ಮೈಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು, ಮೆದುಳು ನಿಷ್ಕ್ರೀಯಗೊಂಡಿದ್ದಂತ ಪತಿಯ ಅಂಗಾಂಗ ದಾನವನ್ನು ಮಾಡುವ ಮೂಲಕ, ಪತ್ನಿ ಪತಿಯ ಸಾವಿನ ಬಳಿಕವೂ 9 ಮಂದಿಗೆ ಜೀವದಾನ ಮಾಡಿ ಮಾನವೀಯತೆಯನ್ನು ಮೆರೆದಿರೋ ಘಟನೆ ಮೈಸೂರಿನಲ್ಲಿ ನಡೆದಿದೆ.
ಅಕ್ಟೋಬರ್ 5, 2022ರಂದು ಮೈಸೂರಿನ ಮುನೇಶ್ವರ ನಗರದ ನಿವಾಸಿ ಮದನ್ ಕುಮಾರ್ (25), ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
SHOCKING NEWS: ‘BMTCಯ ಬಹುತೇಕ ಸಿಬ್ಬಂದಿಗಳಿಗೆ ಹೃದಯ ಸಮಸ್ಯೆ- ಜಯದೇವ ಹೃದ್ರೋಗ ಆಸ್ಪತ್ರೆ ವರದಿ
ಎರಡು ದಿನಗಳ ಕಾಲ ತೀವ್ರ ನಿಗಾಘಟಕದಲ್ಲಿ ಮದನ್ ಕುಮಾರ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದರು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ. ಅಲ್ಲದೇ ಅವರ ಮೆದುಳು ನಿಷ್ಕ್ರೀಯಗೊಂಡಿರೋದಾಗಿ ವೈದ್ಯರು ಘೋಷಿಸಿದ್ದರು.
ಇನ್ನೂ ಮದನ್ ಕುಮಾರ್ ಮೆದುಳು ನಿಷ್ಕ್ರೀಯಗೊಂಡ ಬಳಿಕ, ಅವರ ಪತ್ನಿಗೆ, ಪತಿಯ ಅಂಗಾಂಗ ದಾನ ಮಾಡುವಂತೆ ಮನವಿ ಮಾಡಲಾಗಿತ್ತು. ವೈದ್ಯರ ಮನವೊಲಿಕೆಗೆ ಒಪ್ಪಿದಂತ ಆಕೆ ಪತಿಯ ಹೃದಯ, ಶ್ವಾಸಕೋಶ, 2 ಮೂತ್ರಪಿಂಡಗಳು, ಯಕೃತ್ ಮತ್ತು ಕಾರ್ನಿಯಾಗಳನ್ನು ಅಂಗಾಂಗ ದಾನ ಮಾಡಿದ್ದರು. ಈ ಮೂಲಕ 9 ಮಂದಿಗೆ ಜೀವವನ್ನು ನೀಡಿದಂತೆ ಆಗಿದೆ.
ಸುದ್ದಿ ಓದುವಂತ ನೀವುಗಳು ದಯವಿಟ್ಟು ಅಂಗಾಂಗ ದಾನಕ್ಕೆ ಸಹಿ ಮಾಡೋದು ಮರೆಯಬೇಡಿ. ನಿಮ್ಮ ನಂತ್ರವೂ ಹಲವು ಜೀವಗಳಿಗೆ, ಜೀವದಾನಕ್ಕೆ ನೀವು ಕಾರಣವಾಗುವಂತ ನಿರ್ಧಾರವನ್ನು ಕೈಗೊಳ್ಳಿ ಎಂಬುದು ಕೆಎನ್ಎನ್ ಸಂಸ್ಥೆಯ ಕೋರಿಕೆ, ಮನವಿಯಾಗಿದೆ.