Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

BREAKING : ಹಾಸನದಲ್ಲಿ ಘೋರ ದುರಂತ : ಸ್ನೇಹಿತರ ಕಣ್ಣೆದುರೇ, ನದಿಗೆ ಇಳಿದ ಮೂವರು ಯುವಕರು ನೀರುಪಾಲು!

​107 ದಿನಗಳ ಅಮೆರಿಕ-ಇರಾನ್ ಯುದ್ಧಕ್ಕೆ ಶಾಶ್ವತ ತೆರೆ: ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ; ಜಾಗತಿಕ ಮಾರುಕಟ್ಟೆ ನಿರಾಳ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯುಗಾದಿ ಹಬ್ಬಕ್ಕೆ ಬೇವು ಬೆಲ್ಲಕ್ಕೆ ಹೆಚ್ಚು ಪ್ರಾಮುಖ್ಯತೆ ಏಕೆ?
KARNATAKA

ಯುಗಾದಿ ಹಬ್ಬಕ್ಕೆ ಬೇವು ಬೆಲ್ಲಕ್ಕೆ ಹೆಚ್ಚು ಪ್ರಾಮುಖ್ಯತೆ ಏಕೆ?

By ಸುರೇಶ್‌

ಬೌತಿಕವಾಗಿ ಬೇಸಿಗೆಯಲ್ಲಿ ಅನೇಕ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಬಿಡುಗಡೆಯಾಗುತ್ತದೆ. ಆ ಸೂಕ್ಷ್ಮಾಣು ಜೀವಿಗಳು ಶರೀರ ಮತ್ತು ಮನೆಗೆ ಪ್ರವೇಶವಾಗದಿರಲಿ ಎಂಬ ಉದ್ದೇಶದಿಂದ ಮನೆಯ ಮುಂದೆ ಮಾವು ಮತ್ತು ಬೇವನ್ನು ಇರಿಸುತ್ತಾರೆ. ಮತ್ತು ಸೇವಿಸುವುದು ಆಗಿದೆ. ಅದೇ ರೀತಿ ಆಂತರಿಕವಾಗಿ ಒಂದು ಕಾರ್ಯವನ್ನು ಮಾಡುವಾಗ ಅಲ್ಲಿ ಕಹಿ ಮತ್ತು ಸಿಹಿಯು ಇರುತ್ತದೆ. ಕೆಲಸಮಾಡುವುದು ಕಹಿಯಾದರೆ ಅದರಿಂದ ಬರುವ ಫಲವು ಸಿಹಿಯಾಗುತ್ತದೆ. ಎಲ್ಲರ ಜೀವನದಲ್ಲಿ ಸಿಹಿಯು ಉಂಟಾಗಲಿ ಕರ್ಮದ ಫಲವು ಸಿಗಲಿ ಎಂಬುದು ಆ ಪರಮಾತ್ಮನ ಶಕ್ತಿಯು ಎಲ್ಲರಲ್ಲೂ ತುಂಬಿ ಹರಿಸುವಂತಾಗಲಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ.

ಯುಗಾದಿ ಹಬ್ಬದ ವಿಶೇಷತೆ:-

ಯುಗಾದಿಯ ಅರ್ಥ: – ಯರಕಃ ಉತ್ಪನ್ನಃ ಗಮನಂ ಗಮ್ಯಂ ಧರ್ಶನಂ ಇಜ್ಞೋಪಃ

ಆತ್ಮನನ್ನು ದರ್ಶಿಸಿ ಯರಕವನ್ನು ಉತ್ಪನ್ನಿಸಿದಾಗ ಗಮ್ಯಕ್ಕೆ ಗಮನಿಸುವಂತಾಗು ಇದು ಆಂತರಿಕದ ಅರ್ಥ.

