ಬೆಂಗಳೂರು: ನಗರದ ಸಿ ವಿ ರಾಮನ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಮಾರ್ಗದ ರಸ್ತೆಯ ಸಂಚಾರ ಒಂದು ತಿಂಗಳು ಬಂದ್ ಮಾಡಲಾಗಿದೆ. ಬಿ ಹೆಚ್ ಇ ಎಲ್ ಜಂಕ್ಷನ್ ನಿಂದ ಯಶವಂತಪುರ ಸರ್ಕಲ್ ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಬಿಡುಗಡೆ ಮಾಡಿದ್ದು, 30 ದಿನಗಳ ಕಾಲ ಬಿ ಹೆಚ್ ಇ ಎಲ್ ಜಂಕ್ಷನ್ ನಿಂದ ಯಶವಂತಪುರ ಸರ್ಕಲ್ ವರೆಗೆ ಸಿ ವಿ ರಾಮನ್ ರಸ್ತೆಯಲ್ಲಿನ ವೈಟ್ ಟಾಪಿಂಗ್ ಕಾಮಗಾರಿಯಿಂದಾಗಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಹೇಳಿದೆ.
ಆ.15ರಂದು ಹೊಸ ದಾಖಲೆ ಬರೆದ ನಮ್ಮ ಮೆಟ್ರೋ: ಒಂದೇ ದಿನ 8.25 ಲಕ್ಷ ಮಂದಿ ಪ್ರಯಾಣ
ವಾಹನ ಸವಾರರು ಈ ಮಾರ್ಗದ ಬದಲಾಗಿ ಮಲ್ಲೇಶ್ವರಂ 18ನೇ ಕ್ರಾಸ್ ಕಡೆಯಿಂದ ಬರುವವರು, ಸದಾಶಿವನಗರ ಪೊಲೀಸ್ ಠಾಣೆ ಸಮೀಪದ ಸರ್ಕಲ್ ಮಾರಮ್ಮ ಜಂಕ್ಷನ್ ಬಳಿ ಎಡತಿರುವು ಪಡೆದು, ಮಲ್ಲೇಶ್ವರಂ ಮಾರ್ಗೋಸಾ ರಸ್ತೆ ಮೂಲಕ 15ನೇ ಕ್ರಾಸ್ ನಲ್ಲಿ ಬಲತಿರುವು ಪಡೆದು ಯಶವಂತಪುರ 8ನೇ ಮುಖ್ಯರಸ್ತೆ ಮೂಲಕ ಯಶವಂತಪುರ ಸರ್ಕಲ್ ಕಡೆಗೆ ತೆರಳುವಂತೆ ಸೂಚಿಸಿದೆ.
ಸಿ ವಿ ರಾಮನ್ ರಸ್ತೆಯಲ್ಲಿ ಮೇಖ್ರಿ ಸರ್ಕಲ್ ಕಡೆಯಿಂದ ಬರುವಂತ ವಾಹನ ಸವಾರರು ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು, ಕುವೆಂಪು ಸರ್ಕಲ್ ಬಿಇಎಲ್ ಸರ್ಕಲ್ ಮೂಲಕ ತೆರಳುವಂತೆ ಹೇಳಿದೆ.
ಇನ್ನೂ ಸಿವಿ ರಾಮನ್ ರಸ್ತೆಯಲ್ಲಿ ಮೇಖ್ರಿ ಸರ್ಕಲ್ ಟು ಸದಾಶಿವನಗರ ಕಡೆಯಿಂದ ಯಶವಂತಪುರ ಕಡೆ ಬರುವಂತವರು, ಬಿ ಹೆಚ್ ಇ ಎಲ್ ಜಂಕ್ಷನ್ ನಲ್ಲಿ ಎಡತಿರುವು ಪಡೆದು, ಸರ್ಕಲ್ ಮಾರಮ್ಮ ದೇವಸ್ಥಾನದ ಮೂಲಕ ಮಾರ್ಗೋಸಾ ರಸ್ತೆಯಲ್ಲಿ ಸಾಗಿ, ಮಲ್ಲೇಶ್ವರಂ 15ನೇ ಕ್ರಾಸ್ ನಲ್ಲಿ ಬಲತಿರುವು ಪಡೆದು, ಯಶವಂತಪುರ 8ನೇ ಮುಖ್ಯರಸ್ತೆ ಮೂಲಕ ಯಶವಂತಪುರ ಸರ್ಕಲ್ ಕಡೆಗೆ ಸಾಗುವಂತೆ ಹೇಳಿದೆ.
ಜನತೆಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ಅಮುಲ್, ಮದರ್ ಡೈರಿ ಹಾಲಿನ ದರ 2 ರೂ ಹೆಚ್ಚಳ | Milk Price Hike