ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪೂರ್ವ ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ತಮ್ಮ ವಕೀಲರ ಮೂಲಕ ಮಾಧ್ಯಮಗಳಿಗೆ ಮತ್ತೊಂದು ಪತ್ರ ಬರೆದಿದ್ದಾನೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ನಾಯಕ ಸತ್ಯೇಂದ್ರ ವಿರುದ್ಧ ಚಂದ್ರಶೇಖರ್ ಆರೋಪ ಮಾಡಿದ್ದಾರೆ.
ದೆಹಲಿ ಪಾಲಿಕೆ ಚುನಾವಣೆಗಳು ಮತ್ತು ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿ, ಪತ್ರ ಬರೆದಿದ್ದು, ನಿಮ್ಮ ರಾಜಕೀಯ ಅಂತ್ಯ ಪ್ರಾರಂಭವಾಗಿದೆ. ನಿಮ್ಮ ಎಲ್ಲಾ ಬಣ್ಣಗಳಗಳನ್ನು ಬಲಯ ಮಾಡುತ್ತೇನೆ ಎಂದು ಪತ್ರದಲ್ಲಿ ಸುಕೇಶ್ ಬರೆದಿದ್ದಾನೆ.
ಈ ಪತ್ರಗಳನ್ನು ಬರೆಯುವಂತೆ ಯಾರೂ ಒತ್ತಡ ಹೇರಿಲ್ಲ, ಸ್ವಂತ ಇಚ್ಛೆಯ ಮೇರೆಗೆ ಬರೆದಿದ್ದೇನೆ ಎಂದು ಸುಕೇಶ್ ಪತ್ರದಲ್ಲಿ ತಿಳಿಸಿದ್ದಾನೆ.
ಈ ಹಿಂದೆ ಬರೆದ ಪತ್ರಗಳಲ್ಲಿ ಹೇಳಿರುವ ವಿಚಾರಗಳು ನಿಜ ಎಂದು ಪ್ರತಿಪಾದಿಸಿದ ಸುಕೇಶ್, ಚುನಾವಣೆಯ ಮೊದಲು ಮತ್ತು ಈಗ ನೀಡಿರುವ ಎಲ್ಲಾ ಪತ್ರಗಳು ಮತ್ತು ಹೇಳಿಕೆಗಳು ನನ್ನ ಸ್ವಂತದ್ದು, ಯಾರ ಒತ್ತಡ ಅಥವಾ ಮಾರ್ಗದರ್ಶನದಲ್ಲಿ ಬರೆದಿಲ್ಲ. ನೀಡಿರುವ ಎಲ್ಲಾ ಪತ್ರಗಳು ಮತ್ತು ಹೇಳಿಕೆಗಳು ನೀವು (ಕೇಜ್ರಿವಾಲ್) ಹೇಳಿದಂತೆ ಸಂಪೂರ್ಣ ಸತ್ಯ ಮತ್ತು ನಕಲಿ ಅಲ್ಲ ಎಂದಿದ್ದಾನೆ.
ನಾನು ಪತ್ರ ಬರೆದ ಬಳಿಕ ದೆಹಲಿಯ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಎಂಸಿಡಿ ಚುನಾವಣೆಯಲ್ಲಿ ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸೋಲು ಕಂಡಿದೆ. ಜೈನ್ ಅವರ ವಿಧಾನಸಭಾ ಸ್ಥಾನದಿಂದ ಎಎಪಿ ಎಲ್ಲಾ ವಾರ್ಡ್ಗಳನ್ನು ಕಳೆದುಕೊಂಡಿತು. ಆದರೆ, ಸಿಸೋಡಿಯಾ ಅವರ ವಿಧಾನಸಭಾ ಕ್ಷೇತ್ರದಿಂದ ಎಎಪಿ 4 ವಾರ್ಡ್ಗಳಲ್ಲಿ 3 ರಲ್ಲಿ ಸೋತಿದೆ. ಹೀಗೆ ಪತ್ರದಲ್ಲಿ ಸುಕೇಶ್ ಅವರು ಆಮ್ ಆದ್ಮಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸತ್ಯೇಂದ್ರ ಜೈನ್ ಅವರಿಗೆ 10 ಕೋಟಿ ಹಾಗೂ ಆಮ್ ಆದ್ಮಿ ಪಕ್ಷಕ್ಕೆ 50 ಕೋಟಿ ದೇಣಿಗೆ ನೀಡಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ವಹಿವಾಟಿನ ಎಲ್ಲಾ ಸಾಕ್ಷ್ಯಗಳು ಆತನ ಬಳಿ ಇವೆ. ಸುಕೇಶ್ ಅವರ ಆರೋಪವನ್ನು ಬೇರೊಂದು ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ʻಪ್ರಾರ್ಥನೆʼ ಮಾಡುವ ನಿಜವಾದ ಉದ್ದೇಶವೇನು? ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ಮಾಹಿತಿ
BIGG NEWS : ಬೆಳಗಾವಿ ಅಧಿವೇಶನದಲ್ಲಿ ಕೆಲವು ಮಹತ್ವದ ಬಿಲ್ ಮಂಡನೆ : ಸಿಎಂ ಬೊಮ್ಮಾಯಿ
BIGG NEWS : ರಾಯಚೂರಿನಲ್ಲಿ ಸಹಜ ಹೆರಿಗೆ 15 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟ ಸರ್ಕಾರಿ ಆಸ್ಪತ್ರೆ ನರ್ಸ್!