ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ರಾಜೀನಾಮೆ ಪತ್ರ ವೈರಲ್ ಆಗಿತ್ತು. ಆ ಬಗ್ಗೆ ಅಂದೇ ತಿಳಿಸಿದ್ದಂತ ಬಸವರಾಜ ಹೊರಟ್ಟಿ ಅವರು ನನ್ನ ಪಿಎ ವೈರಲ್ ಮಾಡಿದ್ದಾರೆ. ಸಹಿ ಮಾಡಿದಂತ ಪತ್ರ ನನ್ನ ಡ್ರಾನಲ್ಲೇ ಇದೆ ಎಂದಿದ್ದರು. ಇದೀಗ ರಾಜೀನಾಮೆ ನೀಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಜೊತೆಗೆ ಗವರ್ನರ್, ಸಚಿವರು, ಶಾಸಕರು ಇದ್ದಾರೆ. ಮಾರ್ಚ್.27ರಂದು ಕುಳಿತು ಚರ್ಚಿಸೋಣ. ಅಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಂತೆ ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ನಾನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಅಂತ ಘೋಷಿಸಿದರು.
ಅಂದಹಾಗೇ ಕೆಲ ದಿನಗಳ ಹಿಂದೆ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುವಂತ ರಾಜೀನಾಮೆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ರಾಜೀನಾಮೆ ಪತ್ರದಲ್ಲಿ ಸಹಿ ಇರಲಿಲ್ಲ. ಆಗ ಬಸವರಾಜ ಹೊರಟ್ಟಿ ಅವರು ನನ್ನ ಪಿಎ ಇದನ್ನು ಬಹಿರಂಗ ಪಡಿಸಿದ್ದಾರೆ. ನನ್ನ ಸಹಿ ಇರುವಂತ ರಾಜೀನಾಮೆ ಪತ್ರ ಡ್ರಾನಲ್ಲಿ ಇದೆ ಎಂದಿದ್ದರು.
BIG NEWS : ರಾಜ್ಯದಲ್ಲಿ ‘PUC-SSLC’ ನಕಲಿ ಅಂಕಪಟ್ಟಿ ನೀಡುತ್ತಿದ್ದ ಜಾಲ ಪತ್ತೆ : ಮೂವರು ಆರೋಪಿಗಳು ಅರೆಸ್ಟ್!