ಬೆಂಗಳೂರು: ಮಹಾರಾಷ್ಟ್ರದ ಸಚಿವರು ಕರ್ನಾಟಕದ ನೆಲದಲ್ಲಿ ಹಕ್ಕು ಸ್ಥಾಪನೆ ಮಾಡಲು ಬರುತ್ತಿರುವುದನ್ನು ಬಿಜೆಪಿ ಸರ್ಕಾರಕ್ಕೆ ತಡೆಯಲು ಸಾಧ್ಯವಾಗುತ್ತಿಲ್ಲವೇಕೆ? ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಮಹಾರಾಷ್ಟ್ರ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿರುವುದೇಕೆ? ಕಾಂಗ್ರೆಸ್ ಮೇಲೆ ನಾಲಿಗೆ ಹರಿಬಿಡುವ ಸಚಿವರುಗಳು ಮಹಾರಾಷ್ಟ್ರದ ಬಗ್ಗೆ ಮೌನವೇಕೆ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ಮಹಾರಾಷ್ಟ್ರದ ಸಚಿವರು ಕರ್ನಾಟಕದ ನೆಲದಲ್ಲಿ ಹಕ್ಕು ಸ್ಥಾಪನೆ ಮಾಡಲು ಬರುತ್ತಿರುವುದನ್ನು @BJP4Karnataka ಸರ್ಕಾರಕ್ಕೆ ತಡೆಯಲು ಸಾಧ್ಯವಾಗುತ್ತಿಲ್ಲವೇಕೆ?
ಸಿಎಂ @BSBommai ಮಹಾರಾಷ್ಟ್ರ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿರುವುದೇಕೆ?
ಕಾಂಗ್ರೆಸ್ ಮೇಲೆ ನಾಲಿಗೆ ಹರಿಬಿಡುವ ಸಚಿವರುಗಳು ಮಹಾರಾಷ್ಟ್ರದ ಬಗ್ಗೆ ಮೌನವೇಕೆ? pic.twitter.com/SJNxodKtB7
— Karnataka Congress (@INCKarnataka) December 5, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, #PuppetCM ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಮಾತಿಗೆ ನಿಮ್ಮದೇ ಪಕ್ಷದ ಮಹಾರಾಷ್ಟ್ರ ಸರ್ಕಾರದಿಂದ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ವೇದಿಕೆ ಮೇಲೆ ದಮ್ಮು, ತಾಕತ್ತು ಎಂಬ ರೌಡಿಸಂ ಭಾಷೆ ಬಳಸುವ ತಾವು ಮಹಾರಾಷ್ಟ್ರದ ಸಚಿವರ ಮುಂದೆ ಬಾಲ ಮುದುರಿದ ಬೆಕ್ಕಿನಂತೆ ಆಗಿರುವುದೇಕೆ? ಈಗೇಕೆ ನಿಮ್ಮ ದಮ್ಮು, ತಾಕತ್ತಿನ ಪ್ರದರ್ಶನ ನಿಂತು ಹೋಗಿದೆ? ಎಂದು ಕೇಳಿದೆ.
#PuppetCM @BSBommai ಅವರೇ, ನಿಮ್ಮ ಮಾತಿಗೆ ನಿಮ್ಮದೇ ಪಕ್ಷದ ಮಹಾರಾಷ್ಟ್ರ ಸರ್ಕಾರದಿಂದ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ.
ವೇದಿಕೆ ಮೇಲೆ ದಮ್ಮು, ತಾಕತ್ತು ಎಂಬ ರೌಡಿಸಂ ಭಾಷೆ ಬಳಸುವ ತಾವು ಮಹಾರಾಷ್ಟ್ರದ ಸಚಿವರ ಮುಂದೆ ಬಾಲ ಮುದುರಿದ ಬೆಕ್ಕಿನಂತೆ ಆಗಿರುವುದೇಕೆ?
ಈಗೇಕೆ ನಿಮ್ಮ ದಮ್ಮು, ತಾಕತ್ತಿನ ಪ್ರದರ್ಶನ ನಿಂತು ಹೋಗಿದೆ? pic.twitter.com/QyErZQ4s7y
— Karnataka Congress (@INCKarnataka) December 4, 2022