ಭೌತಿಕದಲ್ಲಿ ಯಾವಶ್ಚಕ್ತಿಯುತವಾದುದು ಉತ್ಪನ್ನಿಸು ಗಮನಿಸು ಗಮ್ಯ ಪಾದದಲ್ಲಿ ಧರ್ಮದಲ್ಲಿ ಇರಿಸಿಕೋ. ನಾವು ಏನೇ ಮಾಡಿದರು ಧರ್ಮದಲ್ಲಿ ಇರುವಂತೆ ಯಾವಶ್ಚಕ್ತಿಯುತವಾದುದನ್ನು ಗಮನಿಸಿ ಅದರಲ್ಲಿ ನಡೆಯುವಂತಾಗಬೇಕು ಎಂದು ಮೊದಲಿನ ಹಬ್ಬ ಯುಗಾದಿ ಎಂದು ಪೂರ್ವಿಕರು ಇಟ್ಟರು.

ಇದಕ್ಕೆ ಕೆಲವರು ಉಗಾದಿ ಎಂದೂ ಸಹ ಕರೆಯುತ್ತಾರೆ. ನಮ್ಮ ಜೀವನವೂ ಊರ್ವಕ್ಕೆ (ಆಕಾಶ ತತ್ವ) ಗಮನಿಸಿ ಗಮ್ಯೋ ಪಾದದಲ್ಲಿ ದರ್ಶಿಸುವಂತೆ ಇರು, ಎಂದು ಉಗಾದಿ ಎಂದೂ ಸಹ ಕರೆಯುತ್ತಾರೆ.

ಈಗ ದುರ್ಮುಖಿ ನಾಮ ಸಂವತ್ಸರ, ದರ್ಮದಲ್ಲಿ ಉಳಿದು ಮನಸ್ಸಿನಲ್ಲಿ ಅರ್ಥಬದ್ದವಾಗಿ ಉಚ್ಚರಿಸಿ ಖಂಡವಂ (ಧರಿಸುವಂತಾಗು) ಇಲ್ಲಿ ಖಂಡವಂ ಎಂಬ ಪದವು ಹಳೇ ದ್ರಾವಿಡ ಭಾಷೆಯಿಂದ ಬಂದಿರುವಂತಹ ಪದವು ಆಗಿದೆ.

