ಬೆಂಗಳೂರು: ರಾಷ್ಟ್ರಕ್ಕಾಗಿ, ದೇಶಬಂಧುಗಳ ಹಿತಕ್ಕಾಗಿ ಸಾವರ್ಕರ್ ತಮ್ಮ 83 ವರ್ಷಗಳ ಜೀವಿತಾವಧಿಯಲ್ಲಿ 25 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು ಸ್ವಾತಂತ್ರಕ್ಕಾಗಿ ಹೋರಾಡಿದ್ದರಿಂದಲೇ ಅಲ್ಲವೇ? ಇಲ್ಲವಾದರೆ ಬ್ರಿಟಿಷರು ಅವರನ್ನು ಅಂಡಮಾನಿನ ಸೆರೆಮನೆಗೆ ಏಕೆ ಕಳುಹಿಸುತ್ತಿದ್ದರು? ಇತಿಹಾಸ ಹೇಳುವ ಈ ಸತ್ಯ ನಿಮಗೇಕೆ ತಿಳಿದಿಲ್ಲ ಸಿದ್ಧರಾಮಯ್ಯ ( Siddaramaiah ) ? ಸಿದ್ಧ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂಬುದಾಗಿ ಸಿದ್ಧರಾಮಯ್ಯಗೆ ಬಿಜೆಪಿ ( BJP ) ಕುಟುಕಿದೆ.
ರಾಷ್ಟ್ರಕ್ಕಾಗಿ, ದೇಶಬಂಧುಗಳ ಹಿತಕ್ಕಾಗಿ ಸಾವರ್ಕರ್ ತಮ್ಮ 83 ವರ್ಷಗಳ ಜೀವಿತಾವಧಿಯಲ್ಲಿ 25 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು ಸ್ವಾತಂತ್ರಕ್ಕಾಗಿ ಹೋರಾಡಿದ್ದರಿಂದಲೇ ಅಲ್ಲವೇ?
ಇಲ್ಲವಾದರೆ ಬ್ರಿಟಿಷರು ಅವರನ್ನು ಅಂಡಮಾನಿನ ಸೆರೆಮನೆಗೆ ಏಕೆ ಕಳುಹಿಸುತ್ತಿದ್ದರು?
ಇತಿಹಾಸ ಹೇಳುವ ಈ ಸತ್ಯ ನಿಮಗೇಕೆ ತಿಳಿದಿಲ್ಲ @siddaramaiah? pic.twitter.com/T4e4USXmmu
— BJP Karnataka (@BJP4Karnataka) August 20, 2022
ಈ ಬಗ್ಗೆ ಟ್ವಿಟ್ ( Twitter ) ಮಾಡಿರುವಂತ ಕರ್ನಾಟಕ ಬಿಜೆಪಿ ( BJP Karnataka ), ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟವೇ ಮಾಡಿಲ್ಲ ಎನ್ನುವ ಸಿದ್ಧರಾಮಯ್ಯ ಅವರ ಆರೋಪ ನಿಜವೇ ಆಗಿದ್ದರೆ ಇಂದಿರಾ ಗಾಂಧಿ ಅವರೇಕೆ #VeerSavarkar ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸುತ್ತಿದ್ದರು? ಸಾವರ್ಕರ್ ಹೋರಾಟಗಾರನಲ್ಲದೇ ಇರುತ್ತಿದ್ದರೆ ಸಾವರ್ಕರ್ ಹೆಸರಿನಲ್ಲಿ ಇಂದಿರಾ ಅಂಚೆ ಚೀಟಿ ಬಿಡುಗಡೆ ಮಾಡುತ್ತಿದ್ದರೇ? ಎಂದು ಪ್ರಶ್ನಿಸಿದೆ.
ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟವೇ ಮಾಡಿಲ್ಲ ಎನ್ನುವ @siddaramaiah ಅವರ ಆರೋಪ ನಿಜವೇ ಆಗಿದ್ದರೆ ಇಂದಿರಾ ಗಾಂಧಿ ಅವರೇಕೆ #VeerSavarkar ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸುತ್ತಿದ್ದರು?
ಸಾವರ್ಕರ್ ಹೋರಾಟಗಾರನಲ್ಲದೇ ಇರುತ್ತಿದ್ದರೆ ಸಾವರ್ಕರ್ ಹೆಸರಿನಲ್ಲಿ ಇಂದಿರಾ ಅಂಚೆ ಚೀಟಿ ಬಿಡುಗಡೆ ಮಾಡುತ್ತಿದ್ದರೇ? pic.twitter.com/ZDgZc8Ziej
— BJP Karnataka (@BJP4Karnataka) August 20, 2022
ಕಾಂಗ್ರೆಸ್ ( Congress ) ಹುಟ್ಟಿನ ಉದ್ದೇಶ ಸ್ವಾತಂತ್ರ್ಯ ಗಳಿಸುವುದು, ಅದು ದೊರೆತಾಗಿದೆ. ಇನ್ನು ಇದರ ಅವಶ್ಯಕತೆ ಇಲ್ಲ. ಪಕ್ಷವನ್ನು ವಿಸರ್ಜಿಸಿ ಎಂದು ಗಾಂಧೀಜಿ ಹೇಳಿದ್ದರು. ಆದರೆ, ನಿಮ್ಮ ನಾಯಕರು ಪಕ್ಷ ವಿಸರ್ಜನೆ ಮಾಡದೆ, ಅಧಿಕಾರ ಹಿಡಿಯಲು ಪಕ್ಷವನ್ನು ಬಳಸಿಕೊಂಡು ಗಾಂಧೀಜಿಯವರ ಆಶಯಗಳಿಗೆ ದ್ರೋಹ ಬಗೆಯುತ್ತಿರುವುದು ಸರಿಯೇ ಸಿದ್ಧರಾಮಯ್ಯನವರೇ? ಎಂದು ಹೇಳಿದೆ.
ಕಾಂಗ್ರೆಸ್ ಹುಟ್ಟಿನ ಉದ್ದೇಶ ಸ್ವಾತಂತ್ರ್ಯ ಗಳಿಸುವುದು, ಅದು ದೊರೆತಾಗಿದೆ. ಇನ್ನು ಇದರ ಅವಶ್ಯಕತೆ ಇಲ್ಲ. ಪಕ್ಷವನ್ನು ವಿಸರ್ಜಿಸಿ ಎಂದು ಗಾಂಧೀಜಿ ಹೇಳಿದ್ದರು.
ಆದರೆ, ನಿಮ್ಮ ನಾಯಕರು ಪಕ್ಷ ವಿಸರ್ಜನೆ ಮಾಡದೆ, ಅಧಿಕಾರ ಹಿಡಿಯಲು ಪಕ್ಷವನ್ನು ಬಳಸಿಕೊಂಡು ಗಾಂಧೀಜಿಯವರ ಆಶಯಗಳಿಗೆ ದ್ರೋಹ ಬಗೆಯುತ್ತಿರುವುದು ಸರಿಯೇ @siddaramaiah ನವರೇ? pic.twitter.com/ggdQV6GvBQ
— BJP Karnataka (@BJP4Karnataka) August 20, 2022