ಬೆಂಗಳೂರು: ಗಂಡನ ಚೆಕ್ ಬೌನ್ಸ್ ಆದ್ರೆ ಅದಕ್ಕೆ ಹೆಂಡ್ತಿ ಹೊಣೆ ಅಲ್ಲ ಅಂಥ ಹೈಕೋರ್ಟ್ ಹೇಳಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ವೇಳೇಯಲ್ಲಿ ನ್ಯಾಯಾಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಪೀಠ ತಿ ಸಹಿ ಹಾಕಿರುವ ಚೆಕ್ ಬೌನ್ಸ್ ಆದರೆ ಆತನ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಹೇಳಿದೆ.
ಬೌನ್ಸ್ ಆಗಿರುವ ಚೆಕ್ಗೆ ಅರ್ಜಿದಾರೆ ಸಹಿ ಹಾಕಿಲ್ಲ. ಚೆಕ್ಗೆ ಸಂಬಂಧಿಸಿದ ಖಾತೆ ಜಂಟಿ ಖಾತೆಯೂ ಅಲ್ಲ. ಚೆಕ್ ಅನ್ನು ಅರ್ಜಿದಾರ ಮಹಿಳೆಯ ಪತಿ ನೀಡಿದ್ದಾರೆ ಎಂದು ದೂರುದಾರರೇ ದೂರಿನಲ್ಲಿ ಹೇಳಿದ್ದಾರೆ, ಇದಲ್ಲದೇ, ಪತಿ ವಿತರಿಸಿದ ಚೆಕ್ ಬೌನ್ಸ್ ಆಗಿದ್ದಕ್ಕೆ ಅವರ ಪತ್ನಿಯನ್ನು ಆರೋಪಿ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.