ಚೈತ್ರಮಾಸ: – ಚಲನಂ ಎಂವಂ ಐಕ್ಯತ್ವಂ ಅರ್ಥಾತ್ ತತ್ವಃ ಮನೋಮನಃ ಸಹಕಾರಾತ್ವಃ

ಚಲನೆಯಲ್ಲಿ ಏಳೈಯಿಸು ಐಕ್ಯೋಪಾದಕ್ಕಾಗಿ ಅರ್ಥಬದ್ಧವಾದ ತತ್ವಗಳಲ್ಲಿ ಮನದಲ್ಲಿರುವ ಮನಕ್ಕೆ ಸಹಕಾರಯುಕ್ತನಾಗು ಎಂಬುದು ಆಗಿದೆ. ನಮ್ಮ ಜೀವನದಲ್ಲಿ ಮನಸ್ಸು ಅತ್ಯಂತ ಮುಖ್ಯವಾದುದ್ದು. ಈ ಮನಸ್ಸು ಸಹಕಾರ ಮತ್ತು ಸಕಾರಾತ್ಮಯುತವಾಗಿ ನಡೆಯುವಂತಾಗಲಿ ಎಂಬ ಉದ್ದೇಶದಿಂದ ಮಾಸ ಎಂಬ ಹೆಸರಿಟ್ಟು ಅದನ್ನು ಸರಿಯಾದ ರೀತಿಯಲ್ಲಿ ಚಿಗುರುವಂತಾಗಲಿ ಎಂದು ಹೇಗೆ ಪ್ರಕೃತಿಯಲ್ಲಿ ಎಲ್ಲವೂ ಚಿಗುರುತ್ತಿದೆಯೋ ಅದೇರೀತಿ ನಿನ್ನ ಜೀವನದಲ್ಲೂ ಹೊಸ ಜ್ಞಾನವು ಅರ್ಥಬದ್ದವಾಗಿ ತತ್ವಬದ್ಧವಾಗಿ ಚಿಗುರುವಂತಾಗಿ ಅದು ಯಾವಶ್ಚಕ್ತಿಯುತವಾಗಲಿ ಎಂದು ಚೈತ್ರ ಮಾಸ ಮತ್ತು ಯುಗಾದಿ ಎಂಬ ಹೆಸರುಗಳು ಬಂದಿತು. ಆಂತರಿಕವಾಗಿ ಆತ್ಮನನ್ನು ಚೈತನ್ಯ ಗೊಳಿಸಬೇಕಾದುದ್ದು ಮುಖ್ಯ ಕರ್ತವ್ಯವಾಗಿದೆ. ಆತ್ಮ ಇಲ್ಲದ ಶರೀರ ಇಲ್ಲಿ ಅಂತಹ ಆತ್ಮನನ್ನು ಚೈತನ್ಯ ಗೊಳಿಸಿ ಆತ್ಮದಿಂದ ಯರಕವು ಉತ್ಪನ್ನಿಸಿ ಅದನ್ನು ದರ್ಶಿಸಿ ಅದರಲ್ಲಿ ಬರುವ ಯರಕವನ್ನು ಗಮನಿಸಿ ಗಮ್ಯ ಪದವನ್ನು ಸೇರುವುದು ಮಾನವನ ಮುಖ್ಯ ಕರ್ತವ್ಯವಾಗಿದೆ.

ಹೇಗೆ ಪ್ರಕೃತಿಯಲ್ಲಿ ಹಸಿರು ತನ ಚಿಗುರುತ್ತದೆಯೋ ಅದೇ ರೀತಿ ನಮ್ಮ ಜೀವನ ಹಸಿರಾಗಿರಲಿ ಎಂದು ಆ ಪರಮಾತ್ಮನ ಚೈತನ್ಯ ಶಕ್ತಿಯನ್ನು ಪೂಜಿಸೋಣ.

ಎಲ್ಲರೂ ಮಾವಿನ ತೋರಣ ಕಟ್ಟಿ ಬೇವಿನ ಕೊಂಬೆಯನ್ನು ಹೊಸಲಿಗಿಟ್ಟು ರಂಗುರಂಗಿನ ರಂಗೋಲಿ ಇಟ್ಟು ಬೇವು ಬೆಲ್ಲ ಸವಿಯುತ್ತಾ ಹೊಸ ಬಟ್ಟೆಯನ್ನು ಧರಿಸಿ ಒಬ್ಬಟ್ಟನ್ನು ತಿಂದು ಹೊಸ ಸಂವತ್ಸರಕ್ಕೆ ಹೆಜ್ಜೆ ಇಡುವಂತಾಗಲಿ. ನಿಮ್ಮ ಜೀವನ ಶುಭವಾಗಲಿ.

