತ್ತರ ನೀಡುವೆ: ಸಚಿವ ಎಂ.ಬಿ.ಪಾಟೀಲ್ ತಿರುಗೇಟು
KARNATAKA

ಮಿಸ್ಟರ್ ನಿರಾಣಿ ಬಾಗಲಕೋಟೆಗೆ ಬಂದೇ ಉತ್ತರ ನೀಡುವೆ: ಸಚಿವ ಎಂ.ಬಿ.ಪಾಟೀಲ್ ತಿರುಗೇಟು

By kannadanewsnow0901/09/2024 7:53 PM

ಬೆಂಗಳೂರು : ‘ನಾನು ವಿಜಯಪುರ ಜಿಲ್ಲೆಯವ ನನಗೂ ಭಾಷೆ ಗೊತ್ತಿದೆ. ಬಾಗಲಕೋಟೆಗೇ ಬಂದು ನಿನಗೆ ನಿನ್ನ ಭಾಷೆಯಲ್ಲೇ ಉತ್ತರ ನೀಡುವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಮಾಜಿ ಸಚಿವ ಮುರುಗೇಶ‌‌ ನಿರಾಣಿ ಅವರಿಗೆ ತಿರುಗೇಟು ನೀಡಿದ್ದಾರೆ.

ನಿರಾಣಿ ಅವರು ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ವಿರುದ್ಧ ನೀಡಿರುವ ಹೇಳಿಕೆಗೆ ಸಚಿವರು ತಮ್ಮ ಎಕ್ಸ್ ಜಾಲತಾಣದಲ್ಲಿ ಭಾನುವಾರ ಪ್ರತಿಯುತ್ತರ ನೀಡಿದ್ದಾರೆ.

ಎಕ್ಸ್ ನಲ್ಲಿ ಸಚಿವರು ಬರೆದುಕೊಂಡಿರುವ ಪೂರ್ಣ ಪಾಠ ಇಲ್ಲಿದೆ.

‘ಮಿ. ಮುರುಗೇಶ ನಿರಾಣಿ ಬಾಗಲಕೋಟೆಯಲ್ಲಿ ನೀನು ಮಾಡಿರುವ ಪತ್ರಿಕಾಗೋಷ್ಠಿಯನ್ನು ಗಮನಿಸಿದ್ದೇನೆ. ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ ಯಾವುದೇ ರಿಯಾಯಿತಿ ಇಲ್ಲದೆ ಸಿ.ಎ ನಿವೇಶನ ನೀಡಿದ್ದರೂ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅನವಶ್ಯಕವಾಗಿ ಎಳೆದು ತಂದು ಹಗರಣವಾಗಿದೆ ಎಂದು ಬಿಜೆಪಿ ಅವರು ಬಿಂಬಿಸುತ್ತಿರುವುದಕ್ಕೆ ಪ್ರತಿಯಾಗಿ ನಾನು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಅವಧಿಯಲ್ಲಿ ಬಿಜೆಪಿ ನಾಯಕರು ಯಾರು ಯಾರು ಎಷ್ಟೆಷ್ಟು ಲಾಭ ಪಡೆದಿದ್ದಾರೆ ಎಂಬುದು ತಿಳಿಸುವದು ನನ್ನ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಮಿ. ನಿರಾಣಿ ತನ್ನ ಶಿಕ್ಷಣ ಸಂಸ್ಥೆ ಮತ್ತು ಸಕ್ಕರೆ ಕಾರ್ಖಾನೆಗೆ ಪಡೆದಿರುವ ಲಾಭದ ಮಾಹಿತಿಯನ್ನು ನೀಡಿದ್ದೇನೆ.
ಆದರೆ, “ದನಕಾಯುವವನು” ಎಂಬ ಶಬ್ದವನ್ನು ನಾನು ಎಲ್ಲಿಯೂ ಬಳಸಿಲ್ಲ ಮತ್ತು ಏಕವಚನದಲ್ಲೂ ನಾನು ಮಾತನಾಡಿಲ್ಲ. ಅಷ್ಟಕ್ಕೂ, ದನಕಾಯುವುದು ಗೌರವದ ಕಾಯಕ. ದನಕಾಯುವವರನ್ನು ನಾನು ಗೌರವಿಸುತ್ತೇನೆ. ಮಿ. ನಿರಾಣಿ ತಾನಾಗಿಯೇ “ದನಕಾಯುವವ” ಎಂದು ತಿಳಿದುಕೊಂಡು, ನನ್ನ ಸಂಸ್ಥೆ ಮತ್ತು ನನ್ನ ಕುರಿತು ಏಕವಚನದಲ್ಲಿ ಕೆಟ್ಟ ಭಾಷೆ ಬಳಸಿದ್ದಾನೆ. ನಾನು ವಿಜಯಪುರ ಜಿಲ್ಲೆಯವ. ಇಂಥಹ ಎಲ್ಲ ಭಾಷೆಗಳು ನನಗೂ ಬರುತ್ತವೆ. ನಾನೇ ಸ್ವತಃ ಬಾಗಲಕೋಟೆಗೆ ಬಂದು ನಿನ್ನ ಭಾಷೆಯಲ್ಲಿಯೇ ನಿನ್ನ ಸತ್ಯಾಂಶವನ್ನು ಬಿಚ್ಚಿಡುತ್ತೇನೆ.

