ಮುಂಬೈ: ವಿಶ್ವದ ಅತ್ಯಂತ ದುಬಾರಿ ಖಾಸಗಿ ನಿವಾಸಗಳಲ್ಲಿ ಒಂದಾದ ‘ಆಂಟಿಲಿಯಾ’ದಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ವಾಸವಿದ್ದಾರೆ. ಆದರೆ, ಈ ಐಷಾರಾಮಿ ಮನೆಯಲ್ಲಿ ತಯಾರಾಗುವ ಆಹಾರದ ಪ್ರಮಾಣ ಮತ್ತು ಅಲ್ಲಿನ ಶಿಸ್ತಿನ ಬಗ್ಗೆ ಕೇಳಿದರೆ ನೀವು ಆಶ್ಚರ್ಯಪಡುತ್ತೀರಿ. ಇಲ್ಲಿ ಪ್ರತಿದಿನ ಸುಮಾರು 4,000 ರೊಟ್ಟಿಗಳನ್ನು ಸಿದ್ಧಪಡಿಸಲಾಗುತ್ತದೆ!
ಅಂಬಾನಿ ಕುಟುಂಬದ ಸದಸ್ಯರು ಮಾತ್ರವಲ್ಲದೆ, ಆಂಟಿಲಿಯಾದಲ್ಲಿ ಸುಮಾರು 600ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಾರೆ. ಇವರಲ್ಲಿ ಭದ್ರತಾ ಸಿಬ್ಬಂದಿ, ಚಾಲಕರು, ಮನೆಗೆಲಸದವರು ಮತ್ತು ತೋಟಗಾರರು ಸೇರಿದ್ದಾರೆ. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ತಮ್ಮ ಮನೆಯ ಪ್ರತಿಯೊಬ್ಬ ಕೆಲಸಗಾರನಿಗೂ ಕುಟುಂಬದ ಸದಸ್ಯರಂತೆಯೇ ಕಾಣುತ್ತಾರೆ. ಹೀಗಾಗಿ, ಈ ಎಲ್ಲಾ ಸಿಬ್ಬಂದಿಗೆ ದಿನದ ಮೂರು ಹೊತ್ತು ಅತ್ಯಂತ ಗುಣಮಟ್ಟದ ಆಹಾರವನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಬೃಹತ್ ಪ್ರಮಾಣದಲ್ಲಿ ರೊಟ್ಟಿಗಳನ್ನು ಸಿದ್ಧಪಡಿಸಲಾಗುತ್ತದೆ.
ಅಬಾನಿ ಕುಟುಂಬದ ಆಹಾರ ಪದ್ಧತಿ ಅತ್ಯಂತ ಸರಳ ಮತ್ತು ಪೌಷ್ಟಿಕಾಂಶದಿಂದ ಕೂಡಿದೆ:ಮುಕೇಶ್ ಅಂಬಾನಿ ಅವರು ಕಟ್ಟುನಿಟ್ಟಾದ ಸಸ್ಯಾಹಾರಿ. ಮನೆಯಲ್ಲಿ ಮಾಂಸಾಹಾರವನ್ನು ಬಳಸುವುದಿಲ್ಲ.
ಬೆಳಗಿನ ಉಪಾಹಾರ: ಹಣ್ಣುಗಳು, ತಾಜಾ ಜ್ಯೂಸ್ ಮತ್ತು ಲಘು ಸಸ್ಯಾಹಾರಿ ತಿಂಡಿಗಳು.
ಮಧ್ಯಾಹ್ನದ ಊಟ: ದಾಲ್, ಚಪಾತಿ, ಎರಡು ಬಗೆಯ ತರಕಾರಿ ಪಲ್ಯ ಮತ್ತು ಸಲಾಡ್. ಗುಜರಾತಿ ಶೈಲಿಯ ಆಹಾರಕ್ಕೆ ಇಲ್ಲಿ ಹೆಚ್ಚಿನ ಆದ್ಯತೆ.
ರಾತ್ರಿಯ ಊಟ: ರಾತ್ರಿ ಊಟವು ಅತ್ಯಂತ ಸರಳವಾಗಿರುತ್ತದೆ. ಹೆಚ್ಚಾಗಿ ದಾಲ್-ರೊಟ್ಟಿ ಅಥವಾ ಕಿಚಡಿಯನ್ನು ಅವರು ಇಷ್ಟಪಡುತ್ತಾರೆ.
ಆಧುನಿಕ ಅಡುಗೆ ಮನೆ
ಇಷ್ಟು ದೊಡ್ಡ ಪ್ರಮಾಣದ ರೊಟ್ಟಿಗಳನ್ನು ತಯಾರಿಸಲು ಆಂಟಿಲಿಯಾದಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ. ಇದು ಒಂದು ಗಂಟೆಯಲ್ಲಿ ಸಾವಿರಾರು ರೊಟ್ಟಿಗಳನ್ನು ನೈರ್ಮಲ್ಯಯುತವಾಗಿ ತಯಾರಿಸುವ ಸಾಮರ್ಥ್ಯ ಹೊಂದಿದೆ. ಅಡುಗೆ ಮನೆಯ ಉಸ್ತುವಾರಿಯನ್ನು ವಿಶ್ವದಾದ್ಯಂತ ತರಬೇತಿ ಪಡೆದ ಪರಿಣತ ಬಾಣಸಿಗರು ನೋಡಿಕೊಳ್ಳುತ್ತಾರೆ.