ಯುಗಾದಿ-1

नवो नवो भवति जायमानो अह्नां केतुरुषसामेत्यग्रम |

भागं देवेभ्यो विदधात्यायन प्रचन्द्रमास्तिरते दीर्घमायुः ||

ನವೋ ನವೋ ಭವತಿ ಜಾಯಮಾನೋಹ್ನಾಂ ಕೇತುರುಷಸಾಮೇತ್ಯಗ್ರಮ್ |

ಭಾಗಂ ದೇವೇಭ್ಯೋ ವಿದಧಾತ್ಯಾಯನ್ ಪ್ರಚಂದ್ರಮಾಸ್ತಿರತೇ ದೀರ್ಘಮಾಯುಃ ||

ಅರ್ಥ : “ಪ್ರತಿಯೊಂದು ಸಂವತ್ಸರದಲ್ಲಿಯೂ ಸದಾ ನಾವೀನ್ಯತೆಯನ್ನು ಕಾಣುತ್ತಾ ನೀವು ಏಳಿಗೆ ಹೊಂದಬೇಕು. ಸದಾ ಉನ್ನತಿಯತ್ತ ಉತ್ಕರ್ಷದತ್ತ ನೀವು ಗಮಿಸುತ್ತಿರಬೇಕು. ನೀವು ಜನ ಮೆಚ್ಚುವಂತೆ ಬಾಳಬೇಕು. ಉತ್ತಮವಾದ ಜೀವನ ಅರ್ಥಾತ್ ಅಗ್ರ ಜೀವನ ಅಂದರೆ ಏನೆಂಬುದನ್ನು ಜನರು ನಿಮ್ಮನ್ನು ನೋಡಿ ಅರಿಯುವಂತಾಗಬೇಕು. ನೀವೇ ಲೋಕದ ದೇವಮಾನವ ಎಂಬಂತೆ ಗುರುತಿಸಲ್ಪಡಬೇಕು. ಅಂತಹ ಸ್ಥಿರತೆ, ಆದರ್ಶ ಹಾಗೂ ಶಾಶ್ವತವಾದ ದೀರ್ಘ ಆಯುಸ್ಸು ನಿಮಗೆ ಲಭಿಸಲಿ”.

ನಾವು ಮಂತ್ರಾಕ್ಷತೆಗೆ ಶಿರಬಾಗಿದಾಗ ಹೀಗೆ “ದೀರ್ಘಮಾಯುಃ” ಎಂಬುದಾಗಿ ಪುರೋಹಿತರು , ಹಿರಿಯ ಬ್ರಾಹ್ಮಣರು , ಸಾಧು ಸಂತರು ಆಶೀರ್ವದಿಸುತ್ತಾರೆ. ಆದರೆ ಆ ದೀರ್ಘಾಯುಷ್ಯವು ನಮಗೆ ಲಭಿಸಬೇಕಾದರೆ ನಾವು ಸರಿಯಾದ ರೀತಿಯಲ್ಲಿ ಹಬ್ಬ ಹರಿದಿನಗಳನ್ನು ಆಚರಿಸಬೇಕು. ಪ್ರಸ್ತುತ ವಿಶೇಷವೆಂದರೆ ಅದು ಯುಗಾದಿ ಹಬ್ಬ. ಈ ಯುಗಾದಿ ಹಬ್ಬವು ಇದೇ ದಿನ ಯಾಕೆ ಬಂದಿದೆ ? ಅದನ್ನೂ ಕೂಡಾ ಹಿರಿಯರು ಹೇಳುವ ವೇದ ಮಂತ್ರಗಳಲ್ಲಿ ತಿಳಿಸಲಾಗಿದೆ –