‘ಅನವಶ್ಯಕವಾಗಿ ನನ್ನ ತಂಟೆಗೆ ಬಂದವರಿಗೆ ಹಿಂದೆಯೂ ಬಿಟ್ಟಿಲ್ಲ, ಇಂದು ಮತ್ತು ಮುಂದೆಯೂ ಬಿಡುವುದಿಲ್ಲ. ಅದರ ಕಹಿ ಅನುಭವ ಈ ಹಿಂದೆ ನಿನಗೆ ಆಗಿದೆ ಎನ್ನುವುದನ್ನು ನೆನಪಿಸುತ್ತೇನೆ ಎಂದಿದ್ದಾರೆ.

ಮಿ. ಮುರುಗೇಶ ನಿರಾಣಿ ಬಾಗಲಕೋಟೆಯಲ್ಲಿ ನೀನು ಮಾಡಿರುವ ಪತ್ರಿಕಾಗೋಷ್ಠಿಯನ್ನು ಗಮನಿಸಿದ್ದೇನೆ. ಸಿದ್ದಾರ್ಥ ಟ್ರಸ್ಟ್ ಗೆ ಯಾವುದೇ ರಿಯಾಯಿತಿ ಇಲ್ಲದೆ ಸಿಎ ನಿವೇಶನ ನೀಡಿದ್ದರೂ, ಎಐಸಿಸಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅನವಶ್ಯಕವಾಗಿ ಎಳೆದು ತಂದು ಹಗರಣವಾಗಿದೆ ಎಂದು ಬಿಜೆಪಿ ಅವರು ಬಿಂಬಿಸುತ್ತಿರುವುದಕ್ಕೆ ಪ್ರತಿಯಾಗಿ…

— M B Patil (@MBPatil) September 1, 2024

Viral Video: ಅಪ್ಪನ ದುಡ್ಡಲ್ಲಿ ಕುಂತು ತಿನ್ನೋರಿಗಿ ದುರಹಂಕಾರ ಇರುತ್ತೆ: ಆದರೆ…, ಈ ಸುದ್ದಿ ಓದಿ.! ನಿಮ್ಮ ಮನಸ್ಸೇ ಮರುಗುತ್ತೆ

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮಾಡಿದವರ ಗಮನಕ್ಕೆ : ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಈ ರೀತಿ ಚೆಕ್ ಮಾಡಿಕೊಳ್ಳಿ!

