ಬೆಂಗಳೂರು: ಬೆಂಗಳೂರು ಉಸ್ತುವಾರಿಗಾಗಿ ಕಿತ್ತಾಡುವ ಸಚಿವರು ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಅದೇ ಹೋರಾಟ ತೋರುತ್ತಿಲ್ಲವೇಕೆ? ‘ಬೊಮ್ಮಾಯಿ ವರ್ಷನ್ ಅಚ್ಛೆ ದಿನಗಳ’ ಭಾಷಣ ಕುಟ್ಟುವ #PayCM ಬಸವರಾಜ ಬೊಮ್ಮಾಯಿ ( Basavaraj Bommai ) ಅವರೇ, ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ನಿಮಗೆ ದಮ್ಮು ತಾಕತ್ತು ಇಲ್ಲದಾಗಿರುವುದೇಕೆ? ನಿಮ್ಮ ಪ್ರಲಾಪ ಮೈಕ್ ಮುಂದೆ ಮಾತ್ರವೇ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ಬೆಂಗಳೂರು ಉಸ್ತುವಾರಿಗಾಗಿ ಕಿತ್ತಾಡುವ ಸಚಿವರು ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಅದೇ ಹೋರಾಟ ತೋರುತ್ತಿಲ್ಲವೇಕೆ?
'ಬೊಮ್ಮಾಯಿ ವರ್ಷನ್ ಅಚ್ಛೆ ದಿನಗಳ' ಭಾಷಣ ಕುಟ್ಟುವ #PayCM @BSBommai ಅವರೇ,
ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ನಿಮಗೆ ದಮ್ಮು ತಾಕತ್ತು ಇಲ್ಲದಾಗಿರುವುದೇಕೆ?ನಿಮ್ಮ ಪ್ರಲಾಪ ಮೈಕ್ ಮುಂದೆ ಮಾತ್ರವೇ?#SayCM
— Karnataka Congress (@INCKarnataka) October 31, 2022
ಈ ಬಗ್ಗೆ ಟ್ವಿಟ್ ( Twitter ) ಮಾಡಿದ್ದು, ರಸ್ತೆ ಗುಂಡಿಗಳ ವಿಚಾರದಲ್ಲಿ ಹೈಕೋರ್ಟ್ ( High Court ) ಮೇಲಿಂದಮೇಲೆ ಛೀಮಾರಿ ಹಾಕುತ್ತಿದೆ. ಇದುವರೆಗೂ ಒಬ್ಬೇ ಒಬ್ಬ ಅಧಿಕಾರಿಯನ್ನು ರಸ್ತೆಗುಂಡಿಗೆ ಹೊಣೆ ಮಾಡಿ ಕ್ರಮ ಕೈಗೊಳ್ಳಲಿಲ್ಲ ಸರ್ಕಾರ. #PuppetCM ಅವರೇ, ಅಧಿಕಾರಿಗಳು ನಿಮ್ಮ ಮಾತು ಕೇಳುವುದಿಲ್ಲವೇ, ನಿಮ್ಮ ಅಂಕೆಯಲ್ಲಿಲ್ಲವೇ? ರಸ್ತೆಗುಂಡಿಗಳಿಗೆ ಹೊಣೆ ಯಾರು? ಸಾವುಗಳಿಗೆ ಕಾರಣ ಯಾರು? ಎಂದು ಕೇಳಿದೆ.
ರಸ್ತೆ ಗುಂಡಿಗಳ ವಿಚಾರದಲ್ಲಿ ಹೈಕೋರ್ಟ್ ಮೇಲಿಂದಮೇಲೆ ಛೀಮಾರಿ ಹಾಕುತ್ತಿದೆ.
ಇದುವರೆಗೂ ಒಬ್ಬೇ ಒಬ್ಬ ಅಧಿಕಾರಿಯನ್ನು ರಸ್ತೆಗುಂಡಿಗೆ ಹೊಣೆ ಮಾಡಿ ಕ್ರಮ ಕೈಗೊಳ್ಳಲಿಲ್ಲ ಸರ್ಕಾರ.#PuppetCM ಅವರೇ, ಅಧಿಕಾರಿಗಳು ನಿಮ್ಮ ಮಾತು ಕೇಳುವುದಿಲ್ಲವೇ, ನಿಮ್ಮ ಅಂಕೆಯಲ್ಲಿಲ್ಲವೇ?
ರಸ್ತೆಗುಂಡಿಗಳಿಗೆ ಹೊಣೆ ಯಾರು? ಸಾವುಗಳಿಗೆ ಕಾರಣ ಯಾರು?#SayCM
— Karnataka Congress (@INCKarnataka) October 31, 2022
ಸಿನೆಮಾ ಪ್ರಿಯ ಬಸವರಾಜ ಬೊಮ್ಮಾಯಿ ಅವರು ಪ್ರತಿದಿನವೂ ಥೇಟ್ ಸಿನೆಮಾ ಶೈಲಿಯಲ್ಲಿ ದಮ್ಮು ತಾಕತ್ತಿನ ಡೈಲಾಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ! ಮುಖ್ಯಮಂತ್ರಿಗಳೇ, ಸಿನೆಮಾ ಗುಂಗು ಬಿಟ್ಟು ವಾಸ್ತವ ಜಗತ್ತಿನಲ್ಲಿ ಕಣ್ಬಿಟ್ಟು ನೋಡಿ, ರಸ್ತೆ ಗುಂಡಿಗಳು ಕಾಣುತ್ತವೆ. ಪ್ರಾಣ ಬಿಟ್ಟವರ ಕುಟುಂಬದ ರೋಧನೆ ಕಾಣುತ್ತದೆ, ನಿಮ್ಮ ವೈಫಲ್ಯಗಳು ಕಾಣುತ್ತವೆ ಎಂದು ಹೇಳಿದೆ.
ಸಿನೆಮಾ ಪ್ರಿಯ @BSBommai ಅವರು ಪ್ರತಿದಿನವೂ ಥೇಟ್ ಸಿನೆಮಾ ಶೈಲಿಯಲ್ಲಿ ದಮ್ಮು ತಾಕತ್ತಿನ ಡೈಲಾಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ!
ಮುಖ್ಯಮಂತ್ರಿಗಳೇ, ಸಿನೆಮಾ ಗುಂಗು ಬಿಟ್ಟು ವಾಸ್ತವ ಜಗತ್ತಿನಲ್ಲಿ ಕಣ್ಬಿಟ್ಟು ನೋಡಿ, ರಸ್ತೆ ಗುಂಡಿಗಳು ಕಾಣುತ್ತವೆ.
ಪ್ರಾಣ ಬಿಟ್ಟವರ ಕುಟುಂಬದ ರೋಧನೆ ಕಾಣುತ್ತದೆ,
ನಿಮ್ಮ ವೈಫಲ್ಯಗಳು ಕಾಣುತ್ತವೆ.#SayCM— Karnataka Congress (@INCKarnataka) October 31, 2022