चैत्र मासि जगद् ब्रह्मा ससर्ज प्रथमे अहनि ।

शुक्ल पक्षे समग्रं तु तदा सूर्योदये सति ॥

ಚೈತ್ರಮಾಸಿ ಜಗದ್ಬ್ರಹ್ಮಾ ಸಸರ್ಜ ಪ್ರಥಮೇ ಅಹನಿ |

ಶುಕ್ಲಪಕ್ಷೇ ಸಮಗ್ರಂತು ತದಾ ಸೂರ್ಯೋದಯೇ ಸತಿ ||

ಸೃಷ್ಟಿಕರ್ತನಾದ ಆ ಪರಬ್ರಹ್ಮನು ಚೈತ್ರಮಾಸದ ಪ್ರಥಮ ದಿನದಂದು ಸೃಷ್ಟಿ ಕಾರ್ಯವನ್ನು ಆರಂಭಿಸಿದನು. ಅಲ್ಲಿಂದಲೇ ಕಾಲಗಣನೆ ಆರಂಭವಾಯಿತು. ಚೈತ್ರ ಮಾಸದ ಶುಕ್ಲಪಕ್ಷದ ಪಾಡ್ಯದ ತಿಥಿಯು ಪ್ರಥಮ ಯುಗವಾದ ಕೃತ ಯುಗದ ಆದಿ ಅಂದರೆ ಯುಗಾದಿಯಾಯಿತು. ಹೀಗಾಗಿ ಪ್ರತಿ ಸಂವತ್ಸರದ ಪ್ರಥಮ ದಿನದಂದು ನಾವು ಯುಗಾದಿ ಹಬ್ಬವನ್ನು ಆಚರಿಸುತ್ತಿದ್ದೇವೆ.

ಈ ಯುಗಾದಿ ಹಬ್ಬವನ್ನು ಆಚರಿಸುವ ಬಗೆ ಹೇಗೆ ? ಅದನ್ನೂ ಕೂಡಾ ಕೆಲವು ಶ್ಲೋಕಗಳ ಮೂಲಕ ತಿಳಿಸಲಾಗಿದೆ –

ವತ್ಸರಾದೌ ವಸಂತಾದೌ ಬಲಿರಾಜ್ಯೇ ತಥೈವಚ |

ತೈಲಾಭ್ಯಂಗಮ್ ಕುರ್ವಾಣಃ ನರಕಂ ಪ್ರತಿಪದ್ಯತೆ ||

ಪ್ರಾಪ್ತೇ ನೂತನವತ್ಸರೇ ಪ್ರತಿಗೃಹಂ ಕುರ್ಯಾದ್ಧ್ವಜಾರೋಪಣಂ |

ಸ್ನಾನಂ ಮಂಗಲಮಾಚರೇತ್ ದ್ವಿಜವರೈಃ ಸಾಕಂ ಸುಪೂಜ್ಯೋತ್ಸವೈಃ ||

ದೇವಾನಾಂ ಗುರುಯೋಷಿತಾಂ ಚ ಶಿಶವೋsಲಂಕಾರವಸ್ತ್ರಾದಿಭಿಃ |

ಸಂಪೂಜ್ಯಾ ಗಣಕಃ ಫಲಂ ಚ ಶೃಣುಯಾತ್ತಸ್ಮಾಚ್ಚ ಲಾಭಪ್ರದಂ ||

ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ |

ಸರ್ವಾರಿಷ್ಟ ವಿನಾಶಾಯ ನಿಂಬಕಂದಲಭಕ್ಷಣಂ ||

ಈ ಶ್ಲೋಕಗಳಲ್ಲಿ ಹೇಳಿದಂತೆ ಪ್ರತಿ ಮನೆಯ ಮುಂಬಾಗಿಲು ಹಾಗೂ ದೇವರ ಕೋಣೆಗಳನ್ನು ಮಾವಿನ – ಬೇವಿನ ತಳಿರು ತೋರಣಗಳಿಂದ ಅಲಂಕರಿಸಬೇಕು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಬೇಕು. ಪ್ರತಿಯೊಬ್ಬರೂ ಮುಂಜಾನೆ ಬೇಗನೆ ಎದ್ದು ಮೈಗೆ ಎಣ್ಣೆ ಹಚ್ಚಿಕೊಂಡು ಅಭ್ಯಂಗ ಸ್ನಾನವನ್ನು ಮಾಡಬೇಕು. ಪುರೋಹಿತರೊಡನೆ ಪೂಜೆ ಉತ್ಸವಗಳನ್ಮು ಆಚರಿಸಬೇಕು. ಗುರುಗಳಿಗೆ ನೂತನ ವಸ್ತ್ರಗಳನ್ನು ಸಮರ್ಪಿಸಬೇಕು. ಎಲ್ಲರೂ ಹೊಸ ವಸ್ತ್ರಗಳನ್ನು ಧರಿಸಬೇಕು. ನಂತರ ಪಂಚಾಂಗವನ್ನು ಪೂಜಿಸಿ ಸಂವತ್ಸರ ಫಲವನ್ನು ಶ್ರವಣ ಮಾಡಬೇಕು.