Share. Facebook Twitter LinkedIn WhatsApp Email

Related Posts

ಬೆಳಗಾವಿಯಲ್ಲಿ 100 ಕೋಟಿ ವೆಚ್ಚದಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ನರೇಶ್ ಕುಮಾರ್

21/04/2026 8:45 PM2 Mins Read

ಸಾಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಅದ್ಧೂರಿ ಶಂಕರ ಜಯಂತಿ ಆಚರಣೆ

21/04/2026 8:13 PM2 Mins Read

ಗುರುಗಳು ಹೇಳಿದ ಆ ಮಾತೇ ಆ ಯುವಕನ ಬದುಕು ಬದಲಿಸಿತು. ಅದೇನು ಅಂತ ಈ ಸುದ್ದಿ ಓದಿ!

21/04/2026 7:36 PM3 Mins Read
Recent News

ಮೆಕ್ಸಿಕೋದ ಪ್ರಸಿದ್ಧ ಪಿರಮಿಡ್ ಮೇಲೆ ನಿಂತು ಪ್ರವಾಸಿಗರ ಮೇಲೆ ಗುಂಡಿನ ದಾಳಿ; ಕೆನಡಾ ಪ್ರಜೆ ಸಾವು, 13 ಜನರಿಗೆ ಗಾಯ

21/04/2026 9:29 PM

​ಇರಾನ್-ಅಮೆರಿಕ ಶಾಂತಿ ಮಾತುಕತೆ: ನಾಳೆ ಇಸ್ಲಾಮಾಬಾದ್‌ನಲ್ಲಿ ಎರಡನೇ ಸುತ್ತಿನ ಚರ್ಚೆ; ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾಗಿ

21/04/2026 9:12 PM

ಬೆಳಗಾವಿಯಲ್ಲಿ 100 ಕೋಟಿ ವೆಚ್ಚದಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ನರೇಶ್ ಕುಮಾರ್

21/04/2026 8:45 PM

ಪಶ್ಚಿಮ ಏಷ್ಯಾದಿಂದ ತವರಿಗೆ ಮರಳಿದ 11.6 ಲಕ್ಷ ಭಾರತೀಯರು: ಇರಾಕ್ ಸಂಘರ್ಷದ ಸುಳಿಯಲ್ಲಿ ಸಿಲುಕಿದ್ದ 12 ನಾವಿಕರ ಯಶಸ್ವಿ ರಕ್ಷಣೆ

21/04/2026 8:40 PM
State News
KARNATAKA

ಬೆಳಗಾವಿಯಲ್ಲಿ 100 ಕೋಟಿ ವೆಚ್ಚದಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ನರೇಶ್ ಕುಮಾರ್

By kannadanewsnow0921/04/2026 8:45 PM KARNATAKA 2 Mins Read

ಬೆಳಗಾವಿ‌ : ಗಡಿಜಿಲ್ಲೆ ಬೆಳಗಾವಿ ನಗರದ ಹೊರವಲಯದಲ್ಲಿರುವ ಕೋಳಿಕೊಪ್ಪ (𝗞𝗼𝗹𝗶𝗸𝗼𝗽𝗽𝗮) ಗ್ರಾಮದ ಬೆಟ್ಟದ ಮೇಲೆ ಬರೋಬ್ಬರಿ 𝟭𝟬𝟬 ಕೋಟಿ ರೂ.…

ಸಾಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಅದ್ಧೂರಿ ಶಂಕರ ಜಯಂತಿ ಆಚರಣೆ

21/04/2026 8:13 PM

ಗುರುಗಳು ಹೇಳಿದ ಆ ಮಾತೇ ಆ ಯುವಕನ ಬದುಕು ಬದಲಿಸಿತು. ಅದೇನು ಅಂತ ಈ ಸುದ್ದಿ ಓದಿ!

21/04/2026 7:36 PM

ಬಸವಾದಿ ಶರಣರ ತತ್ವಗಳು ಸಮಾಜದ ಪ್ರಗತಿಗೆ ಪೂರಕ: ಶಾಸಕ ಗೋಪಾಲಕೃಷ್ಣ ಬೇಳೂರು

21/04/2026 7:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.