ಅನಂತರ ನಾವು ವಜ್ರದೇಹಿಗಳಾಗಿ ಶತಾಯುಷಿಗಳಾಗಬೇಕಾದರೆ ಸಿಹಿ ಕಹಿ ಎರಡನ್ನೂ ಸಮ ಪ್ರಮಾಣದಲ್ಲಿ ಸೇವಿಸಬೇಕು. ಹೀಗಾಗಿ ಕಹಿಬೇವು ಮತ್ತು ಬೆಲ್ಲವನ್ನು ಸೇವಿಸಬೇಕು. ಸುಖ ದುಃಖ ಎರಡರಲ್ಲಿಯೂ ನಾವು ಒಗ್ಗಟ್ಟಾಗಿದ್ದು ಆ ಸುಖ ದುಃಖ ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸುತ್ತೇವೆ ಎಂಬುದರ ಸಂಕೇತವೇ ಬೇವು ಬೆಲ್ಲದ ಸೇವನೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಮತ್ತು ಈ ಸಂವತ್ಸರದ ಸಂಕಲ್ಪ ಮಂತ್ರ

ಶ್ರೀ ಗೋವಿಂದ ಗೋವಿಂದ ವಿಷ್ಣುರಾಜ್ಞೆಯ ಪ್ರವರ್ಧ ಮಾನಸ್ಯೆ ಆದ್ಯ ಬ್ರಾಹ್ಮಣಃ

ದ್ವಿತೀಯ ಪರಾರ್ಧೇ ಶ್ರೀ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿ ಯುಗೇ ಪ್ರಥಮ ಪಾದೇ

ಭರತವರ್ಷ ಭರತಖಂಡೆ ಜಂಬೂದ್ವೀಪೇ ದಂಡಕಾರಣ್ಯ ದೇಶೇ ಗೋದಾವರ್ಯಾ ದಕ್ಷಿಣೆತೀರೆ ಶಾಲಿವಾಹನ ಶಕೆ ಬೌದ್ಧಾವತಾರೆ ರಾಮ ಕ್ಷೇತ್ರೆ ಅಸ್ಮಿನ್ ವರ್ತಮಾನೆ ಚಾಂದ್ರ ಮಾನೇನ ಪರಾಭವ ನಾಮ ಸಂವತ್ಸರ ಉತ್ತರಾಯಣೆ ಶಿಶಿರ ಋತು ಚೈತ್ರ ಮಾಸ ಶುಕ್ಲ ಪಕ್ಷ ಪ್ರತಿಪತ್ ತಿಥೋ ಉತ್ತರ ಭಾದ್ರಪದ ನಕ್ಷತ್ರ, ಶುಕ್ಲ ಯೋಗ, ನಾಗವಾನ್ ಕರಣ ಏವಮ್ಗುಣ ವಿಶೇಷಣ ವಿಶಿಷ್ಟಯಾಮ್ ಶುಭ ಪುಣ್ಯ ತಿಥಿ ಭಾರತೀರಮಣ ಮುಖ್ಯ ಪ್ರಣಾಂತರ್ಗತ ಶ್ರೀವಿಷ್ಣುಪ್ರೇರಣೆಯ ಶ್ರೀ ವಿಷ್ಣುಪ್ರಿತ್ಯರ್ಥಂ ಜ್ಞಾನಭಕ್ತಿ ವೈರಾಗ್ಯ ಸಿದ್ಧ್ಯಾರ್ಥಂ ಮಾಸನೀಯಾಮಕ ಶ್ರೀ ಪದ್ಮಿವಿಷ್ಣು ಪ್ರೀತ್ಯಾರ್ಥಂ ಯುಗಾದಿ ಸಂವತ್ಸರ ಆರಂಭ ನಿಮಿತ್ತ ಶ್ರೀ ಲಕ್ಷ್ಮೀ ನಾರಾಯಣ ದೇವತಾ ಪೂಜಾಂ ಕರೀಷ್ಯ ನಿಂಬಪುಷ್ಪ ಭಕ್ಷಣ ಕರಿಷ್ಯ……

ಎಲ್ಲರಿಗೂ ಯುಗಾದಿ ಹಬ್ಬದ ಅಂದರೆ ಹೊಸ ವರ್ಷದ ಶುಭಾಶಯಗಳು.

ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು

ಸರ್ವಜನಾಃ ಸುಖಿನೋಭವತು

Share. Facebook Twitter LinkedIn WhatsApp Email

Related Posts

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

2 Mins Read

BREAKING : ಹಾಸನದಲ್ಲಿ ಘೋರ ದುರಂತ : ಸ್ನೇಹಿತರ ಕಣ್ಣೆದುರೇ, ನದಿಗೆ ಇಳಿದ ಮೂವರು ಯುವಕರು ನೀರುಪಾಲು!

2 Mins Read

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 13.14 ಕೋಟಿ ರೂ ಮೌಲ್ಯದ 38.34 ಕೆಜಿ ಗಾಂಜಾ ವಶ : 6 ಜನ ಅರೆಸ್ಟ್!

1 Min Read
Recent News

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

BREAKING : ಹಾಸನದಲ್ಲಿ ಘೋರ ದುರಂತ : ಸ್ನೇಹಿತರ ಕಣ್ಣೆದುರೇ, ನದಿಗೆ ಇಳಿದ ಮೂವರು ಯುವಕರು ನೀರುಪಾಲು!

​107 ದಿನಗಳ ಅಮೆರಿಕ-ಇರಾನ್ ಯುದ್ಧಕ್ಕೆ ಶಾಶ್ವತ ತೆರೆ: ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ; ಜಾಗತಿಕ ಮಾರುಕಟ್ಟೆ ನಿರಾಳ!

​ಓಮನ್ ಕರಾವಳಿಯಲ್ಲಿ ಭಾರತೀಯ ನಾವಿಕ ಸಾವು: ಮೃತದೇಹ ಕೊಳೆಯದಂತೆ ಇಡಲು ಐಸ್ ವಾಟರ್ ಬಾಟಲಿಗಳ ಬಳಕೆ! ತುರ್ತು ನೆರವಿಗೆ ಯೂನಿಯನ್ ಮನವಿ!

State News
KARNATAKA

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ಪರಿಷತ್ ಚುನಾವಣೆ ಕಾವು ಏರುತ್ತಿದ್ದಂತೆ, ರಾಜಕೀಯ ಪಕ್ಷಗಳಲ್ಲಿ ರೆಸಾರ್ಟ್ ರಾಜಕಾರಣದ ಸದ್ದು ಮತ್ತೆ ಜೋರಾಗಿದೆ. ಜೂನ್ 16…

BREAKING : ಹಾಸನದಲ್ಲಿ ಘೋರ ದುರಂತ : ಸ್ನೇಹಿತರ ಕಣ್ಣೆದುರೇ, ನದಿಗೆ ಇಳಿದ ಮೂವರು ಯುವಕರು ನೀರುಪಾಲು!

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 13.14 ಕೋಟಿ ರೂ ಮೌಲ್ಯದ 38.34 ಕೆಜಿ ಗಾಂಜಾ ವಶ : 6 ಜನ ಅರೆಸ್ಟ್!

BIG NEWS : ರೇಣುಕಾಸ್ವಾಮಿ ಕೊಲೆ ಪ್ರಕರಣ : ಇಂದಿನಿಂದ ಬೆಂಗಳೂರಿನ CCH 59ನೇ ಕೋರ್ಟ್ ನಲ್ಲಿ ವಿಚಾರಣೆ ಆರಂಭ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.